ಪುಟ್ಟ ಕಂದಮ್ಮನಿಂದ ಹಿಡಿದು ವಯಸ್ಸಾದ ಮಹಿಳೆಯರವರೆಗೂ ಅತ್ಯಾಚಾರ ಪ್ರಕರಣ ನಡೆದಿರುವ ಬಗೆಗೆ ಕೇಳಿದ್ದೀರಿ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು ಮೂವರು ಮಹಿಳೆಯರು ಯುವಕನೊಬ್ಬನನ್ನು ಅಪಹರಿಸಿ ಬಲವಂತವಾಗಿ ಅತ್ಯಾಚಾರ ನಡೆಸಿ ಆಘಾತಕ್ಕೆ ಕಾರಣರಾಗಿದ್ದಾರೆ.
ಹೌದು. ಲಂಡನ್ ನಲ್ಲಿ ಈ ಘಟನೆ ನಡೆದಿದ್ದು ಬಿಎಂಡಬ್ಲ್ಯೂ ಕಾರಿನಲ್ಲಿ ಬಂದ ಮೂವರು ಮಹಿಳೆಯರು ರಸ್ತೆಯ ಅಂಚಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ಆಫ್ರಿಕಾ ಮೂಲದ ವ್ಯಕ್ತಿಯ ಬಳಿ ಕಾರನ್ನು ನಿಲ್ಲಿಸಿ ಯಾವುದೋ ಒಂದು ಅಡ್ರೆಸ್ ಕೇಳಿದ್ದಾರೆ. ನಂತರ ಇದ್ದಕ್ಕಿದ್ದಂತೆ ಹ್ಯಾಂಡ್ ಗನ್ ತೋರಿಸಿ ಯುವಕನನ್ನು ಕಾರಿನಲ್ಲಿ ಹಾಕಿಕೊಂಡು ಅಜ್ಞಾತ ಸ್ಥಳಕ್ಕೆ ಕೊಂಡೊಯ್ದು ವಯಾಗ್ರಾ ಕುಡಿಸಿ ಅತ್ಯಾಚಾರ ನಡೆಸಿದ್ದಾರೆ ಎನ್ನಲಾಗಿದೆ.
ವಿಶೇಷವೆಂದರೆ ಮೂವರೂ ಮಹಿಳೆಯರು ಒಬ್ಬರಾದ ಮೇಲೋಬ್ಬರಂತೆ ಯುವಕನ ಮೇಲೆ ಅತ್ಯಾಚಾರ ನಡೆಸಿ ಆತನ ವೀರ್ಯಾಣುವನ್ನೂ ಪ್ಲಾಸ್ಟಿಕ್ ಕವರ್ ನಲ್ಲಿ ತುಂಬಿಕೊಂಡು ಹೋಗಿದ್ದು ಅಚ್ಚರಿಗೆ ಕಾರಣವಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದ್ದು ಕಾಮುಕ ಮಹಿಳೆಯರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.