ಮನೋರಂಜನೆ

‘ಹಿರಿಯ ವಕೀಲ ರಾಮ್‌ ಜೇಠ್ಮಲಾನಿ– ನಟಿ ಲೀನಾ ಚಂದಾವರ್ಕರ್‌ ಮುತ್ತಿನ ಕಥೆ!

Pinterest LinkedIn Tumblr

ramm-leennnaaaa

ಹಿರಿಯ ವಕೀಲ ರಾಮ್‌ ಜೇಠ್ಮಲಾನಿ ಮತ್ತು ಹಿರಿಯ ನಟಿ ಲೀನಾ ಚಂದಾವರ್ಕರ್‌ ಅವರೀಗ ಸಾಮಾಜಿಕ ಜಾಲತಾಣಗಳ ಮುತ್ತಿನ ಮಾತಿಗೆ ತುತ್ತಾಗಿದ್ದಾರೆ.

91 ವರ್ಷದ ರಾಮ್‌ ಜೇಠ್ಮಲಾನಿ ಮತ್ತು ಗಾಯಕ ಕಿಶೋರ್‌ ಕುಮಾರ್‌ ಪತ್ನಿ ಲೀನಾ ತುಟಿಗೆ ತುಟಿ ಸೇರಿಸಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಎಲ್ಲರ ಬಾಯಲ್ಲೂ ಈಗ ‘ರಾಮ್‌–ಲೀನಾ’ ಬಗ್ಗೆಯೇ ಮಾತು ‘ಕಥೆ’!

ಫೆಬ್ರುವರಿ 16ರಂದು ನಡೆದ ‘ದಿ ಹಮ್‌ ಲಾಗ್‌’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಮ್‌– ಲೀನಾ ಪರಸ್ಪರ ಅಪ್ಪಿಕೊಂಡು ಚುಂಬನದ ಬಂಧನಕ್ಕೆ ಒಳಗಾದ ಚಿತ್ರಗಳು ಈಗ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಈ ಹಿಂದೆ ನಟ ಧರ್ಮೇಂದ್ರ ಅವರಿಗೆ ಮುತ್ತು ಕೊಟ್ಟು, ಧರ್ಮೇಂದ್ರ ಅವರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಜೇಠ್ಮಲಾನಿ ಈಗ ತಮ್ಮ ಮುತ್ತಿನ ಬಾಣವನ್ನು ಲೀನಾ ಕಡೆಗೆ ಬಿಟ್ಟು ಮತ್ತೆ ಸುದ್ದಿಯಲ್ಲಿದ್ದಾರೆ.

ಜೇಠ್ಮಲಾನಿ ಪುಷ್ಪಶರಕ್ಕೆ ಸೋತು ಅವರ ಅಪ್ಪುಗೆಯ ಬಿಸಿಯಲ್ಲಿ ಬಂಧಿಯಾದ ಲೀನಾ ಹಿಂದೆ ಬಾಲಿವುಡ್‌ನ ಜನಪ್ರಿಯ ನಾಯಕಿಯಾಗಿದ್ದವರು.

‘ಮನ್‌ ಕಾ ಮೀಟ್‌’, ‘ಮೆಹಬೂಬ್‌ ಕಿ ಮೆಹಂದಿ’, ‘ಬೈರಾಗ್‌’ ಚಿತ್ರಗಳ ಮೂಲಕ ಬಾಲಿವುಡ್‌ನಲ್ಲಿ ತಮ್ಮ ನಟನೆಯ ಅಚ್ಚೊತ್ತಿದ್ದ ಲೀನಾ ತಮ್ಮ ಮೊದಲ ಪತಿ ಸಿದ್ಧಾರ್ಥ್‌ ಬಂದೋಡ್ಕರ್‌ ಅವರ ನಿಧನದ ನಂತರ ಜನಪ್ರಿಯ ಹಿನ್ನೆಲೆ ಗಾಯಕ ಕಿಶೋರ್‌ ಕುಮಾರ್‌ ಅವರನ್ನು ವರಿಸಿದ್ದರು.

Write A Comment