ಮನೋರಂಜನೆ

62ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ: ಪ್ರಣಬ್ ಮುಖರ್ಜಿರಿಂದ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ ಸಂಚಾರಿ ವಿಜಯ್

Pinterest LinkedIn Tumblr

vijay

ನವದೆಹಲಿ: ಕನ್ನಡದ ನಾನು ಅವನಲ್ಲ…ಅವಳು ಚಿತ್ರದಲ್ಲಿನ ಅಮೋಘ ಅಭಿನಯಕ್ಕಾಗಿ ಉತ್ತಮ ನಟ ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದ ನಟ ಸಂಚಾರಿ ವಿಜಯ್ ಅವರು ಭಾನುವಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಂದ ಪ್ರಶಸ್ತಿ ಸ್ವೀಕರಿಸಿದರು.

ದೆಹಲಿಯಲ್ಲಿ ವಿಜ್ಞಾನ ಭವನದಲ್ಲಿ ನಡೆದ 62ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಮ್ಮ ಉತ್ತಮ ನಟನೆಗಾಗಿ ಸಂಚಾರಿ ವಿಜಯ್ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದರೆ, ಬಾಲಿವುಡ್ ನ ಕಂಗನಾ ರಣವತ್ ಕ್ವೀನ್ ಚಿತ್ರದ ಉತ್ತಮ ಅಭಿನಯಕ್ಕಾಗಿ ಉತ್ತಮ ನಟಿ ಪ್ರಶಸ್ತಿ ಸ್ವೀಕರಿಸಿದರು.

62ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಆಯ್ಕೆಯಾದ ಚಿತ್ರಗಳ ಪಟ್ಟಿ

* ಶ್ರೇಷ್ಠ ಚಿತ್ರ: ಕೋರ್ಟ್ (ಮರಾಠಿ)

* ಶ್ರೇಷ್ಠ ನಟ: ಸಂಚಾರಿ ವಿಜಯ್ (ಕನ್ನಡ)

* ಶ್ರೇಷ್ಠ ನಟಿ: ಕಂಗನಾ ರನೌತ್ (ಹಿಂದಿ)

* ಶ್ರೇಷ್ಠ ಗಾಯಕಿ: ಉತ್ತರ ಉನ್ನಿಕೃಷ್ಣನ್ (ಚಿತ್ರ: ಸೈವಂ)

* ಶ್ರೇಷ್ಠ ಗಾಯಕ: ಸುಖ್ವಿಂದರ್ ಸಿಂಗ್ (ಚಿತ್ರ: ಹೈದರ್)

* ಶ್ರೇಷ್ಠ ಪರಿಸರ ಚಿತ್ರ: ಒಟ್ಟಲ್ (ಜಯರಾಜ್ ನಿರ್ದೇಶನ)

* ಶ್ರೇಷ್ಠ ಸಂಗೀತಗಾರ: ವಿಶಾಲ್ ಭಾರದ್ವಾಜ್ (ಹೈದರ್)

* ವಿಶೇಷ ಜ್ಯೂರಿ ಪ್ರಶಸ್ತಿ: ಮುಹಮ್ಮದ್ ಮುಸ್ತಫಾ

* ಜನಪ್ರಿಯ ಚಲನಚಿತ್ರ: ಮೇರಿ ಕೋಮ್ (ಹಿಂದಿ)

* ಶ್ರೇಷ್ಠ ಪೋಷಕ ನಟ:ಬಾಬ್ಬಿ ಸಿಂಹ, ಜಿಗರ್ಥಾಂಡ (ತಮಿಳು)

* ಶ್ರೇಷ್ಠ ಪೋಷಕ ನಟಿ: ಬಲ್ಜಿಂದರ್ ಕೌರ್, ಪಗ್ಡಿ ದಿ ಹಾನರ್ (ಹರ್ಯಾನ್ವಿ೦

* ಶ್ರೇಷ್ಠ ನೃತ್ಯ ಸಂಯೋಜನೆ: ಹೈದರ್ (ಬಿಸ್ಮಿಲ್)

* ಇಂದಿರಾ ಗಾಂಧಿ ಪ್ರಶಸ್ತಿ: ಆಶಾ ಜೋಹರ್ ಮಾಜೆ (ಬೆಂಗಾಲಿ)

