ಕರ್ನಾಟಕ

ದಾಳಿಂಬೆ ಬೆಳೆಗಾರರ 335 ಕೋಟಿ ಹಣವನ್ನು ಶೀಘ್ರ ಬಿಡುಗಡೆ ಮಾಡಿ

Pinterest LinkedIn Tumblr

hdkone

ಹುಬ್ಬಳ್ಳಿ,ಮೇ3-ಉತ್ತರ ಕರ್ನಾಟಕದ ದಾಳಿಂಬೆ ಬೆಳೆಗಾರರ 335 ಕೋಟಿ ಹಣವನ್ನು ಶೀಘ್ರ ಬಿಡುಗಡೆ ಮಾಡಬೇಕೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.  ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾಳಿಂಬೆ ಬೆಳೆ ನಷ್ಟದಿಂದ ರೈತರು ಕಂಗಲಾಗಿದ್ದು , ಅವರ ನೆರವಿಗೆ ಸರ್ಕಾರ ಬಾರದಿರುವುದು ದುರದೃಷ್ಟಕರ ಸಂಗತಿ. ತಮಗೆ ದಯಾ ಮರಣ ನೀಡಬೇಕೆಂದು ರೈತರು ರಾಜ್ಯಪಾಲರಲ್ಲಿ ಮನವಿ ಮಾಡಿದ್ದಾರೆ. ರಾಜ್ಯ ಸರ್ಕಾರಕ್ಕೆ ನಾಚಿಕೆಯಾಗಬೇಕೆಂದರು.  ಎರಡು ವರ್ಷದ ಸರ್ಕಾರದ ಸಾಧನೆ ಶೂನ್ಯ ಎಂದು ಗೇಲಿ ಮಾಡಿದ

ಅವರು, ಅನ್ನಭಾಗ್ಯ ಯೋಜನೆ ಕೊಡುವ ನೆಪದಲ್ಲಿ ಸರ್ಕಾರ ದರಿದ್ರ ಭಾಗ್ಯ ಕೊಡುತ್ತಿದೆ  ಎಂದು ಲೇವಡಿ ಮಾಡಿದರು.  ಸಮುದಾಯ ಪರಿವರ್ತನೆ ಸಮಾಜದ ಎಸ್.ಆರ್.ಹಿರೇಮಠ್ ಅವರು  ಉತ್ತಮ ಕೆಲಸ ನಿರ್ವಹಿಸುತ್ತಿದ್ದು, ಭ್ರಷ್ಟ ರಾಜಕಾರಣಿಗಳ ಬಗ್ಗೆ ಜಾಲಾಡುತ್ತಿದ್ದಾರೆ. ಇದರಲ್ಲಿ ಕೆಲವರು ವಿನಾಕಾರಣ ರಾಜಕೀಯ ಮಾಡುತ್ತಿದ್ದಾರೆ. ಬಿಬಿಎಂಪಿ ವಿಭಜನೆಗೆ  ಆಸ್ಪದ ನೀಡುವುದಿಲ್ಲ. ಈ ಬಗ್ಗೆ ಸದನದ ಹೊರಗು ಹಾಗೂ ಒಳಗೂ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು. ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಕೇಂದ್ರದ ಎನ್‌ಡಿಎ ಸರ್ಕಾರದ ವೈಫಲ್ಯಗಳ ಬಗ್ಗೆ ಪ್ರಧಾನಿ ಮೋದಿಗೆ ಬುದ್ದಿ ಮಾತು ಹೇಳುತ್ತಿದ್ದಾರೆ. ಅದನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಹೇಳಿದರೆ ಒಳಿತು ಎಂದರು.  ರಾಜ್ಯದಲ್ಲಿ ಸರ್ಕಾರ ಸಂಪೂರ್ಣ ನಿಷ್ಕ್ರಿಯಗೊಂಡಿದ್ದು, ಈ ಸಂಬಂಧ ತಮ್ಮ ಪಕ್ಷದಿಂದ ಹೋರಾಟ ಮಾಡಲಾಗುವುದು ಎಂದು ಹೇಳಿದರು.  ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ , ಶಾಸಕ ಎನ್.ಎಚ್.ಕೋನರೆಡ್ಡಿ , ಮಾಜಿ ಸಚಿವ ಹನುಮಂತಪ್ಪ  ಆಲ್ಕೊಡ್ ಮುಂತಾದವರು ಈ ಸಂದರ್ಭದಲ್ಲಿದ್ದರು.
-ಈ ಸಂಜೆ

Write A Comment