ಮನೋರಂಜನೆ

ಐಟಂ ಸಾಂಗ್‌ ಒಪ್ಪಿಕೊಳ್ಳುವಾಗ ನಟಿಯರು ಎಚ್ಚರದಿಂದಿರಬೇಕು: ಹಿರಿಯ ನಟಿ ಶಬಾನಾ ಅಜ್ಮಿ ಕಿವಿಮಾತು

Pinterest LinkedIn Tumblr

psmec27ShabanaAzmi

‘ಐಟಂ ಸಾಂಗ್‌ಗಳನ್ನು ಒಪ್ಪಿಕೊಳ್ಳುವಾಗ ಸಿನಿಮಾ ನಟಿಯರು ಎಚ್ಚರದಿಂದಿರಬೇಕು’ ಎಂದು ಹಿರಿಯ ನಟಿ ಮತ್ತು ಸಾಮಾಜಿಕ ಕಾರ್ಯಕರ್ತೆ ಶಬಾನಾ ಅಜ್ಮಿ ಕಿವಿಮಾತು ಹೇಳಿದ್ದಾರೆ.

ಇತ್ತೀಚೆಗೆ ಕೋಲ್ಕತ್ತ ಸಾಹಿತ್ಯೋತ್ಸವದ ವಿಶೇಷ ಗೋಷ್ಠಿಯಲ್ಲಿ ಶಬಾನಾ, ಐಟಂ ಸಾಂಗ್‌ ಮಾಡುವ ಸಂದರ್ಭದಲ್ಲಿ ನಟಿಯರ ಜವಾಬ್ದಾರಿ ಏನು ಎಂಬ ಬಗ್ಗೆ ಮಾತನಾಡಿದರು.

‘ನೀವು ಹೀಗೆಯೇ ಮಾಡಿ ಎಂದು ನಾನು ಹೇಳುವುದಿಲ್ಲ. ಆದರೆ ನೀವು ಮಾಡುವಂತಹ ಹಾಡು ಮಕ್ಕಳಲ್ಲಿ ಲೈಂಗಿಕತೆ ಕೆರಳಿಸಬಹುದು. ಮದುವೆಯಂತಹ ಸಮಾರಂಭಗಳಲ್ಲಿ ಮೂರು– ನಾಲ್ಕು ವರ್ಷದ ಮಕ್ಕಳು ಆ ಕೆಟ್ಟ ಹಾಡಿಗೆ ಕುಣಿಯುತ್ತಿರುತ್ತಾರೆ ಎಂಬ ವಾಸ್ತವದ ಅರಿವು ನಿಮಗಿರಬೇಕು. ಏನು ಮಾಡಬೇಕು ಎಂಬ ನಿರ್ಧಾರವನ್ನು ನೀವೇ ತೆಗೆದುಕೊಳ್ಳಿ. ಆದರೆ ಅದು ಸರಿಯಾದ ನಿರ್ಧಾರವಾಗಿರಲಿ’ ಎಂದು ಅವರು ಹೇಳಿದ್ದಾರೆ.

ಸ್ವಯಂ ನಿಯಂತ್ರಣ ಎನ್ನುವುದು ವೃತ್ತಿಜೀವನದ ಭಾಗವಾಗಬೇಕು ಎಂದಿರುವ ಅಜ್ಮಿ,  ಹಾಗೆಂದು ‘ನೈತಿಕ ಪೊಲೀಸ್‌ಗಿರಿ’ಗೆ ಶರಣಾಗಬೇಕಿಲ್ಲ ಎಂಬುದನ್ನೂ ಒತ್ತಿ ಹೇಳಿದ್ದಾರೆ.

‘‘ಚಿತ್ರರಂಗಕ್ಕೆ ಸ್ವಯಂ ನಿಯಂತ್ರಣ ಅತ್ಯಂತ ಅಗತ್ಯ. ಇದರ ನಡುವಣ ಗೆರೆ ತುಂಬ ತೆಳ್ಳಗಿರುತ್ತದೆ. ಒಂದೊಮ್ಮೆ ಐಟಂ ಸಾಂಗ್‌ ಮಾಡುವುದು ತಪ್ಪು ಎಂದು ನೀವು ಹೇಳಿದರೆ ‘ಈ ಥರದ ಬಟ್ಟೆಗಳನ್ನು ತೊಡಬೇಡಿ, ಆ ಥರದ ಪಾತ್ರಗಳನ್ನು ಮಾಡಬೇಡಿ’ ಎಂದೆಲ್ಲ ನೈತಿಕ ಪೊಲೀಸರು ನಿಮ್ಮನ್ನು ನಿರ್ದೇಶಿಸಲು ತೊಡಗುತ್ತಾರೆ. ಖಂಡಿತ ನೀವು ಅವರಿಗೆ ಶರಣಾಗಬೇಕಿಲ್ಲ. ನೀವು ಏನನ್ನು ಮಾಡುತ್ತೀರೋ ಅದು ನಿಮ್ಮೊಳಗಿಂದಲೇ ಬಂದದ್ದಾಗಿರಲಿ’’ ಎಂದೂ ಅವರು ಸಲಹೆ ನೀಡಿದ್ದಾರೆ.

Write A Comment