ಮನೋರಂಜನೆ

ನೀನೇ ಬರಿ ನೀನೇ’ ಚಿತ್ರದ ಇತರ ವಿಶೇಷಗಳೇನು?

Pinterest LinkedIn Tumblr

dee

ಬಹಳ ತಡವಾಗಿದೆ, ನಿಜ. ಏಕೆಂದರೆ ನಾನು ಪೂರ್ಣ ಪ್ರಮಾಣದ ಸಿನಿಮಾ ಮೇಕರ್ ಅಲ್ಲ. ಆರಂಭದಲ್ಲಿ ಯಾವ ರೀತಿ ಸಿನಿಮಾ ರೂಪುಗೊಳ್ಳಬೇಕು ಎಂದುಕೊಂಡಿದ್ದೆನೋ ಅದಕ್ಕಿಂತ ಬೇರೆಯ ರೀತಿ ಸಿನಿಮಾ ರೂಪುಗೊಂಡಿದೆ.ಸಣ್ಣ ಸಿನಿಮಾ ಎಂದುಕೊಂಡು ಮುಂದುವರೆದೆವು, ಬೆಳೆಯುತ್ತಾ ಬೆಳೆಯುತ್ತಾ ದೊಡ್ಡದಾಯಿತು.ಪ್ರತಿಯೊಂದನ್ನು ಸಾಣೆ ಹಿಡಿದ ಕಾರಣಕ್ಕೆ ಮತ್ತಷ್ಟು ತಡವಾಯಿತು.

ಮಾರ್ಚ್‌ ಅಥವಾ ಏಪ್ರಿಲ್‌ನಲ್ಲಿ ಚಿತ್ರ ತೆರೆಕಾಣಲಿದೆ. ಅಂದಹಾಗೆ, ತಡವಾಗಿದ್ದರಿಂದ ಸಿನಿಮಾ ಮತ್ತಷ್ಟು ಸುಧಾರಿಸಿದೆ. 92 ದಿನಗಳಲ್ಲಿ 106 ದೃಶ್ಯಗಳನ್ನು ಚಿತ್ರೀಕರಿಸಿದ್ದೆವು. ಹೆಚ್ಚಾಗಿಯೇ ಶೂಟಿಂಗ್ ನಡೆಸಿದೆವು. ಆ ದೃಶ್ಯಗಳ ಎಡಿಟಿಂಗ್ ಇತ್ಯಾದಿ ಕಾರ್ಯಗಳು ನಡೆಯಬೇಕಿತ್ತು.

*ಮನೋಮೂರ್ತಿ ಸಂಗೀತ ಮತ್ತು ಜಯಂತ್ ಕಾಯ್ಕಿಣಿ ಸಾಹಿತ್ಯದ ‘ನೀನೇ ಬರಿ ನೀನೇ’ ಆಲ್ಬಂ ಮೂಲದ ಸಿನಿಮಾ ಇದು. ಅಲ್ಲಿನ ಹಾಡುಗಳನ್ನು ಪೂರ್ಣ ಬಳಸಿಕೊಳ್ಳಲಾಗಿದೆಯೇ?

ಚಿತ್ರದಲ್ಲಿ ಎಂಟು ಹಾಡುಗಳಿವೆ. ಆಲ್ಬಂನಲ್ಲಿನ ಏಳು ಹಾಡುಗಳನ್ನು ಬಳಸಿಕೊಳ್ಳಲಾಗಿದೆ. ಶ್ರೇಯಾ ಘೋಷಾಲ್ ಹಾಡಿರುವ ಒಂದು ಹಾಡನ್ನು ಬಳಸಿಕೊಳ್ಳಲಾಗಿದೆ. ಮೊದಲು ಚಿತ್ರಕ್ಕೆ ಹಾಕಿದ್ದ ಹಾಡುಗಳನ್ನು ಕರೆಕ್ಷನ್ ಮಾಡಿದೆವು, ಪುನಃ ಶೂಟ್ ಮಾಡಿದೆವು. ಚಿತ್ರದ ಜೀವಾಳವೇ ಸಂಗೀತ.

ಮೂಲ ಆಲ್ಬಂನಲ್ಲಿದ್ದ ಹಾಡನ್ನು ಚಿತ್ರಕ್ಕೆ ಬಳಸಿಕೊಂಡಿದ್ದರೂ ಮತ್ತೆ ರೀರೆಕಾರ್ಡಿಂಗ್ ಮಾಡಲಾಗಿದೆ. ಈ ಮೊದಲು ಹಾಡುಗಳು ಭಾವಗೀತೆಯಂತಿದ್ದವು. ಹೆಚ್ಚು ಸಂಗೀತದ ಉಪಕರಣಗಳನ್ನು ಬಳಸಿಕೊಂಡು ಹಳೆಯ ಗೀತೆಗಳನ್ನು ಪುನರ್ ರೂಪಿಸಿದ್ದೇವೆ.

