ಮನೋರಂಜನೆ

ಸನ್ನಿ ಲಿಯೊನ್ ಮ್ಯೂಸಿಕ್ ವಿಡಿಯೋ

Pinterest LinkedIn Tumblr

Sunnu leona-Feb 7-2014-036

ಸನ್ನಿ ಲಿಯೊನ್ ಬಾಲಿವುಡ್‌ನಲ್ಲಿ ಮೆಲ್ಲನೇ ತಮ್ಮ ಛಾಪನ್ನು ಬೀರುತ್ತಿದ್ದಂತೆ, ಮತ್ತೊಂದು ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಅದೇನೆಂದರೆ ಸನ್ನಿ ಹಾಗೂ ಇವರ ಪತಿ ಡೇನಿಯಲ್ ವೆಬರ್ ಹೊಸ ಮ್ಯೂಸಿಕ್ ವಿಡಿಯೋದಲ್ಲಿ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ. ಇದೇ ತಿಂಗಳಲ್ಲಿ ಈ ವಿಡಿಯೋದ ಕೆಲಸ ಆರಂಭವಾಗಲಿದೆ. ಸನ್ನಿ ಈಗಾಗಲೇ ಜನಪ್ರಿಯ ನಟಿ ಎಂಬುದೇನೊ ನಿಜ. ಆದರೆ ಈಗ ಪತಿಯ ಜತೆ ಮ್ಯೂಸಿಕ್ ವಿಡಿಯೋದಲ್ಲಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಇವರು ತುಂಬ ಎಕ್ಸೈಟ್ ಆಗಿದ್ದಾರಂತೆ.

ಬಿಗ್ ಬಾಸ್ ಸ್ಪರ್ಧಿ ಅಲಿ ಕುಲಿ ಮಿರ್ಜಾ ಕೂಡ ಇದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಪಡ್ಡೆಗಳಲ್ಲಿ ಈ ವಿಡಿಯೋ ಕುರಿತು ಕುತೂಹಲ ಶುರುವಾಗಿದೆ. ಬೇರೆ ನಟರ ಜತೆ ತುಂಬ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಸನ್ನಿ, ಇದೀಗ ಪತಿಯ ಜತೆ ಹೇಗೆ ಕಾಣಿಸಿಕೊಳ್ಳಬಹುದು ಎಂಬುದರ ಚರ್ಚೆಯೂ ಮುಂದುವರಿದಿದೆ.
**

ಅಜರ್ ಚಿತ್ರದಲ್ಲಿ ಕರೀನಾ ಇಲ್ಲ
ಕರೀನಾ ಕಪೂರ್ ಇತ್ತೀಚೆಗೆ ಭರ್ಜರಿ ಬಿಝಿಯಾಗಿದ್ದಾರೆ. ಸಿನಿಮಾ ಮೇಲೊಂದು ಸಿನಿಮಾ ಮಾಡುತ್ತಿರುವ ಅವರು ಬಹು ನಿರೀಕ್ಷೆಯ ಪ್ರಾಜೆಕ್ಟ್ ಕೈ ಬಿಟ್ಟಿದ್ದಾರೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಅಜುರುದ್ದೀನ್ ಅವರ ಆತ್ಮಕತೆಯ ಮೇಲಾಗುತ್ತಿರುವ ಚಿತ್ರದಲ್ಲಿ ಸಂಗೀತ ಪಾತ್ರದಲ್ಲಿ ಕರೀನಾ ಕಾಣಿಸಬೇಕಿತ್ತು. ಆದ್ರೆ ಈಗ ಬದಲಾಗಿದೆ.

