ಮನೋರಂಜನೆ

ವಿವಾದಗಳ ರಾಣಿ ಪೂನಂ ಪಾಂಡೆ ಈಗ ಮತ್ತೆ ಸುದ್ದಿಯಲ್ಲಿ

Pinterest LinkedIn Tumblr

poonam

ಹೈದರಾಬಾದ್: ವಿವಾದಗಳ ರಾಣಿ ಪೂನಂ ಪಾಂಡೆ ಈಗ ಮತ್ತೆ ತನ್ನ ಹೇಳಿಕೆಯಿಂದಾಗಿ ಹೊಸ ವರ್ಷದ ಆರಂಭದಲ್ಲೇ ಸುದ್ದಿಯಾಗಿದ್ದಾಳೆ. ಇನ್ನು ಮುಂದೆ ನಾನು ವಿವಾದ ಸೃಷ್ಟಿಸಿ ಸುದ್ದಿಯಾಗುವುದಿಲ್ಲ ಎಂದು ಹೇಳಿದ್ದಾಳೆ.

ಈ ಬಗ್ಗೆ ಮಾತನಾಡಿರುವ ಪೂನಂ, ಒಂದು ಹಂತದಲ್ಲಿ ನಾನು ವಿವಾದಕ್ಕೆ ಆದ್ಯತೆ ನೀಡುತ್ತಿದ್ದೆ. ಈಗ ತನಗೆ ತುಂಬಾ ಕೆಲಸಗಳು ಸಿಕ್ಕಿರುವ ಕಾರಣ, ನನಗೆ ಈಗ ಕಾಂಟ್ರವರ್ಸಿಯಾಗಿ ಏನು ಮಾಡುವ ಅಗತ್ಯವಿಲ್ಲ. ನಾನು ವಿವಾದಗಳ ಮೂಲಕ ಏನು ಮಾಡಬೇಕಿತ್ತು ಅದನ್ನು ಮಾಡಿದ್ದೇನೆ ಎಂದಿದ್ದಾಳೆ.

ಭಾರತ ವಿಶ್ವಕಪ್ ಕ್ರಿಕೆಟ್ ಗೆದ್ದರೆ ಬೆತ್ತಲಾಗುವುದಾಗಿ 2011 ರಲ್ಲಿ ಹೇಳಿಕೆ ನೀಡಿ ದೇಶದಲ್ಲಿ ಸಂಚಲನ ಮೂಡಿಸಿದ್ದ ರೂಪದರ್ಶಿ ಪೂನಂ, ತನ್ನ ವಿವಾದಿತ ಹೇಳಿಕೆಯಿಂದಲೇ ಬಾಲಿವುಡ್‍ಗೆ ಎಂಟ್ರಿ ಪಡೆದು ನಟಿಯಾದಳು. ತನ್ನದೇ ವೆಬ್‍ಸೈಟ್ ಪ್ರಾರಂಭಿಸಿ, ಬಾಲಿವುಡ್‍ನಲ್ಲಿ ‘ನಶಾ’ ಸಿನಿಮಾದ ಮೂಲಕ ನಶೆ ಏರಿಸಿದ ಪೂನಂ ಈಗ ತನಗೆ ‘ಕಾಂಟ್ರವರ್ಸಿ’ಯ ಅಗತ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾಳೆ.

ಚೊಚ್ಚಲ ತೆಲುಗು ಆಕ್ಷನ್ ಥ್ರಿಲ್ಲರ್ ‘ಮಾಲಿನಿ&ಕಂಪನಿ’ ಸಿನಿಮಾದಲ್ಲಿ ನಟಿಸುತ್ತಿರುವ ಪೂನಂ ಪಾಂಡೆ ಈ ಚಿತ್ರದ ಬಗ್ಗೆ ಮಾತನಾಡಿದ್ದಾಳೆ. ಈ ಚಿತ್ರದ ಪಾತ್ರ ವಿಶೇಷವಾಗಿದ್ದು, ಸಾಧನೆಯ ಆಧಾರಿತ ಪಾತ್ರವಾಗಿದೆ. ಈ ಸಿನಿಮಾದಲ್ಲಿ ತನ್ನನ್ನು ಬಿಕಿನಿಯಲ್ಲಿ ನೋಡಬಹುದು ಎಂದು ಹೇಳಿದ್ದಾಳೆ. ಜೊತೆಗೆ ಇನ್ನೂ ಹೆಚ್ಚು ಕ್ರಿಯಾಶೀಲ ಭಾವನೆಯನ್ನು ಈ ಸಿನಿಮಾದಲ್ಲಿ ನೋಡಬಹುದು ಎಂದು ಪೂನಂ ತಿಳಿಸಿದ್ದಾಳೆ. ಅಷ್ಟೇ ಅಲ್ಲದೇ ಈ ಚಿತ್ರವನ್ನು ಎಲ್ಲಾ ರೀತಿಯ ಪ್ರೇಕ್ಷಕರು ನೋಡಬಹುದು, ನಾನು ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ್ದೇನೆ ಎಂದು ತನ್ನ ಪಾತ್ರದ ಬಗ್ಗೆ ಪೂನಂ ಪಾಂಡೆ ಹೇಳಿದ್ದಾಳೆ.

ಈ ಸಿನಿಮಾವು ಭಯೋತ್ಪಾದನೆ ಮತ್ತು ರೋಮಾನ್ಸ್ ಮಿಶ್ರಿತವಾಗಿದ್ದು. ಸಿನಿಮಾವನ್ನು ವೀರು ಕೆ ನಿರ್ದೇಶಿಸಿದ್ದಾರೆ ಮತ್ತು ಮನಿಷಾ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮಹೇಶ್ ರಥಿ ನಿರ್ಮಾಣಮಾಡುತ್ತಿದ್ದಾರೆ.

ಈ ಸಿನಿಮಾವು ಮುಂದಿನ ತಿಂಗಳ ಕೊನೆಯಲ್ಲಿ ಬಿಡುಗಡೆಯಾಗಲಿದ್ದು, ಬ್ಯಾಂಕಾಕ್‍ನಲ್ಲಿ ಚಿತ್ರದ ಹಾಡುಗಳನ್ನು ಚಿತ್ರಿಸಲಾಗಿದೆ. ಈ ಚಿತ್ರವು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಅವಳ ಶಕ್ತಿ, ಸಾಮಥ್ರ್ಯವನ್ನು ತೋರಿಸುತ್ತದೆ ಎಂದು ನಿರ್ದೇಶಕ ಹೇಳಿದ್ದಾರೆ.

Write A Comment