ಅಂತರಾಷ್ಟ್ರೀಯ

ನೇಪಾಳದಲ್ಲಿ ಗರ್ಭಿಣಿಯರ ಸ್ಥಿತಿ ಅಧೋಗತಿ

Pinterest LinkedIn Tumblr

Indian-In-Nepal-Earthqu

ನೇಪಾಳ,ಮೇ3- ಒಂದೆಡೆ ಆಹಾರಕ್ಕಾಗಿ ಪರದಾಟ, ಇನ್ನೊಂದೆಡೆ ವಸತಿಗಾಗಿ ನೆಲೆ ನಿಲ್ಲಲು ಹೋರಾಟ. ಇದರ ಬೆನ್ನಲ್ಲೇ ಸಾಂಕ್ರಾಮಿಕ ರೋಗದ ಭೀತಿ. ಆರೋಗ್ಯ ಸಮಸ್ಯೆ,ಮೂಲಭೂತ ಸೌಕರ್ಯಗಳ ಕೊರತೆ. ಇದೆಲ್ಲ ನಡೆಯುತ್ತಿರುವುದು ನಮ್ಮ ನೆರೆ ರಾಷ್ಟ್ರ ನೇಪಾಳದಲ್ಲಿ. ಭೂಕಂಪದ ತೀವ್ರತೆಯ ಹೊಡೆತಕ್ಕೆ  ಸಿಕ್ಕಿ ನಲುಗಿ, ಚೇತರಿಕೆ ಕಾಣಲು ಸಾಹಸಪಡುತ್ತಿರುವ ನೇಪಾಳದಲ್ಲಿ ಇನ್ನೊಂದು ಪ್ರಮುಖ ಸಮಸ್ಯೆ ತಲೆದೂರಿ ಸರ್ಕಾರಕ್ಕೆ ತಲೆನೋವಾಗಿದೆ.  ನೇಪಾಳದ ಗರ್ಭಿಣಿಯರು ಇಲ್ಲಿ ದಿನೇ ದಿನೇ ಸೂಕ್ತ ನೆಲೆ, ವೈದ್ಯಕೀಯ ಚಿಕಿತ್ಸೆ , ಆಹಾರ ಭದ್ರತೆ ಇಲ್ಲದೆ ಪರದಾಡುವ ಸ್ಥಿತಿ ಶೋಚನೀಯವಾಗಿದೆ.

ಇವರ ರೋಧನೆ ಮುಗಿಲುಮುಟ್ಟುವಂತಿದ್ದು, ನೇಪಾಳದ ರಸ್ತೆಬದಿಗಳಲ್ಲಿ ತಮ್ಮ ವಾಸ್ತವ್ಯ  ಹೂಡಿದ್ದಾರೆ.

ನೇಪಾಳದ ಕಠ್ಮಂಡು ಸೇರಿದಂತೆ ವಿವಿಧ ಪ್ರಮುಖ ನಗರಗಳ ಆಸ್ಪತ್ರೆ ಆವರಣಗಳು ತುಂಬಿ ಹೋಗಿವೆ. ಸುಮಾರು 50 ಸಾವಿರ ಗರ್ಭಿಣಿಯರಿದ್ದು, ಇಲ್ಲಿನ ಸರ್ಕಾರ ವಿದೇಶದಿಂದ ವೈದ್ಯರನ್ನು ಕರೆಸಿಕೊಳ್ಳುತ್ತಿದ್ದು, ತುರ್ತು ಚಿಕಿತ್ಸೆಗೆ ಮಾತ್ರ ಆದ್ಯತೆ ನೀಡುತ್ತಿದ್ದಾರೆ.  ಸಮಸ್ಯೆ ದಿನೇ ದಿನೇ ಉಲ್ಬಣಗೊಳ್ಳುತ್ತಿದ್ದು, ನೆರೆ ರಾಷ್ಟ್ರಗಳು ಸಹಾಯ ಹಸ್ತ ಚಾಚಿವೆ.   ಹೆರಿಗೆಗೆ ಆಸ್ಪತ್ರೆಗಳಲ್ಲಿ ಅವಕಾಶವಿದ್ದರೂ ಹೆರಿಗೆಯಾದ ಮೂರ್ನಾಿಲ್ಕು ಗಂಟೆಗಳಲ್ಲಿ ಗರ್ಭಿಣಿಯರನ್ನು  ಡಿಸ್‌ಚಾರ್ಜ್ ಮಾಡಲಾಗುತ್ತಿದೆ. ಬೀದಿ ಬದಿಯ ಸಾಮಾನ್ಯ ಟೆಂಟ್‌ಗಳಲ್ಲೇ ಬಾಣಂತಿಯರು ಸುಧಾರಿಸಿಕೊಳ್ಳಬೇಕಾಗಿದೆ.  ಹಸುಗೂಸುಗಳನ್ನು ಹೊತ್ತು ಆಸ್ಪತ್ರೆಯಿಂದ ಹೊರ ಬಂದ ಗರ್ಭಿಣಿಯರು ಭಯಭೀತರಾಗಿ ಆಸ್ಪತ್ರೆ ಆವರಣದಲ್ಲೇ ಬೀಡುಬಿಟ್ಟಿದ್ದಾರೆ.  ಒಂದೆಡೆ ಭಯ, ಮತ್ತೊಂದೆಡೆ ಹರಡುತ್ತಿರುವ ಸಾಂಕ್ರಾಮಿಕ ರೋಗಗಳು,  ವಸತಿ ಸಮಸ್ಯೆ ಇವುಗಳ ನಡುವೆ ಬಾಣಂತಿಯರು, ಗರ್ಭಿಣಿಯರ ರೋಧನ ಹೇಳತೀರದಾಗಿದೆ.  ಎಲ್ಲ ಸಮಸ್ಯೆಗಳಿಗೆ ನೆರೆ ರಾಷ್ಟ್ರಗಳು ಸೇರಿದಂತೆ  ಇಡೀ ವಿಶ್ವವೇ  ಸಹಾಯ ಹಸ್ತ ನೀಡುವ ಜೊತೆಗೆ ನೆರವಿನ ಸಾಂತ್ವಾನ ನೇಪಾಳಕ್ಕೆ ಅಗತ್ಯವಿದೆ.
-ಈ ಸಂಜೆ

Write A Comment