ಅಂತರಾಷ್ಟ್ರೀಯ

ಪತ್ನಿಗೆ ಆ್ಯಸಿಡ್‌ ಎರಚಿದ್ದ ಪತಿಗೆ ನ್ಯಾಯಾಲಯ ವಿಧಿಸಿದ ಶಿಕ್ಷೆಯೆಷ್ಟು ಗೊತ್ತಾ..?

Pinterest LinkedIn Tumblr

590acid attack_0_0ಆ್ಯಸಿಡ್‌ ಎರಚಿದ್ದ ಪ್ರಕರಣವೊಂದರಲ್ಲಿ ಆರೋಪಿಗೆ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು ಬರೋಬ್ಬರಿ 117 ವರ್ಷಗಳ ಕಠಿಣ ಜೈಲು ಶಿಕ್ಷೆ  ವಿಧಿಸುವ ಮೂಲಕ ಅಚ್ಚರಿಗೆ ಕಾರಣವಾಗಿದೆ.

ಆರೋಪಿ ಮೊಹಮ್ಮದ್‌ ಅಮ್ಜದ್‌ ಎಂಬಾತ ಕಳೆದ ಡಿಸೆಂಬರ್‌ 7ರಂದು ಲಾಹೋರ್‌ನಿಂದ ಸುಮಾರು 350 ಕಿ.ಮೀ ದೂರದಲ್ಲಿರುವ ಮುಲ್ತಾನ್‌ನಗರದಲ್ಲಿ ತನ್ನ ಹೊಸ ಗಂಡನ ಜತೆ ವಾಸ ಮಾಡುತ್ತಿರುವ ಮಾಜಿ ಪತ್ನಿ ಜವೆದಾನ್‌ ಬೀಬಿ ಮನೆಗೆ ನುಗ್ಗಿ ಆಕೆ ಮತ್ತು ಆಕೆಯ ಪತಿ ಮೊಹಮ್ಮದ್‌ ರಿಯಾಜ್‌ ಅವರಿಗೆ ಆ್ಯಸಿಡ್‌ ಎರಚಿದ್ದ ಎನ್ನಲಾಗಿದೆ.

ಅಮ್ಜದ್‌ ವಿರುದ್ಧ ಸೆಕ್ಷನ್‌ 302, 324 ಮತ್ತು 326–ಬಿ, ಹಾಗೂ ಭಯೋತ್ಪಾದನಾ ನಿಗ್ರಹ ಕಾಯ್ದೆಯ ಸೆಕ್ಷನ್‌ 7ರ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿದ್ದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ಈ ಸಮಯದಲ್ಲಿ ಈತ ತನ್ನಿಂದ ವಿಚ್ಛೇದನ ಪಡೆದ ನಂತರ  ಮತ್ತೊಂದು ವಿವಾಹವಾದ ಪತ್ನಿಗೆ ಪಾಠ ಕಲಿಸುವುದಕ್ಕಾಗಿ ಈ ಕೃತ್ಯ ಎಸಗಿದ್ದೇನೆ ಎಂದು ತಿಳಿಸಿದ್ದ.

ಈ ಪ್ರಕರಣದ ವಿಚಾರಣೆ ನಡೆಸಿದ ಪಾಕ್ ನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ಆತನ ಮೇಲಿನ ಆರೋಪ ಸಾಬೀತಾಗಿದ್ದರಿಂದ 117 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 10 ಲಕ್ಷ  ರೂಪಾಯಿಗಳ ದಂಡ ವಿಧಿಸಿ ಆದೇಶಿಸಿದೆ.

Write A Comment