ಮನೋರಂಜನೆ

ಮುಂದಿನ ಜನ್ಮದಲ್ಲಿ ನಾನು ಪತ್ರಕರ್ತನಾಗುತ್ತೇನೆ: ಬಿಗ್ ಬಿ

Pinterest LinkedIn Tumblr

piku

ಮುಂಬೈ: ಮುಂದಿನ ಜನ್ಮದಲ್ಲಿ ನಾನು ಪತ್ರಕರ್ತನಾಗ ಬಯಸುತ್ತೇನೆ ಎಂದು ಬಿಗ್ ಬಿ ಅಮಿತಾಬ್ ಬಚ್ಚನ್ ಹೇಳಿದ್ದಾರೆ.

ನಟಿ ದಿಪಿಕಾ ಪಡುಕೋಣೆ ಮತ್ತು ಅಮಿತಾಬ್ ಬಚ್ಚನ್ ಅಭಿನಯದ ಪಿಕು ಚಿತ್ರದ ಸುದ್ದಿಗೊಷ್ಠಿಯಲಿ ಮಾತನಾಡಿದ ಬಿಗ್ ಬಿ, ತಾವು ಮುಂದಿನ ಜನ್ಮದಲ್ಲಿ ಪತ್ರಕರ್ತನಾಗ ಬಯಸುತ್ತೇನೆ. ನನ್ನ 40 ವರ್ಷಗಳ ಹಿಂದಿನ ವ್ಯಾಖ್ಯೆಗಳನ್ನು ನೀವು ಗಮನಿಸಿದರೆ ಆಗಲೇ ನಾನು ಪತ್ರಕರ್ತನಾಗಬಯಸಿದ್ದೆ ಎಂದು ತಿಳಿಯುತ್ತದೆ ಎಂದು ಹೇಳಿದರು.

ಈ ವೇಳೆ ಕೆಲ ಪತ್ರಕರ್ತರು, ಏಕೆ ನೀವು ಪತ್ರಕರ್ತರಾಗ ಬಯಸುತ್ತೀರಿ..? ಇದರ ಹಿಂದೆ ಯಾವುದಾದರೂ ಬಲವಾದ ಕಾರಣವಿದೆಯೇ ಎಂದು ಕೇಳಿದಾಗ ನಗುತ್ತಲೇ ಉತ್ತರಿಸಿದ ಬಿಗ್ ಬಿ, 40 ವರ್ಷದಿಂದ ನನಗೂ ಉತ್ತರ ಕೊಟ್ಟೂ-ಕೊಟ್ಟೂ ಸಾಕಾಗಿದೆ. ಈಗ ನಾನು ಪ್ರಶ್ನೆ ಕೇಳ ಬಯಸುತ್ತೇನೆ ಎಂದು ನಗೆ ಚಟಾಕಿ ಹಾರಿಸುವ ಮೂಲಕ ನೆರೆದಿದ್ದವರೆಲ್ಲರನ್ನೂ ನಗೆಗಡಲಲ್ಲಿ ತೇಲಿಸಿದರು.

“40 ವರ್ಷಗಳಿಂದ ಉತ್ತರ ಕೊಟ್ಟೂ-ಕೊಟ್ಟೂ ನನಗೂ ಸಾಕಾಗಿದೆ. ಈಗ ನನ್ನ ಸಮಯ ಬಂದಿದ್ದು, ಮುಂದಿನ ಜನ್ಮದಲ್ಲಿ ಪತ್ರಕರ್ತನಾಗಿ ಹುಟ್ಟಿ ನಾನು ಎಲ್ಲರನ್ನೂ ಪ್ರಶ್ನೆ ಕೇಳುತ್ತೇನೆ” ಎಂದು ಬಿಗ್ ಬಿ ನಗೆ ಚಟಾಕಿ ಹಾರಿಸಿದ್ದಾರೆ.
-ಕನ್ನಡ ಪ್ರಭ

Write A Comment