ಮನೋರಂಜನೆ

1999ರ ವಿಶ್ವಕಪ್: ಹೆಂಡತಿ`ಬಚ್ಚಿಟ್ಟ’ ರಹಸ್ಯ ಬಿಚ್ಚಿಟ್ಟ ಪಾಕ್ ಆಟಗಾರ ಸಕ್ಲೇನ್!

Pinterest LinkedIn Tumblr

Saqlain_Mushtaq

ನವದೆಹಲಿ: ಪ್ರೇಯಸಿಯನ್ನು, ಹೆಂಡತಿ ಎಂಬ ಹೆಡ್ ಆಫೀಸ್ ಇದ್ದರೂ ಇನ್ನೊಂದು `ಬ್ರಾಂಚ್ ಆಫೀಸ್’ ಅನ್ನು ಹೊರ ಪ್ರಪಂಚಕ್ಕೆ ಗೊತ್ತಾಗದಂತೆ ಸಂಭಾಳಿಸುವ ಹಲವಾರು ಕಥೆಗಳನ್ನು ಕೇಳಿದ್ದೇವೆ.

ಆದರೆ, ಪಾಕಿಸ್ತಾನ ಆಟಗಾರ ಸಕ್ಲೇನ್ ಮುಷ್ತಾಕ್ ಅವರದ್ದು ವಿಭಿನ್ನ ಕಥೆ. ಲೋಕದೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಾ ಸ್ವಂತ ಪತ್ನಿಯನ್ನು ಬಚ್ಚಿಡಲು ಹರಸಾಹಸ ಮಾಡಿದ `ಚುಪಾ ರುಸ್ತುಂ’ ಪ್ರಕರಣವನ್ನು ಅವರೇ ಖುದ್ದು ಹೇಳಿಕೊಂಡಿದ್ದಾರೆ.

ಅದರ ವಿವರ ಇಲ್ಲಿದೆ… ಇದೊಂದು ಸ್ವಾರಸ್ಯಕರ ಫ್ಲಾಷ್‍ಬ್ಯಾಕ್. ಇಂಗ್ಲೆಂಡ್‍ನಲ್ಲಿ 1999ರ ವಿಶ್ವಕಪ್ ನಡೆದ ಸಂದರ್ಭ ಅದು. ಟೂರ್ನಿಯಲ್ಲಿ ಭಾಗವಹಿಸಿದ್ದ ಪಾಕಿಸ್ತಾನ ಆಟಗಾರರಿಗೆ ತಮ್ಮೊಂದಿಗೆ ತಮ್ಮ ಪತ್ನಿಯರನ್ನೂ ಕರೆದುಕೊಂಡು ಹೋಗಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಅನುಮತಿ ನೀಡಿತ್ತು. ಆದರೆ, ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಸೆಮಿಫೈನಲ್ ಪ್ರವೇಶಿಸುತ್ತಲೇ ಪಿಸಿಬಿ ತನ್ನ ವರಸೆ ಬದಲಿಸಿ, ಸೆಮಿಫೈನಲ್ ಪಂದ್ಯ ಆಡುವ ಮುನ್ನ ಪಾಕಿಸ್ತಾನ ಆಟಗಾರರು ತಮ್ಮ ಪತ್ನಿಯರನ್ನು ಸ್ವದೇಶಕ್ಕೆ ಕಳುಹಿಸಬೇಕೆಂದು `ಹುಕುಂ’ ಮಾಡಿತು.

ಅಂದರ್ ಕೀ ಬಾತ್: ಪಿಸಿಬಿಯ ಹೇಳಿಕೆಯಂತೆ ಸಕ್ಲೇನ್ ತಮ್ಮ ಪತ್ನಿ ಸನಾ ಅವರನ್ನು ಕಳುಹಿಸಲು ಇಷ್ಟವಿರಲಿಲ್ಲ. ಅದಕ್ಕಾಗಿ ಅವರೊಂದು ಉಪಾಯ ಮಾಡಿದರು. ಮ್ಯಾಂಚೆಸ್ಟರ್ ನಲ್ಲಿ ಒಂದು ಹೋಟೆಲ್ ಕೊಠಡಿಯಲ್ಲಿ ತಮ್ಮ ಪತ್ನಿಯನ್ನು ಇರಿಸಿದರು. ಹೊರಗೆ ಹೊರಡುವಾಗ ಪತ್ನಿಗೆ ಯಾರಾದರೂ ಬಂದು ರೂಮಿನ ಕದ ತಟ್ಟಿದರೆ, ವಾರ್ಡ್‍ರೋಬ್ ನೊಳಗೆ ಹೋಗಿ ಬಚ್ಚಿಟ್ಟುಕೋ ಎಂದು ಹೇಳಿಕೊಟ್ಟಿದ್ದರು.

ಗುಟ್ಟು ರಟ್ಟು: ಇದು ಹೇಗೋ ಸಹ ಆಟಗಾರರಾದ ಮಹಮ್ಮದ್ ಯೂಸುಫ್, ಅಜರ್ ಮೆಹಮೂದ್‍ಗೆ ಗೊತ್ತಾಯಿತು. ಒಂದು ದಿನ ಸಕ್ಲೇನ್ ಪತ್ನಿಯೊಂದಿಗೆ ಹೋಟೆಲ್ ಕೊಠಡಿಯಲ್ಲಿದ್ದಾಗ, ಅಲ್ಲಿಗೆ ಬಂದರು. ಅವರು ಬಂದ ಸುಳಿವು ಗೊತ್ತಾಗ ಕೂಡಲೇ ಸನಾ, ವಾಡ್ರ್ ರೋಬ್‍ನೊಳಗೆ ಬಚ್ಚಿಟ್ಟುಕೊಂಡರು. ಆದರೆ, ಒಳಗೆ ಬಂದ ಯೂಸುಫ್, ಅಜರ್, ಜೋರಾಗಿ ನಕ್ಕು ಪತ್ನಿಯನ್ನು ಹೊರಗೆ ಕರೆ ಮಾರಾಯ ಅಂತ ಹೇಳಿದಾಗ, ಸಕ್ಲೇನ್ ಅಚ್ಚರಿಪಟ್ಟರು.

Write A Comment