ಮನೋರಂಜನೆ

ಓವರ್‌ ಜಾಗಿಂಗ್ ಬೇಡ

Pinterest LinkedIn Tumblr

295152-running

ಲಂಡನ್: ಆರೋಗ್ಯದ ಬಗ್ಗೆ ಅತಿಯಾದ ಕಾಳಜಿ ಹೊಂದಿರುವವರು, ಸ್ವಲ್ಪ ಹೆಚ್ಚು ಎನ್ನುವಷ್ಟೇ ವ್ಯಾಯಾಮ ಮಾಡುತ್ತಾರೆ. ಆದರೆ, ಸಿಕ್ಕಾಪಟ್ಟೆ ಜಾಗಿಂಗ್ ಒಳ್ಳೆಯದ್ದಲ್ಲಎನ್ನುತ್ತಾರೆ ವಿಜ್ಞಾನಿಗಳು.

ಹಿತ ಮಿತವಾದ ಜಾಗಿಂಗ್ ಉತ್ತಮ ಆರೋಗ್ಯದ ಗುಟ್ಟು. ಸುಮಾರು 1000ಕ್ಕೂ ಹೆಚ್ಚು ಆರೋಗ್ಯವಂತ ಜಾಗರ್ಸ್ ಹಾಗೂ ಜಾಗಿಂಗ್ ಮಾಡದವರನ್ನು ವಿಜ್ಞಾನಿಗಳು ಸುಮಾರು 12 ವರ್ಷಗಳ ಕಾಲ ಅಧ್ಯಯನಕ್ಕೆ ಒಳಪಡಿಸಿದ್ದರು.

ಅಧ್ಯಯನದ ವೇಳೆ ಜಾಗಿಂಗ್ ಅವಧಿ, ವಾರದಲ್ಲಿ ಎಷ್ಟು ದಿನ ವೇಗವಾಗಿ ನಡೆಯುತ್ತಾರೆ ಹಾಗೂ ಅದರ ವೇಗವನ್ನು ದಾಖಲಿಸಿಕೊಳ್ಳಲಾಗಿದೆ. ಜಾಗಿಂಗ್‌ನಲ್ಲಿ ಹೆಚ್ಚು ಬೆವರಿಳಿಸುವವರು , ಹೆಚ್ಚೇನು ತ್ರಾಸ ಮಾಡಿಕೊಳ್ಳದವರಿಗಿಂತ ಬೇಗ ಸಾಯುತ್ತಾರೆ. ಮಿತವಾಗಿ ಜಾಗ್ ಮಾಡುವವರ ಆಯುಷ್ಯ ಹೆಚ್ಚು ಎಂದಿದೆ ಅಧ್ಯಯನ. ವಾರದಲ್ಲಿ ಒಂದರಿಂದ ಎರಡೂವರೆ ತಾಸು ಜಾಗ್ ಮಾಡುವವರು ದೀರ್ಘಾಯುಷಿಗಳಾಗಿರುತ್ತಾರೆ. ವಾರದಲ್ಲಿ ಮೂರು ಬಾರಿ ಜಾಗಿಂಗ್ ಮಾಡುವುದು ಸೂಕ್ತ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

Write A Comment