ಮನೋರಂಜನೆ

ಶಾರುಖ್ ನಾಯಕಿಯಾಗಿ ಪಾಕ್ ನಟಿ ಮಹಿರಾ ಖಾನ್!

Pinterest LinkedIn Tumblr

Srk-Mahira1

ಮುಂಬೈ: ಶಾರುಖ್ ಖಾನ್‌ನ ಮುಂದಿನ ಚಿತ್ರ ‘ರಯೀಸ್‌’ ಗೆ ನಾಯಕಿ ಯಾರು? ಎಂಬ ಪ್ರಶ್ನೆ ಇದೀಗ ಉತ್ತರ ಸಿಕ್ಕಿದೆ. ಇಲ್ಲಿಯವರೆಗೆ ಪ್ರಸ್ತುತ ಚಿತ್ರದಲ್ಲಿ ಕಿಂಗ್ ಖಾನ್ ಜತೆ ಸೋನಂ ಕಪೂರ್ ಅಥವಾ ಕೃತಿ ಸನೋನ್ ನಾಯಕಿಯಾಗಿ ನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿ ಕೇಳಿ ಬಂದಿತ್ತು. ಆದರೆ ಈಗ ಪಾಕಿಸ್ತಾನದ ಚೆಲುವೆ ಮಹಿರಾ ಖಾನ್‌ಳಿಗೆ ಶಾರುಖ್ ನಾಯಕಿಯಾಗುವ ಅವಕಾಶ ದಕ್ಕಿದೆ.

ಫರ್ಹಾನ್ ಅಖ್ತರ್ ಮತ್ತು ರಿತೇಶ್ ಸಿದ್ವಾನಿ ಅವರ ನಿರ್ಮಾಣ ಸಂಸ್ಥೆಯ ಚಿತ್ರವಾದ ‘ರಯೀಸ್‌’ನ್ನು ರಾಹುಲ್ ಧೋಲಾಕಿಯಾ ನಿರ್ದೇಶಿಸುತ್ತಿದ್ದಾರೆ. ಕಳ್ಳಭಟ್ಟಿ ತಯಾರಿಸುತ್ತಿರುವ ಗುಜರಾತಿಯೊಬ್ಬನ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ಫರ್ಹಾನ್ ಕೂಡಾ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಆ ಪಾತ್ರವನ್ನು ನವಾಜುದ್ದೀನ್ ಸಿದ್ದಿಖಿ ಅವರು ನಿರ್ವಹಿಸಲಿದ್ದಾರೆ.

ಪಾಕಿಸ್ತಾನದಲ್ಲಿ ವಿಜೆ ಕೂಡಾ ಆಗಿರುವ ಮಹಿರಾ, ಈ ಹಿಂದೆ ಬೋಲ್ ಚಿತ್ರದಲ್ಲಿ ನಟಿಸಿದ್ದರು. ಅನಂತರ ‘ಹಮ್‌ಸಫರ್’ ಎಂಬ ಹಿಂದಿ ಧಾರವಾಹಿಯಲ್ಲಿ ನಟಿಸುವ ಮೂಲಕ ಜನ ಮನ್ನಣೆ ಗಳಿಸಿದ್ದರು.

ಮುಂದಿನ ವರ್ಷ ಫೆಬ್ರವರಿ ‘ರಯೀಸ್’ ಚಿತ್ರದ ಶೂಟಿಂಗ್ ಆರಂಭವಾಗಲಿದ್ದು, ಶಾರುಖ್ ಮತ್ತು ಮಹಿರಾ ಜೋಡಿ ತೆರೆಯ ಮೇಲೆ ಯಾವ ರೀತಿ ಮೋಡಿ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Write A Comment