ಮನೋರಂಜನೆ

ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಷಿಪ್: ಪ್ರಶಸ್ತಿ ಉಳಿಸಿಕೊಂಡ ಅಭಿನವ್ ಬಿಂದ್ರಾ

Pinterest LinkedIn Tumblr

abhi

ಪುಣೆ, ಡಿ.22: ಇದೀಗ ಭಾರತದ ಹವ್ಯಾಸಿ ಶೂಟರ್ ಆಗಿರುವ ಅಭಿನವ್ ಬಿಂದ್ರಾ 58ನೆ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನು ಉಳಿಸಿಕೊಂಡಿದ್ದಾರೆ.

2014ರ ಏಷ್ಯನ್ ಗೇಮ್ಸ್ ಆರಂಭಕ್ಕೆ ಮೊದಲೇ ವೃತ್ತಿಪರ ಶೂಟಿಂಗ್‌ಗೆ ವಿದಾಯ ಘೋಷಿಸಿದ್ದ ಬಿಂದ್ರಾ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದ ಭಾರತದ ಏಕೈಕ ಶೂಟರ್ ಆಗಿದ್ದಾರೆ. ಇಲ್ಲಿನ ಬಾಲೆವಾಡಿ ಶೂಟಿಂಗ್ ರೇಂಜ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ 32ರ ಹರೆಯದ ಬಿಂದ್ರಾ ಅವರು ಒಟ್ಟು 208 ಅಂಕವನ್ನು ಗಳಿಸಿ ಪ್ರಶಸ್ತಿಯನ್ನು ತನ್ನಲ್ಲೆ ಉಳಿಸಿಕೊಂಡರು.

ಆರ್ಮಿ ಶೂಟರ್ ಸತ್ಯೇಂದ್ರ ಸಿಂಗ್(207.2) ಎರಡನೆ ಹಾಗೂ ಹರ್ಯಾಣದ ಸಂಜೀವ್ ರಾಜ್‌ಪೂತ್(185) ಮೂರನೆ ಸ್ಥಾನವನ್ನು ಪಡೆದುಕೊಂಡರು. ಟೀಮ್ ಇವೆಂಟ್‌ನಲ್ಲಿ ಆರ್ಮಿಯ ಶೂಟರ್‌ಗಳಾದ ಸತ್ಯೇಂದ್ರ ಸಿಂಗ್, ಚೈನ್ ಸಿಂಗ್ ಹಾಗೂ ಚಾವಂಕೆ ಅಶೋಕ್ ಚಿನ್ನದ ಪದಕವನ್ನು ಜಯಿಸಿದ್ದಾರೆ. 25 ಮೀ. ಸ್ಟಾಂಡರ್ಡ್ ಪಿಸ್ತೂಲ್ ವಿಭಾಗದಲ್ಲಿ ಒಲಿಂಪಿಯನ್ ವಿಜಯ್‌ಕುಮಾರ್ ಒಟ್ಟು 571 ಅಂಕ ಗಳಿಸಿ ಹೊಸ ರಾಷ್ಟ್ರೀಯ ಚಾಂಪಿಯನ್ ಎನಿಸಿಕೊಂಡರು. ಗುರುಪ್ರೀತ್ ಸಿಂಗ್(570 ಅಂಕ) ಬೆಳ್ಳಿ ಹಾಗೂ ಓಂಕಾರ್ ಸಿಂಗ್(568) ಕಂಚಿನ ಪದಕವನ್ನು ಜಯಿಸಿದ್ದಾರೆ.

Write A Comment