ಮನೋರಂಜನೆ

ಮರೆಯಲಾರದ ಮೂರ್ಖರ ದಿನ…

Pinterest LinkedIn Tumblr

Siddharth Arora

ಏಪ್ರಿಲ್ ನನ್ನ ಪಾಲಿಗಂತೂ ವಿಶೇಷ ಮಾಸ. ಏಕೆಂದರೆ ನಾನು ಹುಟ್ಟಿದ್ದೂ ಇದೇ ತಿಂಗಳಲ್ಲಿ. ಮೂರ್ಖರ ದಿನದ ಬಗ್ಗೆ ಮಾತನಾಡಬೇಕೆಂದರೆ ಮೊದಲು ನಾವು ಬಾಲ್ಯದ ನೆನಪಿಗೆ ಮರಳಬೇಕು. ಚಿಕ್ಕವರಿದ್ದಾಗ ಏಪ್ರಿಲ್ ತಿಂಗಳಲ್ಲಿ ಯಾರು ಎಷ್ಟು ಜನರನ್ನು ಫೂಲ್ ಮಾಡುತ್ತಾರೆ ಎನ್ನುವುದೇ ದೊಡ್ಡ ಚರ್ಚೆಯಾಗುತ್ತಿತ್ತು. ನಾನಂತೂ ಚಿಕ್ಕವನಿದ್ದಾಗ ಈ ದಿನವನ್ನು ಬಹಳ ಮೋಜಿನಿಂದ ಕಳೆಯುತ್ತಿದ್ದೆ.

ಸಹಪಾಠಿಗಳನ್ನು ಗೋಳು ಹೊಯ್ದುಕೊಳ್ಳುವುದು ಇದ್ದೇ ಇತ್ತು. ಅಷ್ಟೇ ಅಲ್ಲದೇ, ಕೆಲವೊಮ್ಮೆ ಶಿಕ್ಷಕರನ್ನೂ ಫೂಲ್‌ ಮಾಡುತ್ತಿದ್ದೆವು.  ಈ ಬಾರಿ ನನ್ನ ಸಹನಟರ ಕಾಲೆಳೆದು ಕೀಟಲೆ ಮಾಡುವ ಯೋಜನೆ ಇದೆ.
ಸಿದ್ಧಾರ್ಥ ಅರೋರಾ
*
ನಾನು ಏಪ್ರಿಲ್ ಫೂಲ್ ಗೇಮ್ ಆಡಲು ಹೋಗಿ ಒಮ್ಮೆ ಫಜೀತಿ ಆಗಿತ್ತು. ಆಗಿನಿಂದ ಇಲ್ಲಿಯವರೆಗೂ ನಾನು ಯಾರನ್ನೂ ಫೂಲ್ ಮಾಡುವ ಗೋಜಿಗೆ ಹೋಗಿಲ್ಲ. ನನಗಾಗ 6 ಅಥವಾ 7 ವರ್ಷವಿರಬಹುದು. ನನ್ನ ತಾಯಿಯನ್ನು ಏಪ್ರಿಲ್ ಫೂಲ್ ಮಾಡಬೇಕು ಎಂದು ಮನಸ್ಸಾಯಿತು. ಸರಿ, ನನ್ನನ್ನು ಕಿಡ್ನ್ಯಾಪ್ ಮಾಡಲಾಗಿದೆ ಎಂಬ ರೀತಿಯಲ್ಲಿ ಅಮ್ಮನಿಗೆ ನೋಟ್ ಬರೆದಿಟ್ಟೆ. ಅಮ್ಮ ಭಯಗೊಂಡು ಅಕ್ಕ–ಪಕ್ಕದವರನ್ನೆಲ್ಲ ಕರೆದರು.