ಡಿಸ್ಕೋ ಹಾಡಿನಲ್ಲಿ ಸಾಮಾನ್ಯವಾಗಿ ಇಂಗ್ಲಿಷ್ ಪದಗಳ ಬಳಕೆ ಇರುತ್ತದೆ. ಆದರೆ ನಮ್ಮ ಆ ಹಾಡಿನಲ್ಲಿ ಒಂದು ಸಣ್ಣ ಇಂಗ್ಲಿಷ್ ಪದವೂ ಇಲ್ಲ. ‘ಮೈಸೂರ ಮಲ್ಲಿಗೆ’ ಚಿತ್ರದಲ್ಲಿ ಕೆ.ಎಸ್. ನರಸಿಂಹ ಸ್ವಾಮಿ ಅವರ ಹಾಡುಗಳನ್ನು ಬಳಸಿಕೊಂಡು ಚಿತ್ರಕಥೆ ಹೆಣೆದಿದ್ದರು. ಇಲ್ಲಿ ಹಾಡುಗಳ ಥೀಮ್ ಸುತ್ತ ಕಥೆ ಸೃಷ್ಟಿಸಲಾಗಿದೆ.

*ಪರ್ತಕರ್ತ, ನಿರೂಪಕನ ನಿಮ್ಮ ಅನುಭವ ನಿರ್ದೇಶನಕ್ಕೆ ಯಾವ ರೀತಿ ನೆರವಾಯಿತು?

ಇಪ್ಪತ್ತು ವರ್ಷಗಳ ನನ್ನ ಅನುಭವ ಸಿನಿಮಾದ ನಿರೂಪಣೆಯ ಭಾಷೆ ಮತ್ತು ಕಥೆಯ ನಿರೂಪಣೆ ದೃಷ್ಟಿಯಲ್ಲಿ ನೆರವಿಗೆ ಬಂದಿತು. ಟಿ.ವಿ. ಸಣ್ಣ ಮಾಧ್ಯಮ, ಸಿನಿಮಾ ದೊಡ್ಡ ಮಾಧ್ಯಮ. ಇಲ್ಲಿ ಸೂಕ್ಷ್ಮಗಳನ್ನು  ಗಮನಿಸಬೇಕು.

ಜನರು ದುಡ್ಡು ಕೊಟ್ಟು ಬಂದು ನೋಡುತ್ತಾರೆ, ನಮ್ಮ ಮೇಲೆ ಜವಾಬ್ದಾರಿ ಇರುತ್ತದೆ ಎನ್ನುವುದು ಸ್ಪಷ್ಟವಿತ್ತು. ನಿರೂಪಕನಾಗಿ ಜನರಿಗೆ ಏನು ಹೇಳಿದರೆ ಇಷ್ಟವಾಗುತ್ತದೆ, ಅವರ ಪ್ರತಿಕ್ರಿಯೆ ಏನು ಎನ್ನುವುದನ್ನು ನಾನು ಅರ್ಥಮಾಡಿಕೊಂಡಿದ್ದೆ. ಈ ಅನುಭವಗಳೆಲ್ಲ ನಿರ್ದೇಶನಕ್ಕೆ ಅನುಕೂಲವಾದವು.

*‘ನೀನೇ ಬರಿ ನೀನೇ’ ಚಿತ್ರದ ಇತರ ವಿಶೇಷಗಳೇನು?

ಚಿತ್ರತಂಡದ ನಾವೆಲ್ಲ ಹಲವು ಸಲ ಕುಳಿತು ಚಿತ್ರಕಥೆ ಬಗ್ಗೆ ಚರ್ಚಿಸಿ ಬದಲಾವಣೆ ಮಾಡಿದ್ದೇವೆ. ಚಿತ್ರಕಥೆಯನ್ನು ನಟಿಸಿ ನಟಿಸಿ ಬರೆದಿದ್ದು. ಮ್ಯೂಸಿಕ್ ಚಿತ್ರದಲ್ಲಿ ಕಾಮಿಡಿ ಇರಬೇಕೇ ಬೇಡವೆ ಎಂದು ಚರ್ಚಿಸಿದೆವು. ಕಾಮಿಡಿ, ಸೆಂಟಿಮೆಂಟ್‌, ಎಮೋಷನ್‌ ಇದೆ.

ಸಿನಿಮಾ ನೋಡಿದರೆ ಇದು ಬೇಡವಾಗಿತ್ತು ಅದು ಬೇಡವಾಗಿತ್ತು ಎನಿಸುವುದಿಲ್ಲ. ಅನವಶ್ಯವಾಗಿ ಯಾವುದೂ ಕಾಣಿಸುವುದಿಲ್ಲ. ವಿಶ್ವಾಸದಿಂದ ಹೇಳುವೆ ಈ ಚಿತ್ರ ಸೋಲಲು ಸಾಧ್ಯವೇ ಇಲ್ಲ.  ಸಿನಿಮಾ ನೋಡಿದ ಯಾರೂ ಇದು ಕೆಟ್ಟ ಸಿನಿಮಾ ಎಂದು ಹೇಳುವುದಿಲ್ಲ.

*ಧಾರಾವಾಹಿಗಳಲ್ಲಿ ನಟಿಸುತ್ತಿದ್ದವರು ನೀವು. ಕಿರುತೆರೆ ನಟನೆಯಿಂದ ದೂರವಾಗಿದ್ದು ಏಕೆ?

