ಅಂತರಾಷ್ಟ್ರೀಯ

ಕ್ಯಾನ್ಸರ್ ರೋಗಕ್ಕೆ ಪಪ್ಪಾಯಿ ಮದ್ದು !

Pinterest LinkedIn Tumblr

3706$_35

ಪಪ್ಪಾಯಿ ಹಣ್ಣು ಅಥವಾ ತಿಂದರೆ ಅಧಿಕ ಉಷ್ಣ ಆಗುತ್ತದೆ,  ಗರ್ಭಿಣಿಯರು ಸೇವಿಸಬಾರದು ಎಂಬ ತಪ್ಪು  ಕಲ್ಪನೆಗಳಿವೆ.  ಸುಲಭವಾಗಿ ಸರ್ವಕಾಲದಲ್ಲಿಯೂ ದೊರೆಯುವ ಪಪ್ಪಾಯಿ ಅಧಿಕ ಪೋಷಕಾಂಶಗಳನ್ನು ಹೊಂದಿದೆ.  ಪ್ರಕೃತಿ ಚಿಕಿತ್ಸೆಯಲ್ಲಿ ವೈದ್ಯರು ದಿನವು ಪಪ್ಪಾಯಿ ಹಣ್ಣನ್ನು ಸೇವಿಸಲು ಸೂಚಿಸುತ್ತಾರೆ. ಈ ಹಣ್ಣು ಜೀರ್ಣಶಕ್ತಿ  ಹೆಚ್ಚಿಸುವುದಲ್ಲದೇ ಆರೋಗ್ಯ ಕಾಪಾಡಿಕೊಳ್ಳಲು ಸಹ ಸಹಾಯಮಾಡುತ್ತದೆ.

ಪಪ್ಪಾಯಿ ಹಣ್ಣಿನ ಕಿತ್ತಳೆ ಬಣ್ಣದ ತಿರುಳಿನಲ್ಲಿ ಅಧಿಕ ಪ್ರಮಾಣದಲ್ಲಿ ಕೆರೋಟಿನ್ಯಾಡ್ಗಳಿವೆ. ಇವು ಸತ್ವಯುತ  ಆಕ್ಸಿಡೆಂಟ್ಗಳಾಗಿರುವುದರಿಂದ ಹೃದಯರೋಗ, ಕ್ಯಾನ್ಸರ್ ನಂತಹ ರೋಗಗಳ ವಿರುದ್ಧ ಸಮರ್ಥವಾಗಿ  ಹೋರಾಡುತ್ತವೆ.  ಜೊತೆಗೆ ಈ  ಹಣ್ಣಿನಲ್ಲಿ ಹೆಚ್ಚು ಪ್ರಮಾಣದಲ್ಲಿ ಎ, ಸಿ, ಮತ್ತು ಇ  ವಿಟಮಿನ್ ಗಳು ಇರುವುದರಿಂದ  ಚರ್ಮ ಹಾಗೂ ಕಣ್ಣಿನ ಆರೋಗ್ಯಕ್ಕೆ ಕೂಡ ಹಣ್ಣಿನ ಸೇವನೆಯು ಒಳ್ಳೆಯದು.

ಪಪ್ಪಾಯಿಯಲ್ಲಿ ಇರುವ ನಾರಿನಂಶ ಮಲಬದ್ಧತೆ ನಿವಾರಿಸಲು ಸಹಾಯಮಾಡುತ್ತದೆ. ಪಪ್ಪಾಯಿ ಹಣ್ಣಿನ ರಸದಿಂದ  ಚರ್ಮಕ್ಕೆ ಮಸಾಜು ಮಾಡಿಕೊಳ್ಳುವುದರಿಂದ ಚರ್ಮವು ನುಣುಪಾಗುತ್ತದೆ ಮತ್ತು ಕಾಂತಿಯುಕ್ತವಾಗುತ್ತದೆ.  ಇಷ್ಟೊಂದು ಆರೋಗ್ಯಕರ ಅಂಶಗಳನ್ನು ಹೊಂದಿರುವ ಪಪ್ಪಾಯಿ ಎಲ್ಲ ಕಾಲದಲ್ಲಿಯೂ ಸುಲಭವಾಗಿ ಕಡಿಮೆ  ಬೆಲೆಯಲ್ಲಿ ದೊರೆಯುತ್ತದೆ.  ಆದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಈ ಹಣ್ಣನ್ನು ತಿನ್ನುವುದನ್ನು ರೂಢಿಸಿಕೊಂಡರೆ ನಿಮ್ಮ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದಾಗಿದೆ.

Write A Comment