ಮನೋರಂಜನೆ

ಅಪ್ಪನ ಮಗಳು ಸೋನಂ; ಬದುಕಿನ ಕುರಿತು ತಂದೆಯ ಸಲಹೆ

Pinterest LinkedIn Tumblr

sonam

ಉಡುಗೆ, ಮೇಕಪ್ ವಿಷಯದಲ್ಲಿ ಅನೇಕರಿಂದ ಮೆಚ್ಚುಗೆಗೆ ಪಾತ್ರರಾಗಿರುವ ನಟಿ ಸೋನಂ ಕಪೂರ್ ತಮ್ಮ ಬದುಕಿನ ಎಲ್ಲಾ ವಿಷಯಗಳ ಕುರಿತು ತಂದೆಯ ಸಲಹೆ ಪಡೆಯುತ್ತಾರೆ. ‘ನನ್ನ ಕೆಲಸದ ಸೂಕ್ಷ್ಮಗಳಿಂದ ಹಿಡಿದು ಯಾರಾದರೂ ಹುಡುಗ ಇಷ್ಟವಾದರೆ ಅವನ ಸಕಲೇಷ್ಟದವರೆಗೆ ಎಲ್ಲವನ್ನೂ ಅಪ್ಪ ಅನಿಲ್‌ ಕಪೂರ್‌ ಜೊತೆ ಚರ್ಚಿಸುತ್ತೇನೆ. ಆದರೆ ಅವರು ಅದನ್ನು ನನ್ನ ಅಮ್ಮನಲ್ಲಿ ಕೂಡ ಹೇಳದಂತೆ ಗುಟ್ಟು ಕಾಪಾಡುತ್ತಾರೆ. ನನಗೆ ಅವರ ಸಲಹೆ ತುಂಬಾ ಮುಖ್ಯ. ಮುಕ್ತವಾಗಿ ಅವರು ಇರುವುದರಿಂದಲೇ ಎಲ್ಲವನ್ನು ಹಂಚಿಕೊಳ್ಳಬೇಕು ಎನಿಸುತ್ತದೆ. ನಿತ್ಯವೂ ಅವರಿಂದ ಕಲಿಯುತ್ತಲೇ ಇರುತ್ತೇನೆ’ ಎಂದು ಸೋನಂ ಹೇಳುವಾಗ ಮುಖದ ಮೇಲೆ ದೊಡ್ಡ ಮಂದಹಾಸವಿತ್ತು.

‘ಡಾಲಿ ಕಿ ಡೋಲಿ’ ಹಿಂದಿ ಚಿತ್ರದ ಪ್ರದರ್ಶನದಲ್ಲಿ ನಿರತರಾಗಿರುವ ಅವರು ಸಿನಿಮಾ ಹೊರತುಪಡಿಸಿ ಒಂದೆರಡು ಮಾತನಾಡುವಾಗ ಈ ಸಂಗತಿಯನ್ನು ಹಂಚಿಕೊಂಡರು. ಮುಖದ ಮೇಲೆ ಹೊಡೆದಂತೆ ಮಾತನಾಡುವ, ಅತಿ ಮುಕ್ತ ಸ್ವಭಾವದ ವಧುವಿನ ಪಾತ್ರವನ್ನು ಅವರು ಈ ಸಿನಿಮಾದಲ್ಲಿ ನಿರ್ವಹಿಸಿದ್ದಾರೆ. ‘ನಾನು ಎಲ್ಲಾ ಸಿನಿಮಾಗಳಿಗೂ ಹೋಂವರ್ಕ್‌ ಮಾಡಿಕೊಳ್ಳುತ್ತೇನೆ. ಈ ಸಿನಿಮಾ ಚಿತ್ರೀಕರಣ ಶುರುವಾಗುವ ಮೊದಲಿನಿಂದಲೂ ಸಾಕಷ್ಟು ಪುಸ್ತಕಗಳನ್ನು ಓದಿದೆ’ ಎಂದರು.

ಅಭಿಷೇಕ್‌ ಡೋಗ್ರಾ ನಿರ್ದೇಶಿಸಿರುವ ‘ಡಾಲಿ ಕಿ ಡೋಲಿ’ ಚಿತ್ರವನ್ನು ಅರ್ಬಾಜ್‌ ಖಾನ್‌ ನಿರ್ಮಿಸಿದ್ದಾರೆ. ಪುಳಕಿತ್‌ ಸಾಮ್ರಾಟ್‌, ರಾಜ್‌ಕುಮಾರ್‌ ರಾವ್‌ ಹಾಗೂ ವರುಣ್‌ ಶರ್ಮ ಇತರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜನವರಿ 23ರಂದು ಸಿನಿಮಾ ತೆರೆಕಾಣಲಿದೆ.

Write A Comment