ಖ್ಯಾತ ನಟನೊಬ್ಬ ಹಾಡಹಗಲೇ ಸಾರ್ವಜನಿಕ ಸ್ಥಳದಲ್ಲಿ ತನ್ನ ಗೆಳತಿಯ ಟಾಪ್ ಒಳಗೆ ಕೈ ಹಾಕುವಾಗ ಮಾಧ್ಯಮಗಳ ಕ್ಯಾಮರಾ ಕಣ್ಣಿಗೆ ಸಿಕ್ಕಿ ಬಿದ್ದಿದ್ದಾರೆ.
ಹಾಲಿವುಡ್ ನಟ ಗೆರಾಲ್ಡ್ ಬಟ್ಲರ್ ತಮ್ಮ ಬಹು ಕಾಲದ ಗೆಳತಿ ಮೋರ್ಗನ್ ಬ್ರೌನ್ ಜೊತೆ ಲಾಸ್ ಏಂಜಲೀಸ್ ನ ಮಾಲ್ಬಿ ಪಾರ್ಕಿನಲ್ಲಿ ಬೆಳಗಿನ ವಾಕ್ ಮಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ರೋಮ್ಯಾಂಟಿಕ್ ಮೂಡಿಗೆ ತೆರಳಿದ್ದು, ಗೆಳತಿಯನ್ನು ಅಪ್ಪಿಕೊಂಡು ಆಕೆಯ ಟಾಪ್ ಒಳಗೆ ಕೈ ಹಾಕಿದ್ದಾರೆ.
ಇವರನ್ನೇ ಹಿಂಬಾಲಿಸುತ್ತಿದ್ದ ಹವ್ಯಾಸಿ ಛಾಯಾಗ್ರಾಹಕರು ಇದೇ ಸದಾವಕಾಶಕ್ಕೆ ಕಾದಿದ್ದವರಂತೆ ಫೋಟೋಗಳನ್ನು ಕ್ಲಿಕ್ಕಿಸಿದ್ದಾರೆ. ಇದರಿಂದ ಗೆರಾಲ್ಡ್ ಬಟ್ಲರ್ ಮತ್ತು ಮೋರ್ಗನ್ ಬ್ರೌನ್ ಕೆಲ ಹೊತ್ತು ಗಲಿಬಿಲಿಗೊಂಡಿದ್ದು ಬಳಿಕ ಸಾವರಿಸಿಕೊಂಡು ಅಲ್ಲಿಂದ ತೆರಳಿದ್ದಾರೆ. ಪಾಶ್ಚಾತ್ಯ ದೇಶದಲ್ಲಿ ಅದರಲ್ಲೂ ಅಮೆರಿಕಾದಲ್ಲಿ ಸಾರ್ವಜನಿಕವಾಗಿ ಇಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಸಾಮಾನ್ಯ ಸಂಗತಿಯಾದರೂ ಒಬ್ಬ ಸೆಲೆಬ್ರಿಟಿ ಸಾರ್ವಜನಿಕ ಸ್ಥಳದಲ್ಲಿ ಇಂತಹ ಕೃತ್ಯ ಮಾಡಿರುವುದಕ್ಕೆ ಸಾಮಾಜಿಕ ಜಾಲ ತಾಣಗಳಲ್ಲಿ ಟೀಕೆ ವ್ಯಕ್ತವಾಗಿದೆ.
-ಕನ್ನಡ ದುನಿಯಾ