ರಾಷ್ಟ್ರೀಯ

5 ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ ಬಾಲಕರು

Pinterest LinkedIn Tumblr

1461rape-m759

ಲಕ್ನೋ: 5 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕಿಯೊಬ್ಬಳ ಮೇಲೆ 7 ಮತ್ತು 8 ನೇ ತರಗತಿಯ ಬಾಲಕರಿಬ್ಬರು ಅತ್ಯಾಚಾರವೆಸಗಿರುವ ದಾರುಣ ಘಟನೆ ರಾಯ್ ಬರೇಲಿ ಜಿಲ್ಲೆಯ ಮಹಾರಾಜಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಈ ಬಾಲಕಿ ಶಾಲೆಯಲ್ಲಿ ಟಾಯ್ಲೆಟ್ ಇಲ್ಲದ ಕಾರಣ ಬಯಲಿಗೆ ಹೋದ ವೇಳೆ ಆಕೆಯ ಮೇಲೆ ಈ ಇಬ್ಬರು ಅಪ್ರಾಪ್ತ ಬಾಲಕರು ಅತ್ಯಾಚಾರವೆಸಗಿದ್ದಾರೆಂದು ಹೇಳಲಾಗಿದೆ. ಈ ಘಟನೆಯಿಂದ ತೀವ್ರ ಆಘಾತಕ್ಕೊಳಗಾಗಿರುವ ಬಾಲಕಿ ಮನೆಗೆ ತೆರಳಿ ತನ್ನ ತಾಯಿಗೆ ವಿಷಯ ತಿಳಿಸಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.

ಅತ್ಯಾಚಾರಕ್ಕೊಳಗಾದ ಬಾಲಕಿಯ ತಾಯಿ ಮಹಾರಾಜಗಂಜ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ ಬಳಿಕ 7 ನೇ ತರಗತಿ ವಿದ್ಯಾರ್ಥಿಯನ್ನು ಬಂಧಿಸಿ ರಿಮ್ಯಾಂಡ್ ಹೋಮಿಗೆ ಕಳುಹಿಸಲಾಗಿದೆ. 8 ನೇ ತರಗತಿ ವಿದ್ಯಾರ್ಥಿ ಪರಾರಿಯಾಗಿದ್ದು, ಪೊಲೀಸರು ಈತನನ್ನು ಹುಡುಕುತ್ತಿದ್ದಾರೆ. ಬಾಲಕಿಯನ್ನು ವೈದ್ಯಕೀಯ ತಪಾಸಣೆಗೊಳಪಡಿಸಿದ ವೇಳೆ ಲೈಂಗಿಕ ದೌರ್ಜನ್ಯ ನಡೆದಿರುವುದು ಖಚಿತಪಟ್ಟಿದೆ ಎನ್ನಲಾಗಿದೆ.

Write A Comment