ಅಂತೋಣಿ ಡಿಸೋಜಾ ನಿರ್ದೇಶನದ ಈ ಚಿತ್ರದ ಶೂಟಿಂಗ್ ಬೇಸಿಗೆ ಹೊತ್ತಿಗೆ ಆರಂಭವಾಗಬಹುದು. ಆದರೆ ಈಗಾಗಲೇ ಕರೀನಾ ಕೈಯಲ್ಲಿ ಸಿಕ್ಕಾಪಟ್ಟೆ ಚಿತ್ರಗಳಿವೆ. ಅವುಗಳನ್ನು ಮುಗಿಸಲು ಸಮಯವಿಲ್ಲ. ಇನ್ನು ಮತ್ತೊಂದು ಹೊಸ ಸಿನಿಮಾವನ್ನು ಒಪ್ಪಿಕೊಳ್ಳಲು ಅವರಿಗೆ ಇಷ್ಟವಿಲ್ಲ. ಹೀಗಾಗಿ ಈ ಪ್ರಾಜೆಕ್ಟ್‌ನಿಂದ ಹೊರ ಬಿದ್ದಿದ್ದಾರೆ.

ತಮ್ಮ ಬಿಝಿ ಶೆಡ್ಯೂಲ್ ಬಗ್ಗೆ ನಿರ್ದೇಶಕರಿಗೆ ಕೂಡ ಮನವರಿಕೆ ಮಾಡಿಕೊಟ್ಟು ಸಂಗೀತ ಪಾತ್ರಕ್ಕೆ ಎಳ್ಳುನೀರು ಬಿಟ್ಟಿದ್ದಾರೆ.

ಮೂಲಗಳ ಪ್ರಕಾರ, ಕರೀನಾ ಮೊದಲು ಸಲ್ಮಾನ್ ಖಾನ್ ಜತೆ ಭಜರಂಗಿ ಭೈಜಾನ್‌ನಲ್ಲಿ ಬಿಝಿ ಆಗಿದ್ದಾರೆ. ಇದು ಈದ್ ಸಮಯದಲ್ಲಿ ಬಿಡುಗಡೆಯಾಗಬೇಕು. ನಂತರ ಅಭಿಷೇಕ್ ಚೌಬೇ ಅವರ ಉಡ್ತಾ ಪಂಜಾಬ್‌ನಲ್ಲಿ ಶಾಹಿದ್ ಹಾಗೂ ಆಲಿಯಾ ಭಟ್ ಜತೆ ನಟಿಸಬೇಕು. ಹೀಗಾಗಿ ಅವರಿಗೆ ಹೊಸ ಪ್ರಾಜೆಕ್ಟ್ ಒಪ್ಪಿಕೊಳ್ಳಲಾಗುತ್ತಿಲ್ಲ.

ಯಾಕೋ ಇಮ್ರಾನ್ ಜತೆ ನಟಿಸುವ ಅದೃಷ್ಟ ಕರೀನಾ ಅವರಿಗಿಲ್ಲ ಅಂದೆನಿಸುತ್ತದೆ. ಏಕೆಂದರೆ ಈ ಹಿಂದೆ ಕೂಡ ಕರೀನಾ ಹಾಗೂ ಇಮ್ರಾನ್ ಸಿನಿಮಾವೊಂದರಲ್ಲಿ ನಟಿಸಬೇಕಿತ್ತು. ಆದ್ರೆ ಯಾಕೋ ಪ್ರಾಜೆಕ್ಟ್ ಮುಂದುವರೆಯಲಿಲ್ಲ.
**

