ಅಂತರಾಷ್ಟ್ರೀಯ

ಇಸಿಸ್ ಉಗ್ರರಿಗೆ ಐಶಾರಾಮಿ ಹೋಟೆಲ್ !

Pinterest LinkedIn Tumblr

isiವಿಶ್ವದಾದ್ಯಂತ ತನ್ನ ಕಬಂಧ ಬಾಹುವನ್ನು ಚಾಚುತ್ತಿರುವ ಇಸಿಸ್ ಉಗ್ರರು ಇದೀಗ ತಮ್ಮ ವಿಶ್ರಾಂತಿಗಾಗಿ ಇರಾಕ್‍ನಲ್ಲಿ ಫೈವ್ ಸ್ಟಾರ್ ಹೋಟೆಲ್ ಆರಂಭಿಸಿದ್ದು ಇದರಲ್ಲಿಯೇ ತಮ್ಮ ಜಿಹಾದಿ ನೀತಿಯನ್ನು ಮತ್ತಷ್ಟು ಉತ್ತೇಜಿಸಲು ಸಿದ್ದತೆ ನಡೆಸಿದೆ.

‘ದಿ ನಿನಾವಾ’ ಎಂಬ ಹೋಟೆಲ್‍ನ 262 ಕೊಠಡಿಗಳನ್ನು ಉಗ್ರರಿಗೆಂದೇ ಮೀಸಲಿಡಲಾಗಿದ್ದು ಜಿಹಾದಿಯನ್ನು ಬೆಂಬಲಿಸುವ ವಧುಗಳಿಗೆ ಐಸಿಸ್ ಉಗ್ರರನ್ನು ಮದುವೆಯಾಗಲು ಹೋಟೆಲ್‍ನಲ್ಲಿ ಅವಕಾಶ ನೀಡುವುದಾಗಿಯೂ ಇಸಿಸ್ ಸಂಘಟನೆ ತಿಳಿಸಿದೆ.

ಅಲ್ಲದೇ ಈ ಹೋಟೆಲ್ ನಲ್ಲಿ ತನ್ನ ಶಿಸ್ತು ಕಾಪಾಡಿಕೊಳ್ಳಲು ಮುಂದಾಗಿರುವ ಈ ಹೋಟೆಲ್‍ನಲ್ಲಿ ಮದ್ಯಪಾನ, ಧೂಮಪಾನಕ್ಕೆ, ಡ್ಯಾನ್ಸ್, ಮ್ಯೂಸಿಕ್‍ಗೆ ನಿಷೇಧ ಹೇರಿದ್ದು ಇಲ್ಲಿಗೆ ಬರುವ ಮಹಿಳೆಯರು ತಲೆಯಿಂದ ಕಾಲಿನವರೆಗೂ ಕಪ್ಪು ಬಣ್ಣದ ಬಟ್ಟೆ ಧರಿಸಿರಬೇಕು. ಕೈಗೆ ಗ್ಲೌಸ್ ಹಾಕಿರಬೇಕು ಎಂದು ಕಟ್ಟಪ್ಪಣೆಯನ್ನು ವಿಧಿಸಿದೆ.
-ಕನ್ನಡ ದುನಿಯಾ

Write A Comment