ಮೊಡವೆ ಸಮಸ್ಯೆ ಪರಿಹಾರಕ್ಕೆ ಸಾಂಪ್ರದಾಯಿಕ ಔಷಧಗಳ ಬದಲಾಗಿ ದೊಡ್ಡ ಪತ್ರೆ, ಚೆಂಡು ಹೂ ಮತ್ತು ರಾಳ (ಢ್ಟ್ಟ) ಸಸ್ಯಗಳ ಸಾರ ಯಾವ ರೀತಿ ಮೊಡವೆಗೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ಕೊಂದು ಹಾಕಿದವು ಎಂಬ ಕುರಿತಂತೆ ಲೀಡ್ಸ್ ಮೆಟ್ರೋಪಾಲಿಟನ್ ವಿಶ್ವವಿದ್ಯಾಲಯದ ಸಂಶೋಧಕರು ಹೋಲಿಕೆ ಮಾಡಿದ್ದಾರೆ.
ದೊಡ್ಡ ಪತ್ರೆ ಸಾರವು ಅತ್ಯುದ್ಭುತ ಬ್ಯಾಕ್ಟೀರಿಯಾ ನಿರೋಧಕವಾಗಿ ಕೆಲಸ ಮಾಡುವುದನ್ನು ಅವರು ಕಂಡು ಹಿಡಿದಿದ್ದಾರೆ. ಅದರಲ್ಲೂ ಉಳಿದ ಸಾಂಪ್ರದಾಯಿಕ ಬ್ಯಾಕ್ಟೀರಿಯಾ ವಿರೋಧಿ ಔಷಧಗಳಿಗೆ ಹೋಲಿಸಿದರೆ ದೊಡ್ಡ ಪತ್ರೆ ಸಾರದಿಂದ ತಯಾರಿಸಿದ ಔಷಧದ ಪ್ರಮಾಣವೂ ಕಡಿಮೆ ಸಾಕಾಗುತ್ತದೆ. ದೊಡ್ಡ ಪತ್ರೆ ಟಿಂಕ್ಚರ್ ಅಥವಾ ಥೈಮಸ್ ವುಲ್ಗರೀಸ್ ಹೆಸರಿನ ಪುದಿನಾ ಕುಟುಂಬಕ್ಕೆ ಸೇರಿದ ಈ ಔಷಧಯುಕ್ತ ಗಿಡದ ಎಣ್ಣೆ ಮೊಡವೆ ಚಿಕಿತ್ಸೆಯಲ್ಲಿ ಮಹತ್ವದ ಪಾತ್ರ ವಹಿಸುವುದು ಸಂಶೋಧನೆಯಲ್ಲಿ ಕಂಡು ಬಂದಿದೆ. ಮೊಡವೆ ಚಿಕಿತ್ಸೆಯಲ್ಲಿ ಯಾವಾಗಲೂ ನೈಸರ್ಗಿಕ ವಿಧಾನವನ್ನು ಎಲ್ಲರೂ ಸ್ವಾಗತಿಸುತ್ತಾರೆ. ಯಾಕೆಂದರೆ ಉಳಿದ ಔಷಧಗಳು ಚರ್ಮದ ಮೇಲೆ ಮಾಡುವ ಅಡ್ಡ ಪರಿಣಾಮಗಳು ಇದರಲ್ಲಿ ಇರುವುದಿಲ್ಲ. ಹೀಗಾಗಿ ಚರ್ಮಕ್ಕೆ ಹಾನಿಯಾಗುವುದಿಲ್ಲ.