ಅಂತರಾಷ್ಟ್ರೀಯ

ವಿವಾಹ ವಿಚ್ಚೇದನಕ್ಕೆ ಲೈಂಗಿಕ ಅತೃಪ್ತಿಯೂ ಕಾರಣ..!

Pinterest LinkedIn Tumblr

122t1larg.sex.downgrade.ts

ವೈವಾಹಿಕ ಜೀವನದಲ್ಲಿ ಸಾಮರಸ್ಯದ ಕೊರತೆಯ ಕಾರಣಕ್ಕೆ ಹಲವರು ವಿಚ್ಚೇದನ ಪಡೆಯುತ್ತಿದ್ದು, ಇದರಲ್ಲಿ ಲೈಂಗಿಕ ಅತೃಪ್ತಿಯೂ ಒಂದು ಪ್ರಮುಖ ಕಾರಣವೆಂಬ ಮಹತ್ವದ ಮಾಹಿತಿ ಅಧ್ಯಯನದಿಂದ ಬೆಳಕಿಗೆ ಬಂದಿದೆ. ಸಮಾಜದಲ್ಲಿ ಲೈಂಗಿಕತೆ ಕುರಿತು ಮಡಿವಂತಿಕೆ ಇರುವ ಕಾರಣ ಇದು ಬಹಿರಂಗವಾಗುತ್ತಿಲ್ಲವೆಂಬ ಅಂಶವೂ ವ್ಯಕ್ತವಾಗಿದೆ.

ಒತ್ತಡದ ಜೀವನದ ಕಾರಣಕ್ಕಾಗಿ ಸಂಗಾತಿಯನ್ನು ಲೈಂಗಿಕವಾಗಿ ತೃಪ್ತಿಪಡಿಸದಿರುವುದರಿಂದ ವಿವಾಹಯೇತರ ಸಂಬಂಧಗಳಿಗೆ ಗಂಡು ಹಾಗೂ ಹೆಣ್ಣು ಮೊರೆ ಹೋಗುತ್ತಿದ್ದು, ಇದರಿಂದಾಗಿ ಸಂಸಾರದಲ್ಲಿ ಅಶಾಂತಿ ನೆಲೆಸಿ ಅಂತಿಮವಾಗಿ ವಿವಾಹ ವಿಚ್ಚೇದನಕ್ಕೆ ಕಾರಣವಾಗುತ್ತದೆ ಎಂಬುದು ತಜ್ಞರ ಅಭಿಮತ. ಇಂದಿನ ಒತ್ತಡದ ಬದುಕಿನಲ್ಲಿ ದುಡಿಮೆಯೇ ಪ್ರಧಾನವಾಗಿ ಇತರೆ ವಿಷಯಗಳು ಗೌಣವಾಗುತ್ತಿರುವ ಕಾರಣ ಸದಾ ಅತೃಪ್ತಿಯಲ್ಲೇ ಬದುಕುವಂತಾಗಿದೆ ಎನ್ನಲಾಗಿದೆ.

ಈ ಒತ್ತಡದಿಂದ ಹೊರ ಬರಲು ಮದ್ಯ, ಮಾದಕ ದ್ರವ್ಯಗಳಿಗೆ ಯುವ ಜನತೆ ಶರಣಾಗುತ್ತಿದ್ದು, ಇದರಿಂದಾಗಿ ಲೈಂಗಿಕ ಸಾಮರ್ಥ್ಯ ಕಡಿಮೆಯಾಗುತ್ತಿದೆ. ಇದರಿಂದಾಗಿ ಸಂಗಾತಿಯನ್ನು ತೃಪ್ತಿಪಡಿಸಲು ಅಸಮರ್ಥರಾಗುವ ಮೂಲಕ ಕೀಳರಿಮೆಯನ್ನು ಅನುಭವಿಸುತ್ತಾರೆಂದು ತಜ್ಞರು ಎಚ್ಚರಿಸುತ್ತಾರೆ. ಸಾಂಸಾರಿಕ ಜೀವನದಲ್ಲಿ ಲೈಂಗಿಕತೆಯೂ ಬಹು ಮುಖ್ಯ ಎಂಬುದನ್ನು ಮರೆಯದೇ ಒತ್ತಡದ ಬದುಕಿನಿಂದ ಹೊರ ಬಂದು ಸಂಗಾತಿಯೊಂದಿಗೆ ಸೇರಿದರೆ ಜೀವನ ಸುಂದರವಾಗಿರುತ್ತದೆ ಎಂಬುದು ತಜ್ಞರ ಅಭಿಮತ.

ಲೈಂಗಿಕ ವಿಷಯಗಳ ಕುರಿತು ಮಡಿವಂತಿಕೆ ತೊರೆದು ಸಂಗಾತಿಯೊಂದಿಗೆ ಮುಕ್ತವಾಗಿ ಚರ್ಚಿಸುವುದರ ಮೂಲಕ ತೊಂದರೆಯಿದ್ದಲ್ಲಿ ವೈದ್ಯರ ಸಲಹೆಯಿಂದ ಬಗೆಹರಿಸಿಕೊಳ್ಳಬೇಕು ಎನ್ನುವ ತಜ್ಞರು ಇದರಿಂದಾಗಿ ವಿವಾಹಯೇತರ ಸಂಬಂಧಗಳಿಗೂ ತೆರೆ ಬೀಳುತ್ತದೆ ಎನ್ನುತ್ತಾರೆ. ಲೈಂಗಿಕ ವಿಷಯಗಳ ಕುರಿತು ಮಾತನಾಡುವುದೇ ತಪ್ಪು ಎಂಬ ಭಾವನೆ ವಿದ್ಯಾವಂತರಲ್ಲೂ ಮನೆ ಮಾಡಿರುವುದು ಅಧ್ಯಯನದ ವೇಳೆ ಕಂಡು ಬಂದಿರುವ ಮತ್ತೊಂದು ಪ್ರಮುಖ ಅಂಶ.
-ಕನ್ನಡ ದುನಿಯಾ

Write A Comment