* ಸಾಮಾಜಿಕ ಕಳಕಳಿ ಚಿತ್ರ: ಚೋತೊದರ್ ಚೋಬಿ (ಬೆಂಗಾಲಿ)

* ಶ್ರೇಷ್ಠ ನಿರ್ದೇಶನ: ಚತುಷ್ಕೋಣೆ (ಬೆಂಗಾಲಿ) ಶ್ರೀಜಿತ್ ಮುಖರ್ಜಿ

* ಶ್ರೇಷ್ಠ ಹಿನ್ನಲೆ ಸಂಗೀತ: ಗೋಪಿ ಸುಂದರ್ (1983)

* ಶ್ರೇಷ್ಠ ಗೀತ ಸಾಹಿತ್ಯ : ಸೈವಂ (ತಮಿಳು) ಅಳಗು: ಎನ್ ಎ ಮುತ್ತುಕುಮಾರ್.

* ಶ್ರೇಷ್ಠ ಮೂಲ ಚಿತ್ರಕಥೆ: ಚತುಷ್ಕೋಣೆ (ಬೆಂಗಾಲಿ) : ಶ್ರೀಜಿತ್ ಮುಖರ್ಜಿ

* ಶ್ರೇಷ್ಠ ಸಂಭಾಷಣೆ: ಹೈದರ್ (ಹಿಂದಿ) ವಿಶಾಲ್ ಭಾರದ್ವಾಜ್

* ಶ್ರೇಷ್ಠ ಸಂಕಲನ : ಜಿಗಾರ್ಥಾಂಡ (ತಮಿಳು) ವಿವೇಕ್ ಹರ್ಷನ್

* ಶ್ರೇಷ್ಠ ಪ್ರಸಾದನ ಕಲಾವಿದ: ನಾನು ಅವನಲ್ಲ ಅವಳು (ಕನ್ನಡ) ನಾಗರಾಜು ಹಾಗೂ ರಾಜು

* ಶ್ರೇಷ್ಠ ಚಿತ್ರಕಥೆ : ಒಟ್ಟಲ್ (ಮಲಯಾಳಂ) : ಜೋಶಿ ಮಂಗಲಾಥ್

* ಶ್ರೇಷ್ಠ ಮಕ್ಕಳ ಚಿತ್ರ: ಕಾಕ ಮುಟ್ಟೈ(ತಮಿಳು), ಎಲಿಜಬತ್ ಏಕಾದಶಿ (ಮರಾಠಿ)

* ಶ್ರೇಷ್ಠ ಬಾಲ ನಟ: ಕಾಕ ಮುಟ್ಟೈ(ತಮಿಳು) ಜೆ ವಿಘ್ನೇಶ್ ಹಾಗೂ ರಮೇಶ್.

* ಶ್ರೇಷ್ಠ ಛಾಯಾಗ್ರಾಹಕ: ಚತುಷ್ಕೋಣೆ (ಬೆಂಗಾಲಿ) ಸುದೀಪ್ ಚಟರ್ಜಿ

ಪ್ರಾದೇಶಿಕ ಚಿತ್ರ:

* ಹರಿವು : ಕನ್ನಡ ಚಿತ್ರ, ನಿರ್ಮಾಣ ಓಂ ಸ್ಟುಡಿಯೋ, ನಿರ್ದೇಶಕ: ಮಂಜುನಾಥ್ (ಮನ್ಸೋರೆ) 1,00,000 ನಗದು, ರಜತ್ ಕಮಲ.

* ನಾಚೋಮ್-ಐಎ ಕಂಪಸಾರ್: ಕೊಂಕಣಿ

* ಕಿಲ್ಲಾ: ಮರಾಠಿ * ನಿರ್ಭಶಿತೋ: ಬೆಂಗಾಲಿ

* ಒಥೆಲೋ: ಅಸ್ಸಾಮಿ

* ಕುಟ್ರಂ ಕಡಿಥಾಲ್: ತಮಿಳು

* ಚಂದಮಾಮ ಕಥಲು: ತೆಲುಗು

-ಕನ್ನಡ ಪ್ರಭ

Write A Comment