ಇಂದು ಸಾರ್ವಜನಿಕ ವ್ಯಕ್ತಿ ಹಾಗೂ ಪ್ರಸಿದ್ಧ ನಟಿಯರಲ್ಲೊಬ್ಬಳಾಗಿದ್ದೇನೆ ಎಂದರೆ ಅದಕ್ಕೆ ಪ್ರಮುಖ ಕಾರಣ ನನ್ನ ಹಿಂದಿನ ಪರಿಶ್ರಮ ಎಂದು ಬಾಲಿವುಡ್ ಹಾಟ್ ಬೆಡಗಿ ಸನ್ನಿ ಲಿಯೋನ್ ಹೇಳಿದ್ದಾರೆ.
ಖಾಸಗಿ ಮಾಧ್ಯಮದೊಂದಿಗೆ ಮಾತನಾಡಿರುವ ಸನ್ನಿ ಲಿಯೋನ್, ಇಂದು ಸಾರ್ವಜನಿಕ ವ್ಯಕ್ತಿ ಹಾಗೂ ಪ್ರಸಿದ್ಧ ನಟಿಯರಲ್ಲೊಬ್ಬಳಾಗಿದ್ದೇನೆ ಎಂದರೆ ಅದಕ್ಕೆ ಪ್ರಮುಖ ಕಾರಣ ನನ್ನ ಹಿಂದಿನ ಪರಿಶ್ರಮ, ನನ್ನ ಹಿಂದಿನ ಕಥೆಯ ಕುರಿತು ನನಗೆ ಯಾವುದೇ ರೀತಿಯ ನಾಚಿಕೆಯಾಗಲೀ ಅಥವಾ ವಿಷಾದವಾಗಲಿ ಇಲ್ಲ ಎಂದು ಹೇಳಿದ್ದಾರೆ.
ನನಗೆ ಸಂಪ್ರದಾಯಿಕ ಪಾತ್ರ ಮಾಡಲು ಇಷ್ಟ. ಚಿತ್ರದ ಕಥೆಯಲ್ಲಿ ಸಂಪ್ರದಾಯಿಕ ಪಾತ್ರ ಅವಶ್ಯಕತೆ ಇದ್ದರೆ ಖಂಡಿತವಾಗಿಯೂ ನಟಿಸುತ್ತೇನೆ. ಚಿತ್ರಗಳನ್ನು ಆಯ್ಕೆ ಮಾಡುವಾಗ ಚಿತ್ರದ ಕಥೆಯಲ್ಲಿ ನನ್ನ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿರುತ್ತದೆ. ನಟನೆಯಲ್ಲಿ ಅಥವಾ ಪಾತ್ರಗಳಲ್ಲಿ ಇಂತಹದ್ದೇ ಪಾತ್ರ ಎಂಬ ನಿಯಂತ್ರಣದಲ್ಲಿರುವುದು ನನಗೆ ಇಷ್ಟವಿಲ್ಲ. ಈ ರೀತಿಯ ನಿಯಂತ್ರಣ ನಮ್ಮ ಸೃಜನಶೀಲತೆಯನ್ನು ಹಾಳು ಮಾಡುತ್ತದೆ. ಯಾವುದೇ ಪಾತ್ರಗಳನ್ನು ಆಯ್ಕೆ ಮಾಡುವಾಗ ಅಥವಾ ನಟಿಸುವಾಗ ವಿಭಿನ್ನ ರೀತಿಯಲ್ಲಿ ಮಾಡಲು ನಾನು ಭಯಸುತ್ತೇನೆ.
ಬಾಲಿವುಡ್ ಜೀವನದಲ್ಲಿ ನಾನು ಕೆಲವು ತಪ್ಪುಗಳನ್ನು ಮಾಡಿದ್ದೇನೆ. ಆದರೂ ನನಗೆ ಆ ತಪ್ಪುಗಳ ಕುರಿತಂತೆ ವಿಷಾದವಿಲ್ಲ. ನನ್ನ ಜೀವನದಲ್ಲಿ ನಾನು ಬಹಳಷ್ಟು ಕಲಿತಿದ್ದೇನೆ. ನನ್ನ ಈ ಕಲಿಕೆಯಿಂದಲೇ ಉನ್ನತ ಮಟ್ಟಕ್ಕೇರಲು ಸಾಧ್ಯವಾಗುತ್ತಿದೆ.
ಇದೇ ವೇಳೆ ಏಕ್ ಪಹೇಲಿ ಲೀಲಾ ಚಿತ್ರದ ಪ್ರಮೋಶನ್ ಗಾಗಿ ಗುಜರಾತ್ ಸೂರತ್ ಗೆ ಹೋಗಿದ್ದ ಸಂದರ್ಭದಲ್ಲಿ ಸನ್ನಿ ಲಿಯೋನ್ ಅವರ ಟಾಪ್ ಲೆಸ್ ಚಿತ್ರಗಳನ್ನು ಫೈವ್ ಸ್ಟಾರ್ ಹೋಟೆಲ್ ನಲ್ಲಿ ಹಾಕಲಾಗಿತ್ತು. ಸನ್ನಿ ಇತರೆ ಉದ್ದೇಶಕ್ಕಾಗಿ ಇಲ್ಲಿಗೆ ಬಂದಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ಸನ್ನಿ ವಿರುದ್ಧ ಎಫ್ಐಆರ್ ದಾಖಲಿಸಿದ್ದರ ಕುರಿತಂತೆ ಮಾತನಾಡಿರುವ ಸನ್ನಿ ಲಿಯೋನ್, ಈ ವಿಷಯ ನನ್ನ ಗಮನಕ್ಕೆ ಬಂದಿರಲಿಲ್ಲ. ನನಗೆ ಸುದ್ದಿ ಮಾಧ್ಯಮಗಳ ಮೂಲಕವಷ್ಟೇ ಈ ಸುದ್ದಿ ತಿಳಿದಿದ್ದು. ನಾನು ಯಾವುದೇ ತಪ್ಪನ್ನು ಮಾಡಿಲ್ಲ. ದೇಶದ ನಿಯಮಗಳನ್ನು ನಾನು ಉಲ್ಲಂಘಿಸಿಲ್ಲ. ಜನರನ್ನು ಹಾಗೂ ಅವರ ನಂಬಿಕೆಯನ್ನು ನಾನು ಯಾವಾಗಲೂ ಗೌರವಿಸುತ್ತೇನೆ ಮತ್ತು ಅದರಂತೆ ನಡೆದುಕೊಳ್ಳುತ್ತೇನೆ ಎಂದು ಸನ್ನಿ ಹೇಳಿದ್ದಾರೆ.