ಮನೋರಂಜನೆ

ಅನುರಾಗ್ ಕಶ್ಯಪ್ ನವರ ಮುಂದಿನ ಸಿನೆಮಾದಲ್ಲಿ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ರೋಮ್ಯಾನ್ಸ್

Pinterest LinkedIn Tumblr

virat-kohli-anushka

ಮುಂಬೈ: ವಿರಾಟ್ ಮತ್ತು ಅನುಷ್ಕಾ ಒಟ್ಟಿಗೆ ಓಡಾಡುತ್ತಿರುವುದು ಸಿನೆಮಾ ರಂಗದ ವದಂತಿಯಾದರೆ ಈಗ ಪ್ರೇಕ್ಷಕರು ಇಬ್ಬರನ್ನು ಬೆಳ್ಳಿತೆರೆಯ ಮೇಲೆ ನೋಡುವ ಸುಯೋಗ ಒದಗಿದೆ.

ಪತ್ರಿಕಾ ಘೋಷ್ಠಿಯ ವೇಳೆಯಲ್ಲಿ ಅನುರಾಗ್ ಕಶ್ಯಪ್ ತಮ್ಮ ಮುಂದಿನ ಸಿನೆಮಾದ ಪಾತ್ರವರ್ಗವನ್ನು ಬಿಚ್ಚಿಟ್ಟಿದ್ದಾರೆ. ಮುಂದಿನ ಸಿನೆಮಾಗೆ ಚಿತ್ರರಂಗದ ಹೊರಗಿನವರನ್ನು ಕರೆತರುತ್ತೀರಾ ಎಂಬ ಪ್ರಶ್ನೆಗೆ “ನನ್ನ ಮುಂದಿನ ಸಿನೆಮಾದಲ್ಲಿ ಖಾನ್ ಅಥವಾ ಕಪೂರ್ ಅಥವಾ ಕುಮಾರ್ ಇರುವುದಿಲ್ಲ. ಸಿನೆಮಾ ಉದ್ಯಮದ ಹೊರಗಿನವರು ತ್ರವರ್ಗದಲ್ಲಿರುತ್ತಾರೆ. ಅವರು ಇನ್ಯಾರು ಅಲ್ಲ, ಭಾರತೀಯ ಕ್ರಿಕೆಟ್ ತಂಡದ ಮುಂದಿನ ನಾಯಕ ವಿರಾಟ್ ಕೊಹ್ಲಿ. ಚಿತ್ರದ ನಾಯಕ ನಟಿಯಾಗಿ ಅನುಷ್ಕಾ ಶರ್ಮಾ ಇರುತ್ತಾರೆ” ಎಂದು ಅನುರಾಗ್ ತಿಳಿಸಿದ್ದಾರೆ.

ಈ ಪತ್ರಿಕಾ ಘೋಷ್ಠಿಯ ವೇಳೆಯಲ್ಲಿ ರಣಬೀರ್ ಕಪೂರ್ ಮತ್ತು ಅನುಷ್ಕಾ ಶರ್ಮಾ ಕೂಡ ಇದ್ದರು ಎಂದು ತಿಳಿದುಬಂದಿದೆ. ತಮ್ಮ ಮುಂದಿನ ಸಿನೆಮಾಗೆ ‘ದೆಹಲಿ ಡೆನಿಮ್’ ಎಂದು ಹೆಸರಿಸಲು ಚಿಂತನೆಯಿದೆ ಎಂದು ಅನುರಾಗ್ ತಿಳಿಸಿದ್ದಾರೆ.

Write A Comment