ಮನೋರಂಜನೆ

ಬೌಲರ್‌ಗಳ ಪ್ರಾಬಲ್ಯ : ಒಂದೇ ದಿನದಲ್ಲಿ 18 ವಿಕೆಟ್‌ಗಳ ಪತನ

Pinterest LinkedIn Tumblr

18-wicket

ಬಾರ್ಬಡೋಸ್, ಮೇ 3- ಮೊದಲ ಇನ್ನಿಂಗ್ಸ್‌ನ ಮುನ್ನಡೆ ಪಡೆದರೂ ಕೂಡ ವಿಂಡೀಸ್ ಬೌಲರ್‌ಗಳ ದಾಳಿಗೆ ಸಿಲುಕಿ ನಲುಗಿರುವ ಇಂಗ್ಲೆಂಡ್ 2ನೆ ಟೆಸ್ಟ್‌ನ 2ನೇ ದಿನದಾಟಕ್ಕೆ 5 ವಿಕೆಟ್‌ಗಳನ್ನು ಕಳೆದುಕೊಂಡು 39 ರನ್‌ಗಳಿಸಿ ಒಟ್ಟಾರೆ 105 ರನ್‌ಗಳ ಮುನ್ನಡೆ ಪಡೆದು ಸಂಕಷ್ಟಕ್ಕೆ ಸಿಲುಕಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟ್ ಮಾಡಲು  ಬಂದ ಇಂಗ್ಲೆಂಡ್‌ನ ಆರಂಭಿಕ ಆಟಗಾರರಾದ   ಕುಕ್ (4) , ಜೋಯಾಥಾನ್ ಟ್ರಾಟ್ (9)  ಎರಡಂಕಿ ದಾಟುವ ಮುನ್ನವೇ ಪೆವಿಲಿಯನ್ ಸೇರಿ ಇಂಗ್ಲೆಂಡ್‌ಗೆ ಆಘಾತ ನೀಡಿದರು. ನಂತರ ಬಂದ ಇಯಾನ್ ಬೆಲ್ ಖಾತೆ ತೆರೆಯುವ ಮುನ್ನವೇ

ಟೇಲರ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರೆ, ಜೋ ರೂಟ್   1 ರನ್ ಸಂಪಾದನೆ ಮಾಡಿ  ಹೋಲ್ಡರ್ ಬೌಲಿಂಗ್‌ನಲ್ಲಿ  ಔಟಾದಾಗ ಇಂಗ್ಲೆಂಡ್ 28 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಮೊದಲ ಇನ್ನಿಂಗ್ಸ್‌ನಲ್ಲಿ ಅದ್ಭುತ ಆಟ ಪ್ರದರ್ಶಿಸಿ  ಅರ್ಧಶತಕ ದಾಖಲಿಸಿದ್ದ ಮೊಹಿನ್ ಅಲಿ ಹಾಗು ತಾಳ್ಮೆಯ ಆಟಕ್ಕೆ ಮುಂದಾಗಿದ್ದ ಬ್ಯಾಲೆನ್ಸ್  ಇನ್ನಿಂಗ್ಸ್ ಕಟ್ಟುವ  ಭರವಸೆ ಮೂಡಿಸಿದರಾದರೂ ಈ ಜೋಡಿಯನ್ನು ಪೆರುಮಲ್ ಬೇರ್ಪಡಿಸಿದರು.  2 ಆಕರ್ಷಕ ಬೌಂಡರಿ ಮೂಲಕ 8 ಗಳಿಸಿದ್ದ ಅಲಿ ಪೆರುಮಾಲ್ ಬೌಲಿಂಗ್‌ನಲ್ಲಿ ಕ್ಲೀನ್‌ಬೌಲ್ಡ್ ಆದರು.  ದಿನದಾಟದ ಅಂತ್ಯಕ್ಕೆ ಬ್ಯಾಲೆನ್ಸ್ (12) ಹಾಗೂ ಸ್ಟ್ರೋಕ್ಸ್ (0) ಕ್ರೀಸ್‌ನಲ್ಲಿದ್ದಾರೆ.

ವಿಂಡೀಸ್ ಪರದಾಟ:
ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ನೀಡಿದ 257 ರನ್‌ಗಳ ಗುರಿಯನ್ನು ಬೆನ್ನಟ್ಟಿದ  ದಿನೇಶ್ ರಾಮ್‌ದೀನ್ ಪಡೆಯನ್ನು ಇಂಗ್ಲೆಂಡ್ ವೇಗಿ ಅಂಡರ್ಸನ್ (6 ವಿಕೆಟ್)  ತಮ್ಮ ಬೌಲಿಂಗ್ ಜಾದೂವಿನಿಂದ ಕಟ್ಟಿ ಹಾಕಿದರು.  ವಿಂಡೀಸ್‌ನ  ಅಗ್ರಕಮಾಂಕದ ನಾಲ್ವರು ಬ್ಯಾಟ್ಸ್‌ಮನ್‌ಗಳು ಎರಡಂಕಿಯನ್ನು ದಾಟದೆ ತಂಡದ ಮೊತ್ತ 37 ರನ್‌ಗಳಾಗುವಷ್ಟರಲ್ಲಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು.

ಚಂದ್ರಪಾಲ್- ಬ್ಲಾಕ್‌ವುಡ್ ಆಸರೆ:
ಸಂಕಷ್ಟದಲ್ಲಿದ್ದ ವಿಂಡೀಸ್‌ಗೆ ಅನುಭವಿ ಆಟಗಾರ  ಚಂದ್ರಪಾಲ್ ಹಾಗೂ ಬ್ಲಾಕ್‌ವುಡ್ ಆಸರೆಯಾದಂತೆ ಬ್ಯಾಟಿಂಗ್ ಬೀಸಿ ಇಂಗ್ಲೆಂಡ್ ಬೌಲರ್‌ಗಳನ್ನು ಕೊಂಚ ಹೊತ್ತು ಕಾಡಿದರು. ಆದರೆ 25 ರನ್ ಗಳಿಸಿದ್ದ ಚಂದ್ರಪಾಲ್‌ರನ್ನು ರೂಟ್ ಔಟ್ ಮಾಡಿದ ನಂತರ ಬಂದ ನಾಯಕ ರಾಮ್‌ದೀನ್ (13) ಹಾಗೂ ಬ್ಲಾಕ್‌ವುಡ್ (85) ಭಾರೀ ಇನ್ನಿಂಗ್ಸ್ ಕಟ್ಟುವ ಆಸೆ ಮೂಡಿಸಿದರಾದರೂ ಇಂಗ್ಲೆಂಡ್ ಬೌಲರ್‌ಗಳ ಶಿಸ್ತುಬದ್ಧ ಬೌಲಿಂಗ್ ಎದುರು ತಲೆದೂಗಿದರು. ನಂತರ ಬಂದ ಬಾಲಂಗೋಚಿಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲದೆ 189 ರನ್‌ಗಳಿಗೆ ಅಲೌಟಾಯಿತು.
ಸ್ಕೋರ್ ವಿವರ: ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 257, ದ್ವಿತೀಯ ಇನ್ನಿಂಗ್ಸ್ 39/5
ವೆಸ್ಟ್‌ಇಂಡೀಸ್ : ಮೊದಲ ಇನ್ನಿಂಗ್ಸ್ 189
-ಈ ಸಂಜೆ

Write A Comment