ಮನೋರಂಜನೆ

ಸಲ್ಮಾನ್‌ ಖಾನ್ ಜೊತೆ ನಾಯಕಿಯಾಗಿಸುದಾಗಿ ಹೇಳಿ ಯುವತಿಯ ಅತ್ಯಾಚಾರ

Pinterest LinkedIn Tumblr

Rape

ಜೈಪುರ್(ರಾಜಸ್ಥಾನ), ಮೇ.2: ಖ್ಯಾತ ನಟರ ಜೊತೆ ನಟಿಸುವ ಅವಕಾಶ ಕೊಡಿಸುವುದಾಗಿ ವಂಚಿಸಿ ಯುವತಿಯರ ಮೇಲೆ ಅತ್ಯಾಚಾರ ನಡೆಸುವ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅಂಥದೇ ಮತ್ತೊಂದು ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

ಸಲ್ಮಾನ್ ಖಾನ್ ಜೊತೆ ನಾಯಕಿಯಾಗಿ ನಟಿಸಲು ಅವಕಾಶ ಕಲ್ಪಿಸಿಕೊಡುತ್ತೇನೆ ಎಂದು ಅಮಾಯಕ ಯುವತಿಗೆ ಮಂಕುಬೂದಿ ಎರಚಿದ ಇಲ್ಲಿನ ಆಭರಣ ವ್ಯಾಪಾರಿಯೊಬ್ಬ, ಅವಳನ್ನು ತನ್ನ ಕಾಮದಾಹಕ್ಕೆ ಬಳಸಿಕೊಂಡಿದ್ದಾನೆ. ಸಂತ್ರಸ್ತ ಯುವತಿ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಆ ಚಿನ್ನದ ವ್ಯಾಪಾರಿಯನ್ನು ಬಂಧಿಸಿದ್ದಾರೆ.

ಮುಂಬೈನ ಈ ಚಿನ್ನದ ವ್ಯಾಪಾರಿ ರಾಜಸ್ಥಾನಕ್ಕೆ ಬಂದಿದ್ದು ಇಲ್ಲಿನ ಹೋಟೆಲ್‌ವೊಂದರಲ್ಲಿ ತಂಗಿದ್ದ. ಈ ಸಂದರ್ಭ ಪರಿಚಯವಾದ ಯುವತಿಯನ್ನು ಸಲ್ಮಾನ್‌ಖಾನ್ ಚಿತ್ರದ ನಾಯಕಿ ಮಾಡುವುದಾಗಿ ನಂಬಿಸಿದ. ನಂತರ ಹೋಟೆಲ್‌ಗೆ ಅವಳನ್ನು ಕರೆತಂದು ಅಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದ. ತಾನು ಅತ್ಯಾಚಾರ ನಡೆಸಿದ್ದನ್ನು ಚಿತ್ರೀಕರಿಸಿಕೊಂಡಿದ್ದ ವ್ಯಾಪಾರಿ ಯುವತಿಗೆ ವಾಟ್ಸ್ ಅಪ್ ಮೂಲಕ ಅದನ್ನು ವರ್ಗಾಯಿಸಿದ್ದ. ಚಿನ್ನದ ವ್ಯಾಪಾರಿ ಈಗ ಶಾಮ್‌ನಗರ್ ಠಾಣೆ ಪೊಲೀಸರ ಅತಿಥಿಯಾಗಿದ್ದಾನೆ.

Write A Comment