ಮನೋರಂಜನೆ

ಮಾರ್ಚ್‌ನಲ್ಲಿ ಕನ್ನಡತಿ ಅನುಷ್ಕಾ ಶೆಟ್ಟಿ ಪ್ರಮುಖ ಪಾತ್ರದ ತೆಲುಗು ಚಿತ್ರ ‘ರುದ್ರಮಾದೇವಿ’?

Pinterest LinkedIn Tumblr

Psmec26Anushka

ಕನ್ನಡತಿ ಅನುಷ್ಕಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಬಹುನಿರೀಕ್ಷಿತ ‘ರುದ್ರಮಾದೇವಿ’ ತೆಲುಗು ಚಿತ್ರ ಮಾರ್ಚ್‌ನಲ್ಲಿ ಬೆಳ್ಳಿ ತೆರೆಗೆ ಬರುವ ಸಾಧ್ಯತೆ ಇದೆ.

‘ಚಿತ್ರದ ಬಿಡುಗಡೆಯ ದಿನಾಂಕ ಇನ್ನೂ ನಿರ್ಧರಿಸಿಲ್ಲ. ಆದರೆ, ಮಾರ್ಚ್‌ನಲ್ಲಿ ಬಿಡುಗಡೆಗೊಳಿಸಲು ಆಲೋಚಿಸುತ್ತಿದ್ದೇವೆ’ ಎಂದು ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕ ಗುಣಶೇಖರ್‌ ತಿಳಿಸಿದ್ದಾರೆ.

ಚಿತ್ರದಲ್ಲಿ ಅನುಷ್ಕಾ ಕಾಕತೀಯ ಮನೆತನದ ರಾಣಿ ‘ರುದ್ರಮಾದೇವಿ’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೇರಡು ಪ್ರಮುಖ ಪಾತ್ರಗಳಲ್ಲಿ ರಾಣಾ ದಗ್ಗುಬಾಟಿ ಮತ್ತು ಅಲ್ಲು ಅರ್ಜುನ್‌ ನಟಿಸಿದ್ದಾರೆ.

ಚಿತ್ರವನ್ನು ೩ಡಿಯಲ್ಲಿ ಚಿತ್ರೀಕರಿಸಲಾಗಿದ್ದು, ತೆಲುಗು ಚಿತ್ರರಂಗದಲ್ಲಿ ಇದುವರೆಗೆ ತಯಾರಾದ ಅತಿ ದುಬಾರಿ ಚಿತ್ರ ಇದು ಎಂದು ಹೇಳಲಾಗಿದೆ. ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಸಂಗೀತ ಸಂಯೋಜನೆ ಮಾಡಿದ್ದಾರೆ. ರಾಷ್ಟ್ರೀಯ ಪ್ರಶಸ್ತಿ ವಿಜೇತ ಕಲಾವಿದ ಥೋಟ ಥರಣಿ ಅವರು ಚಿತ್ರಕ್ಕೆ ಸೆಟ್‌ ತಯಾರಿಸಿದ್ದರು.

ಈ ಹಿಂದೆ ತೆರೆಗೆ ಬಂದಿದ್ದ ಐತಿಹಾಸಿಕ ‘ಅರುಂಧತಿ’ ಚಿತ್ರ ಗಲ್ಲಾಪೆಟ್ಟಿಗೆ ದೋಚಿತ್ತು. ಆ ಚಿತ್ರದಲ್ಲೂ ಅನುಷ್ಕಾ, ರಾಣಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರ ನಟನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.

Write A Comment