ಮನೋರಂಜನೆ

5 ಲಕ್ಷ ದಾಟಿದ ಪ್ರಿಯಮಣಿ ಫಾಲೋಯರ್ಸ್‌

Pinterest LinkedIn Tumblr

priyamani_hot_bikiniಪ್ರಿಯಮಣಿ ಅನುಯಾಯಿಗಳ ಸಂಖ್ಯೆ 5 ಲಕ್ಷ ದಾಟಿದೆಯಂತೆ. ಬೆಂಗಳೂರು ಮೂಲದ ನಟಿ ಪ್ರಿಯಾಮಣಿ ದಕ್ಷಿಣ ಭಾರತದ ಫಿಲ್ಮ್ ಇಂಡಸ್ಟ್ರಿಯಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಸಾಕಷ್ಟು ಪ್ರಮುಖ ನಟರೊಂದಿಗೆ ಅಭಿನಯಿಸಿದ್ದಾರೆ. ರಾವಣ ಚಿತ್ರದಲ್ಲಿ ಅಭಿಷೇಕ್ ಬಚ್ಚನ್‌ರ ತಂಗಿ ಪ್ರಾತದಲ್ಲಿ ಕಾಣಿಸಿಕೊಂಡಿದ್ದರು. ಶಾರುಖ್ ಖಾನ್‌ರ ಚೆನ್ನೈ ಎಕ್ಸ್‌ಪ್ರೆಸ್ ಚಿತ್ರದಲ್ಲಿ ಐಟಂ ಸಾಂಗ್‌ಗೆ ಸ್ಟೆಪ್ ಹಾಕಿದ್ದರು.

ಹೀಗಾಗಿ ತಮ್ಮ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಪ್ರಿಯಮಣಿ ತಮ್ಮ ಟ್ವಿಟ್ಟರ್ ಅಕೌಂಟ್ ಓಪನ್ ಮಾಡಿದಾಗ, ತಮ್ಮ ಅಭಿಮಾನಿಗಳ ಸಂಖ್ಯೆ 5 ಲಕ್ಷ ದಾಟಿರುವುದು ಗಮನಕ್ಕೆ ಬಂತಂತೆ. ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಪ್ರಿಯಮಣಿ, ‘ಓ ಮೈ ಗಾಡ್! 5 ಲಕ್ಷ ಫಾಲೋಯರ್ಸ್‌… ನಿಮಗೆಲ್ಲ ಧನ್ಯವಾದ. ಹಾರ್ಡ್‌ವರ್ಕ್ ಮಾಡುತ್ತೇನೆ ಮತ್ತು ನಿಮಗೆಲ್ಲ ಮನರಂಜನೆ ನೀಡುವುದನ್ನು ಮುಂದುವರಿಸುತ್ತೇನೆ… ಲವ್ ಯು ಆಲ್’ ಎಂದು ಟ್ವೀಟ್ ಮಾಡಿದ್ದಾರೆ.

Write A Comment