ಇಡೀ ಸೊಸೈಟಿಯೇ ಗಾಬರಿಗೊಂಡು ನನ್ನ ಹುಡುಕಾಟದಲ್ಲಿ ತೊಡಗಿತ್ತು. ಅಲ್ಲೇ ಒಂದು ಕಡೆ ಅಡಗಿ ಕುಳಿತ ನಾನು ಇದೆಲ್ಲವನ್ನು ತಮಾಷೆಯಾಗಿ ನೋಡುತ್ತಿದ್ದೆ. ನನ್ನ ತಂದೆ ಬಂದ ಮೇಲೆ ನನಗೆ ಭಯವಾಗಿ ಆಚೆ ಬಂದೆ. ಅಪ್ಪ ನಾಲ್ಕು ಏಟು ಬಾರಿಸಿದ್ದರು. ಅದೇ ಕೊನೆ, ಮತ್ತೆಂದೂ ಯಾರ ಮೇಲೂ ಈ ಫೂಲ್ ಪ್ರಯೋಗ ಮಾಡಿಲ್ಲ.
ರೋಹಿತ್ ರಾಯ್
*
ಏಪ್ರಿಲ್ ಬಂದರೆ ಸಾಕು, ಶಾಲಾ ದಿನಗಳಲ್ಲಿ ಅದೆಷ್ಟೋ ಜನರನ್ನು ಕಾಡಿಸಿ ಕೇಕೆ ಹಾಕುತ್ತಿದ್ದೆವು. ಒಮ್ಮೆ ನಾವೆಲ್ಲ ಸ್ನೇಹಿತರು ಸೇರಿ ನಮ್ಮ ಶಿಕ್ಷಕಿಯ ಪುಸ್ತಕದಲ್ಲಿ ಒಂದು ನಕಲಿ ಹಲ್ಲಿಯನ್ನು ತಂದು ಇಟ್ಟಿದ್ದೆವು. ಅದರಿಂದ ಭಯಗೊಂಡು ಮೊದಲು ನಮ್ಮ ಮೇಲೆ ರೇಗಾಡಿದರೂ ನಂತರ ನಮ್ಮೊಂದಿಗೆ ಸೇರಿ ನಕ್ಕು ಬಿಟ್ಟಿದ್ದರು.
ಮಾನ್ಸಿ ಶ್ರೀವಾತ್ಸವ್
*
ಹಿಂದೆಂದಿಗಿಂತಲೂ ಈ ದಿನ ನನ್ನ ಅತ್ಯಂತ ಮೋಜಿನ ‘ಫೂಲ್ ಡೇ’ ಆಗಲಿದೆ. ನಾವೆಲ್ಲ ಒಂದು ಅದ್ಭುತ ಯೋಜನೆಯನ್ನು ಹಾಕಿಕೊಂಡಿದ್ದೇವೆ. ಶುಭು ನಮ್ಮೆಲ್ಲರ ಸ್ನೇಹಿತೆ. ಅವಳಿಗೆ ಪ್ರೀತಿ, ಪ್ರೇಮ, ಡೇಟಿಂಗ್ ಎಂದರೆ ಬಹಳ ಸಿಟ್ಟು. ಇದೇ ಗುಂಪಿನಲ್ಲಿ ಅವಳಿಗೆ ಆಗದೇ ಇರುವ ಹುಡುಗನಿದ್ದಾನೆ. ನಾವೆಲ್ಲ ಸೇರಿ ಅವಳಿಗೆ ಅವನು ಪ್ರಪೋಸ್ ಮಾಡುವಂತೆ ‌ತಯಾರಿ ಮಾಡಿದ್ದೇವೆ. ಅವನು ಪ್ರಪೋಸ್ ಮಾಡಿದಾಗ ಅವಳು ಯಾವ ರೀತಿ ಪ್ರತಿಕ್ರಿಯಿಸಬಹುದು ಎನ್ನುವುದನ್ನು ನೋಡಲು ನಾವೆಲ್ಲ ಅತ್ಯಂತ ಕಾತರದಿಂದ ಕಾದಿದ್ದೇವೆ.
ರಾಮನ್ ಹೊಂಡಾ
*
ಈ ಬಾರಿ ಮಾಧುರಿ ದೀಕ್ಷಿತ್ ಅವರಿಗೆ ತಮಾಷೆ ಮಾಡುವ ತಯಾರಿಯಲ್ಲಿದ್ದೇನೆ. ಅವರ ನಗು ನೋಡದೇ ಬಹಳ ದಿನಗಳಾಗಿವೆ ಅದಕ್ಕೆ.
ಅಜಯ್ ಚೌಧರಿ‌
*
ಈ ಬಾರಿ ನಾನು ಗೌಹರ್ ಖಾನ್ ಅವರನ್ನು ಎಂದೂ ಮರೆಯಲಾಗದಂತಹ ರೀತಿಯಲ್ಲಿ ಫೂಲ್ ಮಾಡುವವನಿದ್ದೇನೆ. ನಕಲಿ ಮಿಸ್ ಇಂಡಿಯಾ ಕಿರೀಟ ನೀಡುವ ಮೂಲಕ ಅವರ ಪ್ರತಿಕ್ರಿಯೆಯನ್ನು ನೋಡುವ ಆತುರದಲ್ಲಿದ್ದೇನೆ.
ವಿವೇಕ್ ಮಿಶ್ರಾ
*
ಕಪಿಲ್ ಶರ್ಮಾ ಅವರನ್ನು ಫೂಲ್ ಮಾಡಿ ಮಜ ನೋಡುತ್ತೇನೆ.
ಶ್ವೇತಾ ಮುನ್ಷಿ

Write A Comment