ಮನೋರಂಜನೆ

‘ಮೊಹೆಂಜೊ ದಾರೊ’ ಚಿತ್ರೀಕರಣದ ವೇಳೆ ಜನ ತಲೆ ಸುತ್ತಿ ಬೀಳುತ್ತಿದ್ದಾರೆ: ಹೃತಿಕ್

Pinterest LinkedIn Tumblr

Mohenjo-Daro

ಮುಂಬೈ: ಮರಳಿನ ಸುಂಟರಗಾಳಿಯಲ್ಲಿ ಮಧ್ಯೆ ನಡೆಯುತ್ತಿರುವ ‘ಮೊಹೆಂಜೊ ದಾರೊ’ ಚಲನಚಿತ್ರದ ಚಿತ್ರೀಕರಣದ ವೇಳೆ ಬಾಲಿವುಡ್ ನಟ ಹೃತಿಕ್ ರೋಶನ್ ತೀವ್ರ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಆದರೆ “ಸಿನೆಮಾ ಚಿತ್ರೀಕರಣ ಅದ್ಭುತವಾಗಿ ಮುಂದುವರೆಯುತ್ತಿದೆ” ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

“ಮರಳಿನ ಸುಂಟರಗಾಳಿಯ ನಡುವೆ ನಾವು ಬಹಳ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇವೆ. ಇಲ್ಲಿ ಚಿತ್ರೀಕರಣ ಮಾಡುವುದು ಕಷ್ಟದ ಕೆಲಸ. ಏನು ಹೇಳುವುದು… ಸೆಟ್ಟಿನಲ್ಲಿ ಜನ ತಲೆಸುತ್ತಿ ಬೀಳುತ್ತಿದ್ದಾರೆ. ಆದರೆ ಚಿತ್ರೀಕರಣ ಪ್ರಗತಿಯಲ್ಲಿದೆ” ಎಂದು ಹೃತಿಕ್ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ.

“ಸಿನೆಮಾ ಪ್ರಗತಿಯಲ್ಲಿದೆ. ಚಿತ್ರೀಕರಣ ಅದ್ಭುತವಾಗಿ ಮುಂದುವರೆಯುತ್ತಿದೆ” ಎನ್ನುತ್ತಾರೆ ಹೃತಿಕ್.

ಅಶುತೋಶ್ ಗೌರೀಕರ್ ನಿರ್ದೇಶನದ ಈ ಚಿತ್ರ ಸಿಂಧು ಕಣಿವೆ ನಾಗರಿಕತೆಯಲ್ಲಿ ನಡೆಯುವ ಒಂದು ಪ್ರೇಮ ದಂತಕಥೆ. ಭುಜ್ ಸುತ್ತಮುತ್ತ ಸಮಗ್ರ ಚಿತ್ರೀಕರಣ ನಡೆಯುತ್ತಿದೆ.

ಈ ಮಧ್ಯೆ ಒಂದು ಪ್ರಮುಖ ದೃಶ್ಯಕ್ಕೆ ಹೃತಿಕ್ ರೋಶನ್ ಬೆತ್ತಲೆಯಾಗಲಿದ್ದಾರೆ ಎಂಬ ವದಂತಿಗಳು ಸುತ್ತಾಡುತ್ತಿವೆ. ಈ ಬಗ್ಗೆ ಪ್ರಶ್ನಿಸಿದಾಗ “ನಾನು ಸಿನೆಮಾಗಳಲ್ಲಿ ಬೆತ್ತಲೆಯಾಗುವುದಿಲ್ಲ ಆದು ಬೇರೆಡೆ” ಎಂದು ಉತ್ತರಿಸಿದ್ದಾರೆ.

Write A Comment