ಮನೋರಂಜನೆ

ಮಾರ್ಚ್‍ನಲ್ಲಿ ತ್ರಿಶಾಳ ಮದುವೆಯಂತೆ?

Pinterest LinkedIn Tumblr

trisha

ಚೆನ್ನೈ: ತಮಿಳಿನ ಜೋಡಿ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಬಹುಭಾಷಾ ತಾರೆ ತ್ರಿಷಾ ಕೃಷ್ಣನ್‍ಗೆ ಅಂತೂ ತನ್ನ ಜೋಡಿ ಸಿಕ್ಕಿದಂತೆ ಕಾಣುತ್ತಿದೆ. ಹೌದು ಮಾರ್ಚ್‍ನಲ್ಲಿ ತಾನು ಮದುವೆ ಆಗಲಿದ್ದೇನೆ ಹೇಳಿಕೊಂಡಿದ್ದಾಳೆ ಎಂಬ ಸುದ್ದಿ ಚಿತ್ರರಂಗದಲ್ಲಿ ಹರಿದಾಡುತ್ತಿದೆ. ಯಾವುದೇ ಆಡಂಭರ ಇಲ್ಲದೆ ಬಹಳ ಸರಳವಾಗಿ ಮದುವೆ ಆಗುವುದಾಗಿ ತಿಳಿಸಿದ್ದಾಳೆಂದು ಹೇಳಲಾಗಿದೆ.

ಕೆಲ ದಿನಗಳ ಹಿಂದೆ ರಾಣಾ ದಗ್ಗುಬಾಟಿ ಜೊತೆಗೆ ಬ್ರೇಕ್ ಅಪ್ ಆಗಿ ಸುದ್ದಿಯಾಗಿದ್ದ ತ್ರಿಷಾ ಅಂತೂ ಮದುವೆಯ ಬಗ್ಗೆ ಒಂದು ನಿರ್ಧಾರಕ್ಕೆ ಬಂದಂತೆ ತೋರುತ್ತಿದ್ದು ಮಾರ್ಚ್‍ನಲ್ಲಿ ವಿವಾಹವಾಗಲಿದ್ದಾರಂತೆ. ತ್ರಿಶಾ 30ರ ಆಸುಪಾಸಲ್ಲಿರುವುದರಿಂದ ಈ ನಿರ್ಧಾರಕ್ಕೆ ಬಂದಿರಬಹುದು ಎಂದು ಹೇಳಲಾಗಿದೆ.

ಈ ಹಿಂದೆ ತ್ರಿಷಾ ಮತ್ತು ರಾಣಾ ಡೀಪ್ ಲವ್‍ನಲ್ಲಿ ಇದ್ದಿದ್ದು ಎಲ್ಲರಿಗು ಗೊತ್ತೇ ಇದ್ದು, ಬ್ರೇಕಪ್ ಬಳಿಕ ಚೆನೈನಲ್ಲಿ ಉದ್ಯಮಿಯೊಬ್ಬರ ಜೊತೆ ಡೇಟಿಂಗ್‍ನಲ್ಲಿ ಇದ್ದಾರೆ ಎಂದು ಹೇಳಲಾಗಿತ್ತು. ಇದಕ್ಕೆ ಪೂರವಾಗಿ ತ್ರಿಷಾ ಉದ್ಯಮಿ ವರುಣ್ ಮಣಿಯನ್ ಜೊತೆ ತಾಜ್ ಮಹಲ್ ಬಳಿ ಕಂಡುಬಂದಿದ್ದರು. ಆದರೆ ತ್ರಿಷಾ ಡೇಟಿಂಗ್ ವಿಚಾರವಮನ್ನು ನಿರಾಕರಿಸಿದ್ದಾರೆ. ಹಾಗಾದರೆ ತ್ರಿಷಾ ಯಾರನ್ನ ವರಿಸಲಿದ್ದಾರೆ ಎಂದು ತಿಳಿಯಲು ಮಾರ್ಚ್‍ವರೆಗೂ ಕಾಯಬೇಕಾಗುತ್ತದೆ.

Write A Comment