ಮಿಯಾಮಿ,ಮಾ.6- ಇಂಡೋ ಹಾಗೂ ಸ್ವಿಸ್ ಜೋಡಿಯಾದ ಸಾನಿಯಾ ಮಿರ್ಜಾ ಹಾಗೂ ಮಾರ್ಟೀನಾ ಹಿಂಗೀಸ್ ಮಿಯಾಮಿ ಡಬಲ್ ಓಪನ್ ಟೆನಿಸ್‌ನ ಫೈನಲ್ಸ್‌ನಲ್ಲಿ ರೋಚಕ ಹಣಾಹಣಿ ನಡೆಸಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ಎರಡು ವಾರದ ಹಿಂದಷ್ಟೇ ರಷ್ಯಾದ ಏಕತೆರಿನಾ ಮಕರೋವ ಹಾಗೂ ಎಲೆನಾ ವೆಸ್ನಿನಿ ಅವರನ್ನು ಮಣಿಸಿ ಇಂಡಿಯನ್ ವೆಲ್ಸ್ ಬಿಎಸ್‌ಪಿ ಪರಿಬಾಸ್ ಓಪನ್ ಪ್ರಶಸ್ತಿಯನ್ನು ಗಳಿಸಿದ್ದರು.ಅಗ್ರ ಶೇಯಾಂಕಿತ ಇಂಡೋ- ಸ್ವಿಸ್ ಜೋಡಿಯಾದ ಮಾರ್ಟೀನಾ ಹಾಗೂ ಸಾನಿಯಾ ಜೋಡಿ ನಿನ್ನೆ ನಡೆದ ಮಿಯಾಮಿ ಫೈನಲ್ಸ್‌ನಲ್ಲೂ ಟೆನಿಸ್ ರಂಗದ ದ್ವಿತೀಯ ಶ್ರೇಯಾಂಕಿತ ಜೋಡಿಯಾದ ಏಕತೆರಿನಾ ಮಕರೋವ ಹಾಗೂ ಎಲೆನಾ ವೆನ್ನಿಸಿಯನ್ನು 7-5, 6-1 ರ ನೇರ ಸೆಟ್‌ನಿಂದ ಮಣಿಸಿ ಚಾಂಪಿಯನ್ಸ್‌ಗಳಾಗಿದ್ದಾರೆ.
ಮಿಯಾಮಿ ಟೆನ್ನಿಸ್‌ನ ಫೈನಲ್‌ನ ಪಂದ್ಯದ ಮೊದಲ ಸುತ್ತಿನಲ್ಲಿ ಸಾನಿಯಾ- ಮಾರ್ಟೀನಾ ಜೋಡಿ 5-2 ರ ಹಿನ್ನೆಡೆ ಅನುಭವಿಸಿದ್ದರು. ಆದರೆ ಕಠಿಣ ಶ್ರಮದ ಹಾಗೂ ಬಲವಾದ ಸೆಟ್‌ಗಳ ನೆರವಿನಿಂದ 7-5ಯಿಂದ ಮೊದಲ ಸೆಟ್‌ಅನ್ನು ಗೆದ್ದುಕೊಂಡರು. ದ್ವಿತೀಯ ಸೆಟ್‌ನಲ್ಲಿ ಈ ಜೋಡಿಯು 3-0ಯಿಂದ ಮುನ್ನಡೆತ್ತು. ಎದುರಾಳಿ ಆಟಗಾರರು ಈ ಸೆಟ್‌ನಲ್ಲಿ ಕೇವಲ 1 ಪಾಯಿಂಟ್ ಮಾತ್ರ ಗಳಿಸಲು ಶಕ್ತವಾಗಿ ಇಂಡೋ- ಸ್ವಿಸ್ ಜೋಡಿಯು 6-1 ರಿಂದ ಪಂದ್ಯವನ್ನು ಗೆದ್ದು ಚಾಂಪಿಯನ್ಸ್ ಗಳಾಗಿ ಹೊರಹೊಮ್ಮಿತು.
ಈ ಡಬಲ್ಸ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಸಾನಿಯಾ ಮಿರ್ಜಾ 25ನೇ ಡಬ್ಲ್ಯುಟಿಎ ಪ್ರಶಸ್ತಿ ಗೆದ್ದ ಕೀರ್ತಿಗೆ ಭಾಜನರಾದರೆ, ಮಾರ್ಟೀನಾ ಹಿಂಗೀಸ್‌ಗೆ 43ನೇ ಡಬಲ್ಸ್ ಪ್ರಶಸ್ತಿ ಹಾಗೂ 43 ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದ ಕೀರ್ತಿಗೆ ಭಾಜನರಾಗಿದ್ದಾರೆ.
ಈ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಈ ಜೋಡಿಯು 9ನೆ ರ್ಯಾಂ ಕ್‌ನಿಂದ 3ನೆ ರ್ಯಾಂ ಕ್‌ಗೆ ಜಿಗಿದಿದ್ದಾರೆ.
ಜೊಕೋವಿಚ್‌ಗೆ ಪ್ರಶಸ್ತಿ:
ಪುರುಷರ ಸಿಂಗಲ್ಸ್ ಮಿಯಾಮಿ ಫೈನಲ್ಸ್‌ನಲ್ಲಿ ವಿಶ್ವದ ನಂಬರ್ 1 ಆಟಗಾರ ಆಂಡೆ ಮುರ್ರೆ ವಿರುದ್ಧ ಉತ್ತಮ ಹೋರಾಟ ಪ್ರದರ್ಶಿಸಿದ ನೋವಾಕ್ ಜೊಕೊವಿಚ್ ಅವರು ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಅವರು 7-6, 4-6, 6-0 ಸೆಟ್‌ನಿಂದ ಗೆಲ್ಲುವ ಮೂಲಕ ಪ್ರಶಸ್ತಿಗೆ ಭಾಜನರಾಗುವ ಮೂಲಕ ಇಂಡಿಯನ್ ವೆಲ್ಸ್ ಹಾಗೂ ಮಿಯಾಮಿ ಓಪನ್ ಟೂರ್ನಿಯಲ್ಲಿ ತಲಾ ಮೂರು ಪ್ರಶಸ್ತಿ ಗಳಿಸಿದ ಮೊದಲ ಆಟಗಾರರಾಗಿ ಬಿಂಬಿಸಿಕೊಂಡಿದ್ದಾರೆ.