ಅಂತರಾಷ್ಟ್ರೀಯ

ಜರ್ಮನ್ ವಿಂಗ್ಸ್ ವಿಮಾನ ಪತನದ ಕೊನೆ ಕ್ಷಣದ ವಿಡಿಯೋ ಲಭ್ಯ..?

Pinterest LinkedIn Tumblr

7431germanwings-1-v2

ಭಗ್ನ ಪ್ರೇಮಿ ಸಹ ಪೈಲೆಟ್ ಒಬ್ಬನ ಹುಚ್ಚಾಟಕ್ಕೆ ಜರ್ಮನ್ ವಿಂಗ್ಸ್ ವಿಮಾನದಲ್ಲಿದ್ದ 148 ಮಂದಿ ಮುಗ್ದ ಪ್ರಯಾಣಿಕರು ಬಲಿಯಾದ ಬಳಿಕ ಪ್ರಯಾಣಿಕರೊಬ್ಬರ ಮೊಬೈಲ್ ಫೋನಿನಲ್ಲಿ ಕೊನೆ ಕ್ಷಣದ ವಿಡಿಯೋ ದಾಖಲಾಗಿದೆ ಎನ್ನಲಾಗುತ್ತಿದೆ.

ಜರ್ಮನ್ ವಿಂಗ್ಸ್ ಪತನವಾದ ಫ್ರಾನ್ಸಿನ ಆಲ್ಫ್ಸ್ ಪರ್ವತದಲ್ಲಿ ಅವಶೇಷಗಳನ್ನು ಹುಡುಕಾಡುವ ವೇಳೆ ಲಭ್ಯವಾದ ಪ್ರಯಾಣಿಕರೊಬ್ಬರ ಮೊಬೈಲಿನಲ್ಲಿ ಇದರ ವಿಡಿಯೋ ಚಿತ್ರೀಕರಣಗೊಂಡಿದೆ ಎನ್ನಲಾಗಿದ್ದು, ಇದರ ವಿವರವನ್ನು ಫ್ರಾನ್ಸ್ ಹಾಗೂ ಜರ್ಮನಿಯ ಕೆಲ ಮಾಧ್ಯಮಗಳು ಪ್ರಕಟಿಸಿವೆ.

ಈ ವಿಡಿಯೋದಲ್ಲಿ ಪ್ರಯಾಣಿಕರೆಲ್ಲರೂ ಗಾಬರಿ ಹಾಗೂ ಆತಂಕದಿಂದ ಕಿರುಚಾಡುತ್ತಿರುವುದು ಕಂಡು ಬಂದಿದ್ದು, ಇದರಿಂದಾಗಿ ತಮಗೆ ಮುಂದೆ ಒದಗಿ ಬರುವ ಪರಿಸ್ಥಿತಿ ಕುರಿತು ಅವರುಗಳಿಗೆ ಅರಿವಿತ್ತೆಂದು ಹೇಳಲಾಗುತ್ತಿದೆ. ಮುಖ್ಯ ಪೈಲೆಟ್ ಕಾಕ್ ಪಿಟ್ ಹೊರಗಿರುವುದೂ ಇದರಲ್ಲಿ ಸೆರೆಯಾಗಿದೆ ಎಂದು ಹೇಳಲಾಗಿದ್ದು, ಪ್ರಯಾಣಿಕರು ರಕ್ಷಣೆಗಾಗಿ ಕರುಣಾಜನಕವಾಗಿ ಮೊರೆಯಿಟ್ಟರೂ ಕಾಕ್ ಪಿಟ್ ಒಳಗಿದ್ದ ಸಹ ಪೈಲೆಟ್ ನ ನಿರ್ದಯಿ ಮನಸ್ಸು ಮಾತ್ರ ಕರಗಿಲ್ಲ. ಈ ವಿವರಗಳನ್ನು ಮಾಧ್ಯಮಗಳು ಪ್ರಕಟಿಸಿದ್ದರೂ ಅಧಿಕಾರಿಗಳು ಮಾತ್ರ ಇದನ್ನು ಅಧಿಕೃತವಾಗಿ ದೃಢೀಕರಿಸಿಲ್ಲ.
-ಕೃಪೆ: ಕನ್ನಡ ದುನಿಯಾ

Write A Comment