ಮನೋರಂಜನೆ

ನೇಪಾಳಕ್ಕೆ ಸ್ಪಂದಿಸಿದ ಭಾರತಕ್ಕೆ ಋಣಿ ನಾನು : ಮನಿಷಾ

Pinterest LinkedIn Tumblr

Manisha-koyirala-Nepal

ಇತ್ತೀಚಿನ ದಿನಗಳಲ್ಲಿಯೇ ಅತಿ ಭೀಕರ ಎಂದು ಹೇಳಬಹುದಾದ ಭೀಕರ ಭೂಕಂಪ ದಿಂದ ತತ್ತರಿಸಿರುವ ನೇಪಾಳದ ನೋವಿಗೆ ತಕ್ಷಣ ಸ್ಪಂದಿಸಿ ಅಗತ್ಯ ನೆರವು ರವಾನಿಸಿದ ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿಯನ್ನು ನೇಪಾಳ ಮೂಲದ ಬಾಲಿವುಡ್ ನಟಿ ಮನೀಷಾ ಕೊಯಿರಾಲಾ ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾಳೆ. ಶನಿವಾರ ಬೆಳಗ್ಗೆ ಸಂಭವಿಸಿದ್ದ 7.9ರಷ್ಟು ತೀವ್ರತೆಯ ಭೂಕಂಪನದ ರುದ್ರ ನರ್ತನವನ್ನು ಟಿವಿಯಲ್ಲಿ ವೀಕ್ಷಿಸಿದ ಮನೀಷಾ ಕೊಯಿರಾಲಾಳ ಕಣ್ಣಲ್ಲಿ ಬಳಬಳನೆ ನೀರಿಳಿದವಂತೆ. ಕಣ್ಣೆದುರೇ ಸಾವಿರಾರು ಮುಗ್ದ ಜೀವಗಳು

ಅವಶೇಷಗಳ ಅಡಿ ಸಿಲುಕಿ ಮಣ್ಣಾಗಿ ಹೋಗಿದ್ದನ್ನು ಟಿವಿಯಲ್ಲಿ ನೋಡಿದ ಮನೀಷಾ ಕೊಯಿರಾಲಾ ಮಾತೇ ಹೊರಡದೆ ಕಣ್ಣೀರು ಸುರಿಸಿದಳಂತೆ. ಇಂತಹ ಸಂದರ್ಭದಲ್ಲಿ ಭಾರತ ಅತಿ ಶೀಘ್ರವಾಗಿ ಪ್ರತಿಕ್ರಿಯಿಸಿ ಅಲ್ಲಿನ ಜನತೆಗೆ ನೆರವು ನೀಡಿರುವುದು ನಿಜಕ್ಕೂ ಸಂತಸದ ವಿಷಯವಾಗಿದೆ. ಭಾರತ ಸರ್ಕಾರಕ್ಕೆ ಅನಂತಾನಂತ ವಂದನೆಗಳು ಎಂದು ನೇಪಾಳದ ಮೊತ್ತ ಮೊದಲ ಚುನಾಯಿತ ಪ್ರಧಾನಿ ಬಿ.ಪಿ.ಕೊಯಿರಾಲಾ ಅವರ ಮೊಮ್ಮಗಳು ಮನಿಷಾ. ಭಾರತದ ಈ ಉಪಕಾರವನ್ನು ನಾನೆಂದೂ ಮರೆಯಲಾರೆ. ಭಾರತದ ಋಣವನ್ನೂ ತೀರಿಸಲಾರೆ. ಪ್ರಧಾನಿ ಮೋದಿ ಅವರ ಕ್ರಮಕ್ಕೆ ಧನ್ಯವಾದಗಳು ಎಂದಳಂತೆ ಮನೀಷಾ….
-ಕೃಪೆ: ಈ ಸಂಜೆ

Write A Comment