ಮನೋರಂಜನೆ

ಶತಮಾನದ ಬಾಕ್ಸಿಂಗ್ ಕದನ‍: 1000 ಕೋಟಿಗೆ ಒಡೆಯನಾದ ಮೇವೆದರ್

Pinterest LinkedIn Tumblr

box

ಲಾಸ್‍ವೇಗಸ್: ಅಮೆರಿಕಾದ ಲಾಸ್‍ವೇಗಸ್ ಇಂದು ನಡೆದ ಐತಿಹಾಸಿಕ ವಿಶ್ವ ಬಾಕ್ಸಿಂಗ್ ಮೆಗಾ ಫೈಟ್‌ನಲ್ಲಿ ಅಮೆರಿಕಾದ ಫ್ಲಾಯ್ಡ್ ಮೇವೆದರ್ ಜಯಶಾಲಿಯಾಗಿ ಹೊರಹೊಮ್ಮಿದ್ದಾರೆ. ಫಿಲಿಪೈನ್ಸ್‌ನ ಮ್ಯಾನಿ ಪ್ಯಾಕ್ವಿಯೋರವರನ್ನು ಸೋಲಿಸಿ ಚಾಂಪಿಯನ್ ಆದ ಮೇವದರ್ ಸುಮಾರು 1142 ಕೋಟಿ ಮೊತ್ತವನ್ನು ಬಾಚಿಕೊಂಡಿದ್ದಾರೆ. ಈ ಮೂಲಕ ಮೇವದರ್ ಈ ಶತಮಾನದ ಶ್ರೇಷ್ಠ ಬಾಕ್ಸರ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಭಾರತೀಯ ಕಾಲಮಾನ ಭಾನುವಾರ ಬೆಳಗ್ಗೆ 8.30ಕ್ಕೆ ಆರಂಭವಾದ ಪಂದ್ಯ 10.15ಕ್ಕೆ ಮುಕ್ತಾಯವಾಯಿತು.

ಮೊದಲಿನಿಂದಲೂ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಫ್ಲಾಯ್ಡ ಮೇವೆದರ್‌ ತಮ್ಮ ಪ್ರತಿಸ್ಪರ್ಧಿ ಮ್ಯಾನಿ ಪ್ಯಾಕ್ವಿಯೋ 118-110 ,116-112, 116-112 ಅಂತರದಿಂದ ಸೋಲಿಸಿ ಗೆಲುವಿನ ಮಾಲೆ ಧರಿಸಿದರು. 12 ಸುತ್ತುಗಳ ಪಂದ್ಯದಲ್ಲಿ ಮೇವೆದರ್ 9 ಸುತ್ತುಗಳಲ್ಲಿ ಪ್ರಾಬಲ್ಯವನ್ನು ಮೆರೆದರು.

ಪಂದ್ಯ ಸೋತು ರನ್ನರ್ ಅಪ್ ಪ್ರಶಸ್ತಿ  ಮ್ಯಾನಿ ಪ್ಯಾಕ್ವಿಯೋ ಕೂಡ 761 ಕೋಟಿ ರೂಪಾಯಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಪಂದ್ಯವನ್ನು 16 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದರು ಎಂದು ಹೇಳಲಾಗುತ್ತಿದೆ.

ಸೋತಿರುವ ಪ್ಯಾಕ್ವಿಯೋ, ಸೆಪ್ಟೆಂಬರ್ ನಲ್ಲಿ ಮತ್ತೆ ನಮ್ಮಿಬ್ಬರ ನಡುವೆಯೇ ಹೋರಾಟ ನಡೆಯಲಿದೆ. ಆಗ ಗೆಲುವು ಸಾಧಿಸುತ್ತೇನೆ ಎಂದು ಘೋಷಿಸಿದ್ದಾರೆ.
– ವೆಬ್ ದುನಿಯಾ

Write A Comment