ಅಂತರಾಷ್ಟ್ರೀಯ

ಹೊರಟಿದ್ದು ಮದುವೆಗೆ, ಸೇರಿದ್ದು ಮಸಣಕ್ಕೆ

Pinterest LinkedIn Tumblr

bus

ಸಿಂಧ್: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಭೀಕರ ದುರಂತ ಸಂಭವಿಸಿದ್ದು ಮದುವೆ ದಿಬ್ಬಣವನ್ನು ಹೊತ್ತೊಯ್ಯುತ್ತಿದ್ದ ಬಸ್‌ ಬೆಂಕಿಗಾಹುತಿಯಾಗಿ ಮೂವರು ಮಕ್ಕಳು ಹಾಗೂ ಏಳು ಮಹಿಳೆಯರು ಸೇರಿದಂತೆ 11 ಜನರು ಸಜೀವವಾಗಿ ದಹನವಾಗಿದ್ದಾರೆ. ಬಸ್‌ನಲ್ಲಿದ್ದ ಇತರ 34 ಜನರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಬೆಂಕಿ ಹತ್ತುತ್ತಿದ್ದಂತೆ ಬಸ್‌ನಿಂದ ಜಿಗಿದು ಬಹುಮಂದಿ ಪುರುಷರು ಅಪಾಯದಿಂದ ಪಾರಾಗಿದ್ದಾರೆ. ವಧು ಮತ್ತು ವರ  ಬೇರೆ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ 32 ಜನರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇಬ್ಬರು ಸಣ್ಣಪುಟ್ಟ ಗಾಯಗಳಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳೆದ ಜನವರಿ ತಿಂಗಳಲ್ಲಿ ಸಹ ಪಾಕಿಸ್ತಾನದಲ್ಲಿ ಭೀಕರ ಬಸ್ ಅಪಘಾತ ನಡೆದಿತ್ತು. ಮಲೀರ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಬಸ್ ಟ್ಯಾಂಕರ್ ಒಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಹೊತ್ತಿಕೊಂಡ ಬೆಂಕಿಯಲ್ಲಿ ಒಟ್ಟು  62 ಜನರು ದಾರುಣವಾಗಿ ಸಾವಿಗೀಡಾಗಿದ್ದರು.
– ವೆಬ್ ದುನಿಯಾ

Write A Comment