ಮನೋರಂಜನೆ

ಶಿವಣ್ಣನ ಜತೆ ಸ್ಟೆಪ್ ಹಾಕ್ತಾರಂತೆ ಸಂಜನಾ !

Pinterest LinkedIn Tumblr

6643sanjana-box3

ಕನ್ನಡದ ಹಾಟ್ ನಟಿ ಸಂಜನಾ ಇದೀಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜತೆ ಹೆಜ್ಜೆ ಹಾಕಲಿದ್ದು ಸಂಜನಾರ ಡ್ಯಾನ್ಸ್ ಈ ಚಿತ್ರದ ಮತ್ತೊಂದು ಹೈಲೇಟ್ ಅಂತೆ.

ಹೌದು. ಸಂತೆಯಲ್ಲಿ ನಿಂತ ಕಬೀರ ಚಿತ್ರದಲ್ಲಿ ನಟಿ ಸಂಜನಾ ನಟಿಸುತ್ತಿದ್ದು ಅದರಲ್ಲಿಯೂ ವಿಶೇಷವಾದ ಹಾಡೊಂದರಲ್ಲಿ ಶಿವಣ್ಣನ ಜೊತೆಯಾಗಲಿದ್ದಾರೆ ಎನ್ನಲಾಗಿದೆ. ಅಲ್ಲದೇ ವಿಶಿಷ್ಟ ರೀತಿಯಲ್ಲಿ ಮೂಡಿಬರುವ ಈ ಹಾಡಿನಲ್ಲಿ ಸಂಜನಾ ರಾಜ ನರ್ತಕಿಯಂತೆ ನರ್ತಿಸಲಿದ್ದು ಹೊಸ ಅಲೆ ಎಬ್ಬಿಸಲಿದ್ದಾರಂತೆ.

ಈ ಚಿತ್ರದ ಕಥೆಗೆ ಅನುಗುಣವಾಗಿ ದೆಹಲಿ ಸುಲ್ತಾನ ಸಿಖಂದರ್ ಲೋಧಿ ಆಸ್ಥಾನದಲ್ಲಿ ಕಬೀರ್ ದಾಸ್ ರವರ ‘ಹಮ್ ಇಷ್ಕ್ ದಿವಾನೇ’ ದೋಹಾ ಪಠಣವಾಗುವುದನ್ನು ಹಾಡನ್ನಾಗಿ ಮಾಡಿಕೊಂಡಿದ್ದು ಅದಕ್ಕೆ ನಟಿ ಸಂಜನಾ ಮೈ ಚಳಿ ಬಿಟ್ಟು ನರ್ತಿಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಏನೇ ಇರಲಿ, ಸದ್ಯದಲ್ಲಿಯೇ ಹೊಸ ಸುದ್ದಿ ಕೊಡುತ್ತೇನೆ ಎಂದಿದ್ದ ಸಂಜನಾ ಇದೀಗ ಶಿವಣ್ಣನ ಜತೆ ಹೆಜ್ಜೆ ಹಾಕುತ್ತಿರುವುದು ನಿಜಕ್ಕೂ ಕುತೂಹಲ ಮೂಡಿಸಿದೆ.

-ಕೃಪೆ: ಕನ್ನಡ ದುನಿಯಾ

Write A Comment