ರಾಷ್ಟ್ರೀಯ

ಡೀಸೆಲ್ ಕದ್ದು ಸಿಕ್ಕಿ ಬಿದ್ದ ‘ಕಳ್ಳ’ ಪೊಲೀಸ್

Pinterest LinkedIn Tumblr

1505desail

ನಿಲ್ಲಿಸಿರುವ ವಾಹನಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ಕದಿಯುವುದು ಮಾಮೂಲಾಗಿ ಬಿಟ್ಟಿದೆ. ಆದರೆ ಇಲ್ಲೊಬ್ಬ ಪೊಲೀಸ್ ಅಧಿಕಾರಿ ಪೊಲೀಸ್ ಭದ್ರತಾ ಪಡೆಯ ವಾಹನದಿಂದಲೇ ಡೀಸೆಲ್ ಕದಿಯುವ ಮೂಲಕ ತನ್ನ ‘ಕರ್ತವ್ಯಪ್ರಜ್ಞೆ’ಗೆ ಸಾಕ್ಷಿಯಾಗಿದ್ದಾನೆ.

ಹೌದು. ಬಿಹಾರದ ಪಾಟ್ನಾದಲ್ಲಿ ವಿಐಪಿ ಭದ್ರತಾ ಪಡೆಯ ಪೊಲೀಸ್ ಅಧಿಕಾರಿಯೊಬ್ಬ ಭದ್ರತಾ ವಾಹನದಿಂದಲೇ ಡೀಸೆಲ್ ಕದಿಯುವಾಗ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು ಹಾಡಹಗಲೇ ಅಧಿಕಾರಿಯೊಬ್ಬ ಈ ರೀತಿ ಡೀಸೆಲ್ ಕದ್ದಿರುವುದು ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ. ಇಲ್ಲಿನ ಗಾಂಧಿ ಮೈದಾನದ ಬಳಿ ವಾಹನ ನಿಲ್ಲಿಸಿದ್ದಾಗ ಪೊಲೀಸ್ ಈ ಕೃತ್ಯ ಎಸಗಿದ್ದು ಎಲ್ಲರ ಎದುರಿನಲ್ಲಿಯೇ ಸಿಕ್ಕಿ ಬಿದ್ದಿದ್ದಾನೆ.

ವಿಶೇಷವೆಂದರೆ ಕಳ್ಳರನ್ನು ಹಿಡಿಯಬೇಕಾದ ಈ ಪೊಲೀಸ್ ಅಧಿಕಾರಿ ತಾನೇ ಕಳ್ಳತನ ಮಾಡಿ ಸಿಕ್ಕಿಬಿದ್ದರೂ ಅವನ ಮೇಲೆ ಯಾವುದೇ ಕ್ರಮ ಕೈಗೊಳ್ಳದಿರುವುದು ಅಲ್ಲಿನ ಕಾನೂನು ಸುವ್ಯವಸ್ಥೆಯ ಬಗೆಗೆ ಅನುಮಾನ ಮೂಡಿದೆ.
-ಕನ್ನಡ ದುನಿಯಾ

Write A Comment