ಮನೋರಂಜನೆ

ರೋಹಿತ್ ಶರ್ಮಗೆ ಕೂಡಿಬಂದ ಕಂಕಣಭಾಗ್ಯ

Pinterest LinkedIn Tumblr

Rohit-Sharma

ಮುಂಬೈ: ಸ್ಫೋಟಕ ಬ್ಯಾಟ್ಸ್ ಮನ್ ಸುರೇಶ್ ರೈನಾ ಬಳಿಕ ಇದೀಗ ಟೀಂ ಇಂಡಿಯಾ ಆಟಗಾರ ರೋಹಿತ್ ಶರ್ಮ ಅವರು ಹಸೆಮಣೆ ಹೇರಲಿದ್ದಾರೆ.

ಪ್ರಸ್ತುತ ಐಪಿಎಲ್ 8ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಿರುವ ರೋಹಿತ್ ತಮ್ಮ ಮದುವೆ ಯೋಜನೆ ಬಹಿರಂಗಗೊಳಿಸಿದ್ದಾರೆ. ಸುರೇಶ್ ರೈನಾರಂತೆ ರೋಹಿತ್ ಕೂಡಾ ತಮ್ಮ ಬಾಲ್ಯದ ಗೆಳತಿಯೊಂದಿಗೆ ಸಪ್ತಪದಿ ತುಳಿಯಲಿದ್ದಾರೆ.

ರೋಹಿತ್ ತಮ್ಮ ಗೆಳತಿ ಕಮ್ ಭಾವಿ ಪತ್ನಿಯೊಂದಿಗೆ ಇರುವ ಚಿತ್ರವನ್ನು ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದು, ಅಲ್ಲದೆ ತಮ್ಮ ಮದುವೆ ಸಂಗತಿಯನ್ನು ಬಹಿರಂಗಗೊಳಿಸಿದ್ದಾರೆ.
-ಕನ್ನಡ ಪ್ರಭ

Write A Comment