ಮುಂಬೈ

ಹಳಿ ತಪ್ಪಿದ ಮುಂಬೈ-ಎರ್ನಾಕುಲಂ ಡ್ಯುರೆಂಟೋ ಎಕ್ಸ್ ಪ್ರೆಸ್ ರೈಲು

Pinterest LinkedIn Tumblr

derailed_train

ಪಣಜಿ: ಮುಂಬೈ-ಎರ್ನಾಕುಲಂ ಡ್ಯುರೆಂಟೋ ಎಕ್ಸ್ ಪ್ರೆಸ್ ರೈಲಿನ ಸುಮಾರು 10 ಬೋಗಿಗಳು ಗೋವಾದಲ್ಲಿ ಹಳಿ ತಪ್ಪಿವೆ ಎಂದು ತಿಳಿದುಬಂದಿದೆ.

ಇಂದು ಬೆಳಗ್ಗೆ ಸುಮಾರು 7.15ರ ಸುಮಾರಿನಲ್ಲಿ ಗೋವಾದ ಪಣಜಿಯಿಂದ ಸುಮಾರು 45 ಕಿ.ಮೀ ದೂರದಲ್ಲಿರುವ 12223  ಲೋಕಮಾನ್ಯ ತಿಲಕ್ ಟರ್ಮಿನಲ್ ಸುರಂಗ ಮಾರ್ಗದಲ್ಲಿ ಮುಂಬೈ-ಎರ್ನಾಕುಲಂ ಡ್ಯುರೆಂಟೋ ಎಕ್ಸ್ ಪ್ರೆಸ್ ನ 10 ಬೋಗಿಳು ಹಳಿ ತಪ್ಪಿದೆ. ಘಟನೆಯಲ್ಲಿ ಯಾವುದೇ ಸಾವು-ನೋವುಗಳಾದ ಕುರಿತು ವರದಿಯಾಗಿಲ್ಲ.

ಪ್ರಸ್ತುತ ಘಟನಾ ಸ್ಥಳಕ್ಕೆ ಹಿರಿಯ ರೈಲ್ವೇ ಅಧಿಕಾರಿಗಳು, ಸ್ಥಳೀಯ ಪೊಲೀಸರು ಸೇರಿದಂತೆ ಒಂದು ಆ್ಯಂಬುಲೆನ್ಸ್, ಮತ್ತು ಪರಿಹಾರ ರೈಲು ದೌಡಾಯಿಸಿವೆ. ಹಿರಿಯ ರೈಲ್ವೇ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.  ಪ್ರಸ್ತುತ ಈ ಮಾರ್ಗದಲ್ಲಿ ಸಂಚರಿಸುವ ಎಲ್ಲ ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ ಎಂದು ಕೊಂಕಣ ರೈಲ್ವೇ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಡ್ಯುರೆಂಟೋ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿರುವುದರಿಂದ ಪ್ರಯಾಣಿಕರಿಗೆ ಬೇರೆ ರೈಲು ವ್ಯವಸ್ಥೆ ಮಾಡಲಾಗುತ್ತದೆ. ಅಥವಾ ಪ್ರಯಾಣವನ್ನು ಮುಂದುವರೆಸಲು ಇಚ್ಛಿಸದ ಪ್ರಯಾಣಿಕರಿಗೆ ಸಂಪೂರ್ಣ ಹಣವನ್ನು ಇಲಾಖೆಯಿಂದ ವಾಪಸ್ ನೀಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
-ಕನ್ನಡ ಪ್ರಭ

Write A Comment