ಮನೋರಂಜನೆ

ಮೆಟ್ರೊ ನಗರಗಳ ಇಂದಿನ ತಲೆಮಾರಿನವರ ಕಥೆ ‘‘ಕಹಿ’ ಚಿತ್ರೀಕರಣ ಪೂರ್ಣ

Pinterest LinkedIn Tumblr

kahi

ಚಿತ್ರದ ಮುಹೂರ್ತದ ನಂತರ ಸರಿಯಾಗಿ ಐದು ತಿಂಗಳ ತರುವಾಯ ‘ಕಹಿ’ ಚಿತ್ರತಂಡ ಮತ್ತೆ ಪತ್ರಕರ್ತರೆದುರು ಹಾಜರಾಗಿತ್ತು. ಈ ಬಾರಿ ಚಿತ್ರೀಕರಣ ಪೂರ್ಣಗೊಳಿಸಿಕೊಂಡು ಬಂದಿರುವ ತಂಡ ಸಾಕಷ್ಟು ಮಾಹಿತಿಯನ್ನು ಹೊತ್ತು ತಂದಿತ್ತು. ಮೆಟ್ರೊ ನಗರಗಳ ಇಂದಿನ ತಲೆಮಾರಿನವರ ಕಥೆ ‘ಕಹಿ’. ನಾಲ್ವರು ಮುಖ್ಯ ಪಾತ್ರಧಾರಿಗಳ ಮೂಲಕ ಕಥೆ ಹೇಳಲು ಹೊರಟಿದ್ದಾರೆ ನಿರ್ದೇಶಕ ಅರವಿಂದ ಶಾಸ್ತ್ರಿ.

ನಿರ್ದೇಶಕನಾಗಲೇ ಬೇಕೆಂಬ ಹೆಬ್ಬಯಕೆಯಿಂದ ಒಂದು ವರ್ಷ ನಿರ್ದೇಶನದ ಅಧ್ಯಯನ ಮಾಡಿ ಉದ್ಯಮಕ್ಕೆ ಬಂದವರು ಅರವಿಂದ್. ಎರಡು ತಿಂಗಳ ಅವಧಿಯಲ್ಲಿ ಸಾಗುವ ಕಥೆಯಲ್ಲಿ ನರ್ತಕಿ, ಬರಹಗಾರ್ತಿ, ಒಬ್ಬ ಮನೋವಿಕೃತಿಗೊಳಗಾದ ವ್ಯಕ್ತಿ ಹಾಗೂ ಒಬ್ಬ ಮಾದಕ ವಸ್ತುಗಳ ಕಳ್ಳಸಾಗಣೆದಾರ– ಇವರ ನಡುವೆ ಕಥೆ ನಡೆಯುತ್ತದೆ. ಇವರ ಜೀವನದ ಘಟನೆಗಳು ತೆರೆಯ ಮೇಲೆ ಸಿಹಿ ಕಹಿಯಾಗಿ ಮೂಡಿಬರಲಿವೆ.

ಕೃಷಿ ತಾಪಂಡ ಪ್ರಬುದ್ಧ ಮತ್ತು ಜವಾಬ್ದಾರಿಯುತ ಬರಹಗಾರ್ತಿ. ಮಾತಂಗಿ ಪ್ರಸನ್ನ ನೃತ್ಯಗಾತಿಯಾಗಿದ್ದರೆ, ಹರಿ ಶರ್ವ ಮಾದಕ ವಸ್ತು ಸಾಗಣೆದಾರ ಹಾಗೂ ಸೂರಜ್ ಗೌಡ ಮನೋವಿಕೃತನ ಪಾತ್ರ ನಿರ್ವಹಿಸಿದ್ದಾರೆ. ಮಾತಂಗಿ ಕಳೆದ ಇಪ್ಪತ್ತು ವರ್ಷಗಳಿಂದಲೂ ನೃತ್ಯವನ್ನೇ ವೃತ್ತಿಯಾಗಿ ಸ್ವೀಕರಿಸಿದವರು.

ಈವರೆಗೆ ವೇದಿಕೆ ಮೇಲೆ ಪ್ರತಿಭೆ ಪ್ರದರ್ಶಿಸುತ್ತಿದ್ದ ಅವರಿಗೆ ಈಗ ಭಿನ್ನ ಮಾಧ್ಯಮದಲ್ಲಿ ತಮ್ಮ ಕಲೆ ಪದರ್ಶಿಸುವ ಅವಕಾಶ ಸಿಕ್ಕಿದ್ದಕ್ಕಾಗಿ ಸಂತಸ. ಸೂರಜ್ ಅವರ ಅಭಿಪ್ರಾಯದಲ್ಲಿ ‘ಕಹಿ’ ಎಂಬುದು ಕೇವಲ ರುಚಿ ಅಲ್ಲ. ಅದೊಂದು ಅನುಭವ. ಮತ್ತೊಬ್ಬ ನಟ ಹರಿ ರಂಗಭೂಮಿ ಹಿನ್ನೆಲೆಯವರು.

ಮೊದಲ ಬಾರಿ ಸಿನಿಮಾಕ್ಕೆ ರಾಗ ಸಂಯೋಜನೆ ಮಾಡುತ್ತಿರುವ ಮಿಥುನ್ ಮುಕುಂದನ್ ಅವರಿಗೆ ತಮ್ಮ ಸಂಗೀತವನ್ನು ಜನ ಇಷ್ಟಪಡುವ ವಿಶ್ವಾಸವಿದೆ. ಕೆಲವು ಪ್ರಯೋಗಗಳಿಗೂ ಅವರು ಕೈ ಹಾಕಿದ್ದಾರಂತೆ. ಕಿಶೋರಿ ಬಲ್ಲಾಳ್, ರಮೇಶ್ ಭಟ್ ತಾರಾಗಣ
ದಲ್ಲಿದ್ದಾರೆ. ರೇಖಾ ವೆಂಕಟೇಶ್ ಹಾಗೂ ನಾಗಶೀಲಾ ಪ್ರಕಾಶ್ ಹೊಸಬರ ಈ ಪ್ರಯತ್ನಕ್ಕೆ ಹಣ ಹೂಡಿದ್ದಾರೆ.

Write A Comment