ಗೋವಾ: ಸರ್ಕಾರಿ ನೌಕರರು ಸ್ಲೀವ್ ಲೆಸ್, ಜೀನ್ಸ್ ಹಾಗೂ ಟೀ ಶರ್ಟ್ ಧರಿಸಿಕೊಂಡು ಕಛೇರಿಗೆ ಬರಬಾರದೆಂದು ಹೊರಡಿಸಿದ್ದ ಸುತ್ತೋಲೆಯನ್ನು ಗೋವಾ ಸರ್ಕಾರ ಹಿಂಪಡೆದಿದೆ.
ನೂತನವಾಗಿ ಮತ್ತೊಂದು ಸುತ್ತೋಲೆ ಹೊರಡಿಸಿರುವ ಸರ್ಕಾರ, ನೌಕರರು ಈ ಹಿಂದಿನಂತೆಯೇ ಬಟ್ಟೆ ಧರಿಸಿಕೊಂಡು ಬರಲು ಯಾವುದೇ ನಿರ್ಬಂಧವಿಲ್ಲವೆಂದು ಸ್ಪಷ್ಟಪಡಿಸಿದೆ. ಸರ್ಕಾರ ಈ ಹಿಂದೆ ಹೊರಡಿಸಿದ್ದ ಸುತ್ತೋಲೆಗೆ ಪ್ರಮುಖ ಪ್ರತಿ ಪಕ್ಷ ಕಾಂಗ್ರೆಸ್ ನಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ಅಲ್ಲದೇ ಕಾಂಗ್ರೆಸ್ ಶಾಸಕರೊಬ್ಬರು, ಸರ್ಕಾರಿ ನೌಕರರು ಅವರಿಷ್ಟ ಬಂದ ವಸ್ತ್ರ ಧರಿಸಲು ಸ್ವತಂತ್ರರಿದ್ದಾರೆ. ಸರ್ಕಾರ ಇದನ್ನು ಪ್ರಶ್ನಿಸುವುದು ಸರಿಯಲ್ಲವೆಂದು ಹೇಳಿದ್ದರಲ್ಲದೇ ಬಿಕಿನಿ ಧರಿಸಿಕೊಂಡು ಬಂದರೂ ಅಡ್ಡಿಪಡಿಸಬಾರದೆಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಸರ್ಕಾರ ಈಗ ಸುತ್ತೋಲೆ ಹಿಂಪಡೆದಿರುವ ಕಾರಣ ವಿವಾದ ತಣ್ಣಗಾದಂತಾಗಿದೆ.
