ಮನೋರಂಜನೆ

ಬೆಳಗಾವಿ ಚೆಲುವೆ ಲಕ್ಷ್ಮಿ ರೈ ಬಾಲಿವುಡ್ ನಲ್ಲಿ ರಾಯ್ ಲಕ್ಷ್ಮಿ

Pinterest LinkedIn Tumblr

lakshmi-rai

ದಕ್ಷಿಣದಲ್ಲೇ ಸುತ್ತು ಹೊಡೆಯುತ್ತಿದ್ದ ಬೆಳಗಾವಿ ಚೆಲುವೆ ಲಕ್ಷ್ಮಿ ರೈ ಇದೀಗ ಬಾಲಿವುಡ್‍ಗೆ ನೆಗೆದಿದ್ದಾರೆ. ತಮ್ಮ ಹೆಸರನ್ನು ರಾಯ್ ಲಕ್ಷ್ಮಿ ಅಂತ ಹಿಂದುಮುಂದು ಮಾಡಿಕೊಂಡಿದ್ದಾರೆ.

ತಮಿಳಿನ ಎ. ಆರ್. ಮುರುಗದಾಸ್ ಅವರ `ಅಕಿರಾ’ ಚಿತ್ರದಲ್ಲಿ ರಾಯ್ ಲಕ್ಷ್ಮಿ ವಿಶೇಷ ಪಾತ್ರದಲ್ಲಿ ಕಾಣಿಸಲಿದ್ದಾರಂತೆ. ಪೂರ್ಣ ಪ್ರಮಾಣದ ನಾಯಕಿಯಾಗಿ ಸೋನಾಕ್ಷಿ ಸಿನ್ಹಾ ಇದ್ದು, ಲಕ್ಷ್ಮೀ ರಾಯ್ ಅತಿಥಿ ಪಾತ್ರಕ್ಕೆ ಸೀಮಿತವಾಗಿದ್ದಾರೆ. ಈ ಬಗ್ಗೆ ಲಕ್ಷ್ಮಿ ರೈ ಅವರಿಗೆ ಬೇಸರವೇನೂ ಇಲ್ಲವಂತೆ. ಈ ಚಿತ್ರದ ಅತಿಥಿ ಪಾತ್ರದ ಮೂಲಕ ತಾನು ಬಾಲಿವುಡ್‍ಗೆ ಅಡಿಯಿಡುತ್ತಿದ್ದೇನೆ. ಇದು ಬಹಳ ಗಮನಾರ್ಹ ಪಾತ್ರ. ಹಾಗಾಗಿಯೇ ಈ ಪಾತ್ರವನ್ನು ಅಂಗೀಕರಿಸಿದೆ ಎಂದಿದ್ದಾರೆ.

ಮುರುಗದಾಸ್ ಅವರ ಚಿತ್ರಗಳಲ್ಲಿ ಅಬಿsನಯಿಸಬೇಕು ಎಂಬುದು ಪ್ರತಿಯೊಬ್ಬರ ಕನಸು. ಪಾತ್ರದ ಬಗ್ಗೆ ಅವರು ಹೇಳಿದಾಗ ನಾನು ನೋ ಹೇಳಲು ಸಾಧ್ಯವಾಗಲೇ ಇಲ್ಲ ಎನ್ನುತ್ತಾರೆ ಲಕ್ಷ್ಮಿ. ರಾಯ್ ಲಕ್ಷ್ಮಿ ಅವರ ಪಾಲಿಗೆ `ಅಕಿರಾ’ ಮೊದಲ ಮೆಟ್ಟಿಲು. ಮುಂದೆ ಈ ಚಿತ್ರ ಅವರಿಗೆ ಬಾಲಿವುಡ್‍ನಲ್ಲಿ ಒಳ್ಳೆಯ ಆಫರ್‍ಗಳನ್ನು ತಂದುಕೊಟ್ಟರೂ ಅಚ್ಚರಿಯಿಲ್ಲ. ಮೆಟ್ಟಿಲೇರುತ್ತಾ ಸಾಗಲಿ ಎಂಬುದೇ ನಮ್ಮ ಆಶಯ.

Write A Comment