ರಾಷ್ಟ್ರೀಯ

ಹಬ್ಪದ ಆಚರಣೆ ವೇಳೆ ಪೆರಂಬಳುರಿನಲ್ಲಿ ದಲಿತರ ಮತ್ತು ಸವರ್ಣೀಯರ ನಡುವೆ ಗಲಭೆ; ದಲಿತರ ಮನೆಗೆ ಬೆಂಕಿ

Pinterest LinkedIn Tumblr

fire

ತಿರುಚಿ: ಪೆರಂಬಳೂರಿನ ವಿ-ಕಲಥೂರಿನಲ್ಲಿ ಚಿಥಿರೈ ಹಬ್ಬದ ಆಚರಣೆಗಳ ಸಲುವಾಗಿ ದಲಿತರ ಮತ್ತು ಸವರ್ಣೀಯರ ನಡುವೆ ನಡೆದ ಗಲಭೆ ಭಾನುವಾರ ಹಿಂಸಾತ್ಮಕ ರೂಪ ಪಡೆದು ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.

ನಂತರ ಸವರ್ಣೀಯರ ಗುಂಪು ಅಡ್ಡಾದಿಡ್ಡಿ ನುಗ್ಗಿ ದಲಿತರಿಗೆ ಸೇರಿದ ಏಳು ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ದೂರಲಾಗಿದೆ. ಆದರೆ ಯಾವುದೇ ಸಾವು ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಈ ಗ್ರಾಮದಲ್ಲಿ ಒಂದು ಮೈದಾನವಿದ್ದು ಎರಡೂ ಪಂಗಡಗಳು ಅದನ್ನು ಬಳಸುತ್ತಾರೆ. ಭಾನುವಾರ ದಲಿತ ನಿವಾಸಿಗಳು ಮೂಪನಾರ್ ಸ್ವಾಮಿಯ ಗೌರವದಲ್ಲಿ ಹಬ್ಬ ಆಚರಿಸಲು ಮೈದಾನದಲ್ಲಿ ದೊಡ್ಡ ಬ್ಯಾನರ್ ಕಟ್ಟಿದ್ದಾರೆ.

ಅದೇ ದಿನ ಸವರ್ಣೀಯರು ಚಿತ್ರ ಪೂರ್ಣಿಮಾ ಹಬ್ಬವನ್ನು ಆಚರಿಸಲು ಹಾಗು ಮೈದಾನದಲ್ಲಿ ಪೂಜೆಯನ್ನು ನೆರವೇರಿಸಲು ನಿರ್ಧರಿಸಿದ್ದು ಮೈದಾನಕ್ಕೆ ತೆರಳಿ ಬ್ಯಾನರ್ ತೆಗೆಯುವಂತೆ ದಲಿತರಿಗೆ ಹೇಳಿದ್ದಾರೆ. ಇದನ್ನು ದಲಿತರು ನಿರಾಕರಿಸಿದ್ದಕ್ಕೆ ವಾಗ್ವಾದ ಹಿಂಸೆಗೆ ತಿರುಗಿ ಹೊಡೆದಾಟ ಮತ್ತು ಕಲ್ಲು ತೂರಾಟವಾಗಿದೆ. ನಂತರ ಗ್ರಾಮದ ಮುಖಂಡರ ಮಧ್ಯಸ್ಥಿಕೆಯಲ್ಲಿ ಜಗಳ ನಿಂತಿದ್ದರೂ ತದನಂತರ ಸವರ್ಣೀಯರು ದಲಿತರ ಕೇರಿಗೆ ತೆರಳಿ ಏಳು ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದಾರೆ. ನಂತರ ಅಲ್ಲಿಗೆ ತೆರಳಿದ ಪೆರಂಬಳೂರು ಅಗ್ನಿ ಶಾಮಕ ದಳ ಬೆಂಕಿಯನ್ನು ನಂದಿಸಿದೆ.

ಈ ದಾಳಿ ನಡೆಸಿದವರು ಗೋವಿಂದನ್, ಸಮಿಕಣ್ಣು, ಸೆಲ್ವಮಣಿ, ಅಮರ್ಥಾವಲ್ಲಿ, ರಮೇಶ್, ರಾಜಾ ಮತ್ತು ರಾಮಸ್ವಾಮಿ ಎಂದು ಗುರುತಿಸಲಾಗಿದೆ.

ವಿಷಯ ತಿಳಿದೊಡನೆ ಎಸ್ ಪಿ ಸೋನಾಲ್ ಚಂದ್ರ ಮತ್ತು ಸಬ್ ಕಲೆಕ್ಟರ್ ಪಿ ಮಧುಸೂಥನಾಥನ್ ಸ್ಥಳಕ್ಕೆ ತೆರಳಿ ವಿಚಾರಣೆ ನಡೆಸಿದ್ದು, ಸಂತ್ರಸ್ತನೊಬ್ಬನಿಗೆ ಹಸಿರುಮನೆ ಯೋಜನೆಯಡಿ ಮನೆ ಕೊಡುವುದಾಗಿ ಹೇಳಿದ್ದು ಉಳಿದವರಿಗೆ ತಲಾ ೫ ಸಾವಿರ ರೂ ಪರಿಹಾರ ನೀಡಲಾಗಿದೆ.

ಸೋಮವಾರ ಎರಡು ಬಣಗಳು ನೀಡಿರುವ ದೂರನ್ನು ಪರಿಗಣಿಸಿ ಪೊಲೀಸರು ಎರಡು ಸಮುದಾಯದಿಂದ ೪೦ ಜನರನ್ನು ಬಂಧಿಸಿದ್ದಾರೆ. ಮತ್ತೆ ಹಿಂಸೆ ಮರುಕಳಿಸದಂತೆ ದೊಡ್ಡ ಪೊಲೀಸ್ ಪಡೆಯನ್ನು ಗ್ರಾಮದಲ್ಲಿ ನಿಯೋಜಿಸಲಾಗಿದೆ.

Write A Comment