ಅಂತರಾಷ್ಟ್ರೀಯ

ಪಫೆಕ್ಟ್ ಜೋಡಿ ಸಿಗಲಿಕ್ಕಿಲ್ಲ ಜೋಕೆ!

Pinterest LinkedIn Tumblr

jodi

ನ್ಯೂಯಾರ್ಕ್: ಮಿಸ್ಟರ್ ಪರ್ಫೆಕ್ಟ್ ಅಥವಾ ಮಿಸ್ ಪರ್ಫೆಕ್ಟ್‌ಗಾಗಿ ಹುಡುಕುತ್ತಾ ಕುಳಿತರೆ ಸಂಗಾತಿಯೇ ಸಿಗದೆ ಒಂಟಿಯಾಗಿ ಉಳಿದು ಬಿಟ್ಟೀರಾ ಜೋಕೆ ಅಂತಿದ್ದಾರೆ ಸಂಶೋಧಕರು.

ಎಲ್ಲಾ ಅರ್ಥದಲ್ಲೂ ತಮಗೆ ತಕ್ಕವರನ್ನು ಹುಡುಕುತ್ತಾ, ಅಂಥವರನ್ನೆಂದೂ ಭೇಟಿಯಾಗಲಾರದೆ ನಿರಂತರ ಅನ್ವೇಷಣೆಯಲ್ಲೇ ಕಳೆದು ಹೋಗಿಬಿಡುವ ಸಾಧ್ಯತೆಗಳೇ ಹೆಚ್ಚು. ಹಾಗಾಗಿ ಸ್ವಲ್ಪ ಮಟ್ಟಿಗೆ ಸರಿ ಎನ್ನಿಸುವ ಸಂಗಾತಿಯೊಂದಿಗೆ ಜೀವನರಂಭಿಸಿ ಅನ್ನೋದು ಅವರ ಕಿವಿಮಾತು.

ಆತ್ಮ ಸಖ/ಸಖಿಗಾಗಿ ಹುಡುಕುವ ಮನುಷ್ಯನ ಸ್ವಭಾವ ಇಂದು ನಿನ್ನೆಯದಲ್ಲ. ಆದಿ ಮಾನವರೂ ಕೂಡಾ ಇಂಥ ಅನ್ವೇಷಣೆ ನಡೆಸುತ್ತಿದ್ದರು. ಈ ಹುಡುಕಾಟದಲ್ಲೇ ಸಂಗಾತಿಯಿಲ್ಲದೆ, ವಂಶದ ಕುಡಿಗಳನ್ನೂ ಪಡೆಯಲಾರದೆ, ಜನಾಂಗದ ವಿಕಾಸಕ್ಕೆ ಕೊಡುಗೆ ನೀಡಲಾರದೆ ಉಳಿದ ಉದಾಹರಣೆಗಳೂ ಇವೆ ಅಂತಾರೆ ಸಂಶೋಧಕರು.

”ಆದಿ ಮಾನವರು ಅತ್ಯುತ್ತಮ ಸಂಗಾತಿಯಿಂದ ಉತ್ತಮ ಮಕ್ಕಳನ್ನು ಪಡೆಯುವ ಹುಡುಕಾಟದಲ್ಲಿ ತೊಡಗಿದ್ದರು. ಅವರ ಮುಂದಿದ್ದದ್ದು ಎರಡೇ ಆಯ್ಕೆಗಳು ಒಂದೋ ಲಭ್ಯವಿರುವ ಕಡಿಮೆ ಗುಣಮಟ್ಟದ ಸಂಗಾತಿಯೊಡನೆ ಕೂಡಿ, ಕಳಪೆ ಗುಣಮಟ್ಟದ ಸಂತಾನವನ್ನು ಹೊಂದುವ ಅಪಾಯವನ್ನು ಎದುರಿಸುವುದು ಅಥವಾ ಪರ್ಫೆಕ್ಟ್ ಸಂಗಾತಿಗಾಗಿ ಕಾಯುತ್ತಾ ಅಂಥ ಸಂಗಾತಿ ದೊರೆಯದೇ ಉಳಿದುಬಿಡುವುದು,” ಎಂದು ಮಿಶಿಗನ್ ವಿವಿಯ ಮೈಕ್ರೊಬಯಾಲಜಿ ಅಂಡ್ ಮಾಲಿಕ್ಯುಲರ್ ಜೆನೆಟಿಕ್ಸ್ ವಿಭಾಗದಲ್ಲಿ ಪ್ರೊಫೆಸರ್ ಆಗಿರುವ ಕ್ರಿಸ್ ಅದಾಮಿ ವಿವರಿಸುತ್ತಾರೆ.

ಆದರೆ ಈ ಪಫೆಕ್ಟ್ ಮ್ಯಾಚ್‌ನ ಹುಡುಕಾಟದ ಹುಚ್ಚು ಎಲ್ಲರಿಗೂ ಇರುವುದಿಲ್ಲ ಅಂತಾರೆ ಕ್ರಿಸ್.

ಅದಾಮಿ ಅವರು ತಮ್ಮ ಸಹೋದ್ಯೋಗಿಯೊಡಗೂಡಿ ರಚಿಸಿರುವ ಈ ಸಂಶೋಧನಾ ಪ್ರಬಂಧ ಜರ್ನಲ್ ಸೈಂಟಿಫಿಕ್‌ನಲ್ಲಿ ಪ್ರಕಟವಾಗಿದೆ.

Write A Comment