ಮನೋರಂಜನೆ

ಎ.ಎಮ್.ಆರ್ ರಮೇಶ್ ನಿರ್ದೇಶನದ ‘ಗೇಮ್’ನಲ್ಲಿ ನಾಯಕಿ ಮನಿಷಾ ಕೊಯಿರಾಲಾ

Pinterest LinkedIn Tumblr

moni

ಬಾಲಿವುಡ್‌ನ ಖ್ಯಾತ ನಟಿ ಮನಿಷಾ ಕೊಯಿರಾಲಾ ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಎ.ಎಮ್.ಆರ್ ರಮೇಶ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಗೇಮ್’ ಸಿನಿಮಾದಲ್ಲಿ ಇವರು ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಸರ್ಜಾ ನಾಯಕ ಎನ್ನುವುದು ಮತ್ತೊಂದು ವಿಶೇಷ.

ಈ ಮೊದಲು ಅರ್ಜುನ್ ಸರ್ಜಾ ಮತ್ತು ಮನಿಷಾ ತಮಿಳಿನ ‘ಮುದಲ್ವನ್’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಹದಿನಾರು ವರ್ಷದ ನಂತರ ಮತ್ತೆ ಈ ಜೋಡಿ ತೆರೆಯ ಮೇಲೆ ಕಾಣಿಸಿಕೊಳ್ಳಲು ರೆಡಿ ಆಗುತ್ತಿದೆ.

‘ಶುಕ್ರವಾರ (ಫೆ.6) ಮಧ್ಯಾಹ್ನ ಮನಿಷಾ ಅವರಿಗೆ ಕತೆ ಹೇಳಿದೆ. ತುಂಬಾ ಖುಷಿಯಿಂದ ಒಪ್ಪಿಕೊಂಡರು. ಸದ್ಯ ಬಾಲಿವುಡ್‌ಲ್ಲಿ ಅವರು ಸಿನಿಮಾ ಮಾಡುತ್ತಿದ್ದಾರೆ. ಈ ಮಧ್ಯೆ ನನ್ನ ಚಿತ್ರಕ್ಕೆ ಡೇಟ್ ಕೊಟ್ಟರು. ಫೆ.16ಕ್ಕೆ ಚಿತ್ರಕ್ಕೆ ಮುಹೂರ್ತ. ಎರಡು ಭಾಷೆಯಲ್ಲಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದೇನೆ. ಇದೇ ಮೊದಲ ಬಾರಿಗೆ ಮನಿಷಾ ಕನ್ನಡ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ನನಗಂತೂ ತುಂಬಾ ಖುಷಿ ಆಗುತ್ತಿದೆ’ ಅಂತಾರೆ ನಿರ್ದೇಶಕ ರಮೇಶ್.

ನಿರ್ದೇಶಕರ ಜತೆ ಅರ್ಜುನ್ ಸರ್ಜಾ ಈ ಮೊದಲು ಸಿನಿಮಾ ಮಾಡಿದ್ದಾರೆ. ಗೇಮ್ ಈ ಜೋಡಿಯ ಎರಡನೇ ಸಿನಿಮಾ. ತನಿಖಾಧಿಕಾರಿಯ ಪಾತ್ರದಲ್ಲಿ ಅರ್ಜುನ್ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ರವಿ ಕಾಳೆ ಸೇರಿದಂತೆ ಹೆಸರಾಂತ ನಟರು ತಾರಾಗಣದಲ್ಲಿದ್ದಾರೆ. ಶ್ಯಾಮ್ ಖಳನಾಯಕನ ಪಾತ್ರ ನಿರ್ವಹಿಸುತ್ತಿದ್ದಾರೆ. ಅಟ್ಟಹಾಸ ಸಿನಿಮಾದ ನಂತರ ರಮೇಶ್ ನಿರ್ದೇಶಿಸುತ್ತಿರುವ ಚಿತ್ರವಿದು.

Write A Comment