ಎಕ್ಸ್ ಹೆಸರು ಅಳಿಸಿದ ಆಮಿ
ನಟಿ ಏಮಿ ಜಾಕ್ಸನ್ ತಮ್ಮ ಕೈ ಮೇಲಿನ ಹಚ್ಚೆ ಅಳಿಸಿಹಾಕಿದ್ದಾರೆ. ಬಾಲಿವುಡ್ ನಟ ಪ್ರತೀಕ್ ಬಬ್ಬರ್ ಜತೆ ಓಡಾಡಿಕೊಂಡಿದ್ದ ಏ್ಯಮಿ ಒಂದಿಷ್ಟು ಸಮಯ ಡೇಟಿಂಗ್‌ನಲ್ಲಿದ್ದರು. ಆ ಸಮಯದಲ್ಲಿ ಮೇರಾ ಪ್ಯಾರ್ ಮೇರಾ ಪ್ರತೀಕ್ ಅಂತ ತೋಳಿನ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದರು. ಆದ್ರೆ ಈಗ ಅವರ ಕೈಮೇಲೆ ಏನು ಕಾಣಿಸುತ್ತಿಲ್ಲ. ಎಲ್ಲವನ್ನು ಅಳಿಸಿ ಹಾಕಿದ್ದಾರೆ. ಬಾಯ್‌ಫ್ರೆಂಡ್ ಇಲ್ಲದ ಮೇಲೆ ಹೆಸರು ಇಟ್ಕೊಂಡು ಏನು ಮಾಡುವುದು ಅನ್ನೋದು ಏಮಿ ಲೆಕ್ಕಾಚಾರವೇ ಇರಬಹುದು. ಮೂಲಗಳ ಪ್ರಕಾರ, ಮೊದಲು ಏನನ್ನೂ ಯೋಚಿಸದೆ ಟ್ಯಾಟೂ ಹಾಕಿಸಿಕೊಂಡಿದ್ದ ಏಮಿ ಇನ್ಮೆಲೆ ಯಾರ ಹೆಸರನ್ನು ಬರೆದುಕೊಳ್ಳುವುದಿಲ್ಲ ಅಂತ ತಮ್ಮ ಸ್ನೇಹಿತರ ಬಳಿ ಹೇಳಿಕೊಂಡಿದ್ದಾರೆ.
**

ಅಭಿಷೇಕ್ ಬಚ್ಚನ್ ಫ್ಲ್ಯಾಟ್ ಖರೀದಿ
ಅಭಿಷೇಕ್ ಬಚ್ಚನ್ ಹೊಸ ಮನೆ ಖರೀದಿ ಮಾಡುವ ಕುರಿತು ಈಗಾಗಲೇ ಅನೇಕ ವದಂತಿಗಳು ಸುಳಿದಾಡಿದ್ದವು. ಆದರೆ ಅದಾವುದೂ ಖಚಿತವಾಗಿರಲಿಲ್ಲ.

ಆದರೆ ಇದೀಗ ಮುಂಬಯಿಯ ವೊರ್ಲಿ ಏರಿಯಾದಲ್ಲಿ ಅಭಿಷೇಕ್ ಫ್ಲ್ಯಾಟ್ ಬುಕ್ ಮಾಡಿದ್ದಾರೆ. ಸ್ಕೈಲಾರ್ಕ್ ಟಾವರ್ಸ್‌ನ 37ನೇ ಮಹಡಿಯಲ್ಲಿನ ಈ ಫ್ಲ್ಯಾಟ್ ಬೆಲೆ 41.14 ಕೋಟಿ ರೂ.

ಅತ್ಯಂತ ಸುಸಜ್ಜಿತವಾದ ಈ ಮನೆಯಲ್ಲಿ ಫ್ಯಾಮಿಲಿ ರೂಮ್ ಸೇರಿದಂತೆ ಐದು ಬೆಡ್‌ರೂಮ್‌ಗಳಿವೆ. ಶ್ರೀಮಂತರೇ ಹೆಚ್ಚಾಗಿ ಇರುವ ಈ ಪ್ರದೇಶದಲ್ಲಿ ಅಭಿಷೇಕ್ ಮನೆಯಿರುವುದು ಆ್ಯನಿಬೆಸೆಂಟ್ ರಸ್ತೆಯಲ್ಲಿ. ಈ ಮನೆಯ ಸ್ಟ್ಯಾಂಪ್ ಶುಲ್ಕದ ಮೊತ್ತವೇ 2.05 ಕೋಟಿ ರೂ. ಎಂದು ಹೇಳಲಾಗಿದೆ.

ಇದರೊಂದಿಗೆ ಅಭಿಷೇಕ್ ಅವರ ಬಹುದಿನಗಳ ಕನಸು ನನಸಾದಂತಾಗಿದೆ.

Write A Comment