ಕರ್ನಾಟಕ

ಹೆಲ್ಮೆಟ್ ಕಡ್ಡಾಯಕ್ಕೆ ಸರ್ಕಾರದ ಪ್ರಸ್ತಾವ: ಎಲ್ಲ ನಗರ, ಪಟ್ಟಣಗಳಿಗೆ ಅನ್ವಯ

Pinterest LinkedIn Tumblr

hele

ಬೆಂಗಳೂರು: ರಾಜ್ಯದ ಎಲ್ಲ ನಗರ ಮತ್ತು ಪಟ್ಟಣಗಳ ವ್ಯಾಪ್ತಿಯಲ್ಲಿ ಬೈಕ್ ಸವಾರ­ರಿಗೆ ಹೆಲ್ಮೆಟ್‌ ಕಡ್ಡಾಯ­ಗೊಳಿ­ಸಲು ಸಾರಿಗೆ ಇಲಾಖೆ ಮುಂದಾಗಿದೆ. ಹೆದ್ದಾರಿಗಳ ಸಂಚಾರಕ್ಕೂ ಹೆಲ್ಮೆಟ್ ಕಡ್ಡಾಯಗೊಳಿಸುವ ಪ್ರಸ್ತಾವವಿದೆ.

ನಗರ ಮತ್ತು ಪಟ್ಟಣಗಳ ವ್ಯಾಪ್ತಿ­ಯಲ್ಲಿ ಬೈಕ್‌ ಸವಾರರು ತಲೆಗೆ ಪೆಟ್ಟು ಬಿದ್ದು ಸಾವಿಗೀಡಾಗುವ ಪ್ರಕರಣಗಳು ಹೆಚ್ಚುತ್ತಿವೆ. ಅವುಗಳನ್ನು ನಿಯಂತ್ರಿಸಲು ಹೆಲ್ಮೆಟ್‌ ಕಡ್ಡಾಯಗೊಳಿಸುವ ಬಗ್ಗೆ ಯೋಚಿಸುವಂತೆ ಪ್ರಕರಣವೊಂದರಲ್ಲಿ ಹೈಕೋರ್ಟ್‌ ನಿರ್ದೇಶನ ನೀಡಿತ್ತು. ಅದನ್ನು ಆಧರಿಸಿ ಈ ಪ್ರಸ್ತಾವ ರೂಪಿಸಲಾಗಿದೆ.

ಹೈಕೋರ್ಟ್ ನಿರ್ದೇಶನದಂತೆ ಹೆಲ್ಮೆಟ್‌ ಕಡ್ಡಾಯಗೊಳಿಸುವ ಬಗ್ಗೆ ಸಾರಿಗೆ ಆಯುಕ್ತ ಡಾ.­ರಾಮೇ­ಗೌಡ  ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ರವಿ­ಕುಮಾರ್ ಅವರಿಗೆ ಇತ್ತೀಚೆಗೆ ಸಲ್ಲಿಸಿದ್ದಾರೆ. ಸಂಪುಟದ ಒಪ್ಪಿಗೆ ಬಳಿಕ ಆದೇಶ ಹೊರಬೀಳುವ ಸಾಧ್ಯತೆ ಇದೆ.
ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಸಾರಿಗೆ ಆಯುಕ್ತರು, ‘ಬೈಕ್‌ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿರಬೇಕೆಂಬ ಆದೇಶ 9 ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಜಾರಿಯಲ್ಲಿದೆ. ಅದನ್ನು ಎಲ್ಲ ನಗರ ಮತ್ತು ಪಟ್ಟಣ­ಗಳಿಗೆ ವಿಸ್ತರಿಸು­ವಂತೆ ಕೋರ­ಲಾಗಿದೆ’ ಎಂದರು.

ನಗರ, ಪಟ್ಟಣಗಳಿಗೆ ಹೊಂದಿ­ಕೊಂಡಿರುವ ಹೆದ್ದಾರಿಗಳಲ್ಲೂ ತಲೆಗೆ ಪೆಟ್ಟಾಗಿ ಬೈಕ್ ಸವಾರರು ಸಾವಿಗೀಡಾ­ಗುವ ಪ್ರಕರಣಗಳು ಹೆಚ್ಚುತ್ತಿವೆ. ಆದ್ದ­ರಿಂದ ಹೆದ್ದಾರಿಗಳಲ್ಲಿ ಬೈಕ್‌ ಓಡಿಸುವ­ವರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿರಬೇಕೆಂಬ ಆದೇಶ ಹೊರಡಿಸಲು ಕೋರಲಾಗುವುದು ಎಂದು ತಿಳಿಸಿದರು.

Write A Comment