ರಾಷ್ಟ್ರೀಯ

ನೇಪಾಳ ಭೂಕಂಪಕ್ಕೆ ರಾಹುಲ್‌ ಕಾರಣ: ಸಾಕ್ಷಿ ಮಹಾರಾಜ್‌

Pinterest LinkedIn Tumblr

sak

ನವದೆಹಲಿ: ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಇತ್ತೀಚೆಗೆ ಗೋ ಮಾಂಸ ಭಕ್ಷಿಸಿ ಕೇದರನಾಥ ದೇವಾಲಯ ಪ್ರವೇಶಿಸಿದ್ದರಿಂದಲೇ ನೇಪಾಳದಲ್ಲಿ ಭೂಕಂಪ ಉಂಟಾಗಿದೆ ಎಂದು ಬಿಜೆಪಿ ಮುಖಂಡ ಸಾಕ್ಷಿ ಮಹಾರಾಜ್‌ ಹೇಳಿದ್ದಾರೆ.

ಗೋ ಮಾಂಸ ಭಕ್ಷಿಸಿದ್ದ ರಾಹುಲ್‌ ಶುದ್ಧೀಕರಣಗೊಳ್ಳದೆ ದೇವಾಲಯದೊಳಗೆ ಪ್ರವೇಶಿಸಿ, ಕೇದಾರನಾಥನ ದರ್ಶನ ಪಡೆದಿದ್ದರಿಂದಲೇ  ನೇಪಾಳದಲ್ಲಿ ಭೂಕಂಪ ಉಂಟಾಯಿತು ಎಂದು  ಹೇಳುವ ಮೂಲಕ  ಅವರು ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.

ಇಂತಹ ವಿವಾದಿತ ಹೇಳಿಕೆ ನೀಡುವ ಸದಸ್ಯರ ವಿರುದ್ಧ ಮೋದಿ ಸರ್ಕಾರ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು  ಕಾಂಗ್ರೆಸ್‌ ವಕ್ತಾರೆ ಸುಷ್ಮಿತಾ ದೇವ್‌ ಆಗ್ರಹಿಸಿದ್ದಾರೆ.
-ಕೃಪೆ: ಪ್ರಜಾವಾಣಿ

1 Comment

Write A Comment