ನೀಲಿ ಚಿತ್ರಗಳ ರಾಣಿ ಸನ್ನಿ ಲಿಯೋನ್ ಬಾಲಿವುಡ್ ನಲ್ಲಿ ತನ್ನ ‘ಹವಾ’ ಸೃಷ್ಟಿಸಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಇದೀಗ ಸನ್ನಿ ಮತ್ತೊಮ್ಮೆ ಬೆತ್ತಲಾಗಿಯೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿದ್ದಾರೆ.
ಹೌದು. ತನ್ನ ಹಾಟ್ ಅಭಿನಯದ ಮೂಲಕ ಚಿತ್ರರಂಗದಲ್ಲಿ ಸಾಕಷ್ಟು ಕೀರ್ತಿ ಗಳಿಸಿರುವ ಸನ್ನಿ ಲಿಯೋನ್ ಇದೀಗ ಕಾರೊಂದರ ಕಮರ್ಷಿಯಲ್ ಜಾಹಿರಾತಿನಲ್ಲಿ ಕಾಣಿಸಿಕೊಳ್ಳಲಿದ್ದು, ಇದರಲ್ಲಿ ಸಂಪೂರ್ಣ ಬೆತ್ತಲೆಯಾಗುವ ಮೂಲಕ ಕಾರಿನ ಸೌಂದರ್ಯವನ್ನು ಹೆಚ್ಚಿಸಲಿದ್ದಾಳಂತೆ.
ಈ ರೀತಿಯ ಜಾಹಿರಾತಿನಲ್ಲಿ ನಟಿಸಿರುವುದು ಸನ್ನಿಗೆ ತುಂಬಾ ಖುಷಿಯಾಗಿದ್ದು, ನಿಜಕ್ಕೂ ಇದೊಂದು ಸುಂದರ ಅನುಭವ ಎಂದಿದ್ದಾಳೆ. ಇನ್ನು ಕಾರಿನ ಕಂಪನಿಯಂತೂ ಸನ್ನಿ ನೋಡಿಯೇ ಕಾರು ಕೊಳ್ಳಲು ಜನ ಮುಗಿಬೀಳಬಹುದು ಎಂಬ ಲೆಕ್ಕಾಚಾರದಲ್ಲಿದೆ.
ಏನೇ ಇರಲಿ, ತಾನು ಬಾಲಿವುಡ್ ಮಾತ್ರವಲ್ಲ , ಯಾವ ಕ್ಷೇತ್ರದಲ್ಲಿಯಾದರೂ ‘ಸೈ’ ಎಂಬುದನ್ನು ಸನ್ನಿ ಮತ್ತೊಮ್ಮೆ ಸಾಬೀತು ಪಡಿಸಿದ್ದಂತೂ ಸತ್ಯ.