ನಾನು ತೆರೆಯ ಮೇಲೆ ವೃತ್ತಿ ಆರಂಭಿಸಿದ್ದು ನಟನೆಯಿಂದ. ನಟನೆಯ ಬಗ್ಗೆ ಬಾಲ್ಯದಿಂದಲೂ ವಿಪರೀತ ಆಸಕ್ತಿ. ನನ್ನ ಬಗ್ಗೆ ಹಲವರಿಗೆ ಗೊತ್ತಿಲ್ಲದ ವಿಷಯ ಅಂದರೆ, ನಾನು ಕಾಲೇಜು ದಿನಗಳಲ್ಲಿ  ನಾಟಕಗಳಲ್ಲಿ ತೊಡಗಿಕೊಂಡಿದ್ದೆ. ನಂತರ ಶಾಲೆ–ಕಾಲೇಜು ವಿದ್ಯಾರ್ಥಿಗಳಿಗೆ ನಟನೆಯನ್ನು ಕಲಿಸುತ್ತಿದ್ದೆ. ಶಾಲಾ ಕೊಠಡಿಯಲ್ಲಿ, ಪಠ್ಯಕ್ರಮದಲ್ಲಿ ನಟನೆಯನ್ನು ಹೇಗೆ ಬಳಸಬೇಕು ಎನ್ನುವುದನ್ನು ಹೇಳಿಕೊಟ್ಟೆ.

ನಟನೆಯಲ್ಲಿ ನನಗೆ ಒಳ್ಳೆಯ ಆಸಕ್ತಿ ಇರುವುದರಿಂದಲೇ ‘ನೀನೇ ಬರಿ ನೀನೇ’ ಸಿನಿಮಾದಲ್ಲಿ ಒಳ್ಳೆಯ ನಟನೆಯನ್ನು ಹೊರ ತೆಗೆಯಲು ಸಾಧ್ಯವಾಯಿತು. ನಟನೆಯ ಕೌಶಲವನ್ನು ನನ್ನ ಸಿನಿಮಾಗಳಲ್ಲಿ ತೋರಿಸಬೇಕು ಎನ್ನುವುದು ನನ್ನ ಆಸೆ. ನಟನೆ ಪ್ರತಿಭೆ ಅಲ್ಲ, ಮಾನವ ಸಹಜ ಸಾಮರ್ಥ್ಯ ಎನ್ನುವುದು ನನ್ನ ಅಭಿಪ್ರಾಯ ಮತ್ತು ಅನುಭವ.

*ಪ್ರಸಿದ್ಧರ ಜೀವನ ಚರಿತ್ರೆಯನ್ನು ತೆರೆಗೆ ತಂದ ಅನುಭವ ಹೇಗಿತ್ತು?

ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿ ಮತ್ತು ಆದಿಚುಂಚನಗಿರಿಯ ಬಾಲಗಂಗಾಧರನಾಥ ಸ್ವಾಮೀಜಿ ಅವರ ಬಯಾಗ್ರಫಿ ಮಾಡಿದ್ದೇನೆ. ಬಯಾಗ್ರಫಿ ಮಾಡುವುದು ಚಾಲೆಂಜ್ ಆಗಿ  ಕಾಣಿಸುತ್ತದೆ.

ನಟನೆಯ ಬಗ್ಗೆ ಆಸಕ್ತಿ ಇದ್ದಂತೆ ಸಂಗೀತದ ಬಗ್ಗೆಯೂ ನನಗೆ ಆಸಕ್ತಿ ಇದೆ. ಆ ಕಾರಣಕ್ಕೆ ಈ ಸಿನಿಮಾ ಮಾಡಿದ್ದು. ನಾನೇ ಒಂದು ಆಲ್ಬಂ ಮಾಡಲು ಹೊರಟಿದ್ದು, ಟ್ರ್ಯಾಕ್ ಸಿದ್ಧವಾಗಿದೆ. ಅದು ಗಜಲ್ ರೀತಿಯಲ್ಲಿ ಮೂಡಿ ಬರಲಿದೆ.

*ಇಂಗ್ಲಿಷ್ ಸಿನಿಮಾ ನಿರ್ದೇಶನದ ಪ್ರಯತ್ನ ಎಲ್ಲಿಗೆ ಬಂತು?

‘ನೀನೇ ಬರಿ ನೀನೇ’ ತೆರೆಗೆ ಬಂದ ನಂತರ ಆ ಚಿತ್ರ ಕೈಗೆತ್ತಿಕೊಳ್ಳುವೆ. ಅದು ಒಂದು ಸ್ಪಷ್ಟವಾದ, ಒಳ್ಳೆಯ ಕಥೆ. ನನ್ನಿಂದ ಆ ಚಿತ್ರದ ಕಥೆಯನ್ನು ಕೇಳಿರುವ ಎಲ್ಲ ನಿರ್ಮಾಪಕರೂ ನಾವು ಬಂಡವಾಳ ಹೂಡುತ್ತೇವೆ ಎಂದಿದ್ದಾರೆ.

Write A Comment