ಮನೋರಂಜನೆ

ಇಂದು ಸುರೇಶ್‌ ರೈನಾ ಮದುವೆ !

Pinterest LinkedIn Tumblr

8711Suresh-Rainas-Wife-Priyanka-Chaudhary-Images-Photos

ಅಂತೂ ಇಂತೂ ಭಾರತ ಕ್ರಿಕೆಟ್‌ ತಂಡದ ಆಟಗಾರ ಸುರೇಶ್‌ ರೈನಾ ಅವರು ಹಸೆಮಣೆ ಏರುವುದು ಖಚಿತವಾಗಿದೆ.

ವಿಶ್ವಕಪ್ ಸಮಯದಲ್ಲಿ ವಿವಾಹ ಸುರೇಶ್‌ ರೈನಾ ಹಾಗೂ ಅವರ ಬಾಲ್ಯದ ಗೆಳತಿ ಪ್ರಿಯಾಂಕಾ ಚೌಧರಿ ಜತೆ ವಿವಾಹ ನಿಶ್ಚಯವಾಗಿತ್ತು. 28ರ ಹರೆಯದ ರೈನಾ ಮತ್ತು ಪ್ರಿಯಾಂಕಾ ಬಾಲ್ಯ ಕಾಲದ ಮಿತ್ರರಾಗಿದ್ದು ಪ್ರಿಯಾಂಕಾ ಹಾಲೆಂಡ್‌ನಲ್ಲಿ ಉದ್ಯೋಗದಲ್ಲಿದ್ದಾರೆ. ನಿಶ್ಚಿತಾರ್ಥ ಕಾರ್ಯಕ್ರಮ ಬುಧವಾರ ನಡೆದಿದ್ದು ಲಭ್ಯ ಮಾಹಿತಿಗಳ ಪ್ರಕಾರ ಶುಕ್ರವಾರ ]ಇಂದು] ದೆಹಲಿಯ ಹೋಟೆಲ್‌ ಒಂದರಲ್ಲಿ ಇವರಿಬ್ಬರ ವಿವಾಹ ನಡೆಯಲಿದೆ.

ರೈನಾ ಹಾಗೂ ಪ್ರಿಯಾಂಕಾ ಚೌಧರಿ ಅವರ ಮನೆಯವರು ಹಲವು ಕಾಲದಿಂದ ಉತ್ತಮ ಸಂಪರ್ಕ ಹೊಂದಿದ್ದರು. ಇದೀಗ ಈ ಮನೆತನಗಳ ನಡುವೆ ನೆಂಟಸ್ಥಿಕೆ ಬೆಳೆಯಲಿದ್ದು, ಇಂದು ನಡೆಯಲಿರುವ ವಿವಾಹ ಕಾರ್ಯಕ್ರಮಕ್ಕೆ ಕುಟುಂಬದ ಆಪ್ತರು ಮಾತ್ರ ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ.

Write A Comment